ಮೈಸೂರು ಜಿಲ್ಲೆಯಲ್ಲಿ ಕೊರೊನಾ ಇಳಿಮುಖ ಶನಿವಾರ ೪೪ ಮಂದಿಗೆ ಸೋಂಕು
ಮೈಸೂರು

ಮೈಸೂರು ಜಿಲ್ಲೆಯಲ್ಲಿ ಕೊರೊನಾ ಇಳಿಮುಖ ಶನಿವಾರ ೪೪ ಮಂದಿಗೆ ಸೋಂಕು

October 3, 2021

ಮೈಸೂರು, ಅ.೨(ವೈಡಿಎಸ್)-ಮೈಸೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಶನಿವಾರ ೪೪ ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸಾವಿನ ಬಗ್ಗೆ ವರದಿಯಾಗಿಲ್ಲ. ಇದೇ ವೇಳೆ ೧೨೮ ಮಂದಿ ಗುಣಮುಖರಾಗಿದ್ದು, ಇದುವರೆಗೆ ಜಿಲ್ಲೆಯಲ್ಲಿ ಒಟ್ಟು ೧,೭೫,೧೨೭ ಮಂದಿ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು ೧,೭೮,೦೬೨ ಮಂದಿಗೆ ಸೋಂಕು ತಗುಲಿದ್ದು, ಇದುವರೆಗೆ ೨,೩೮೯ ಮಂದಿ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಇನ್ನು ೫೪೬ ಸಕ್ರಿಯ ಪ್ರಕರಣಗಳಿವೆ.
ರಾಜ್ಯ: ಬಳ್ಳಾರಿ ೨, ಬೆಳಗಾವಿ ೧೦, ಬೆಂಗಳೂರು ಗ್ರಾಮಾಂತರ ೧೮, ಬೆಂಗಳೂರು ನಗರ ೨೪೫, ಚಾಮ ರಾಜನಗರ ೬, ಚಿಕ್ಕಬಳ್ಳಾಪುರ ೧, ಚಿಕ್ಕಮಗಳೂರು ೨೦, ಚಿತ್ರದುರ್ಗ ೪, ದಕ್ಷಿಣಕನ್ನಡ ೧೦೦, ದಾವಣ ಗೆರೆ ೨, ಧಾರವಾಡ ೩, ಹಾಸನ ೪೪, ಹಾವೇರಿ ೧, ಕೊಡಗು ೨೮, ಕೋಲಾರ ೭, ಕೊಪ್ಪಳ ೩, ಮಂಡ್ಯ ೧೩, ಮೈಸೂರು ೪೪, ರಾಯಚೂರು ೧, ರಾಮನಗರ ೨, ಶಿವಮೊಗ್ಗ ೨೨, ತುಮಕೂರು ೩೦, ಉಡುಪಿ ೨೫, ಉತ್ತರಕನ್ನಡ ೧೪, ವಿಜಯಪುರ ೧ ಸೇರಿ ರಾಜ್ಯದಲ್ಲಿ ಶನಿವಾರ ೬೩೬ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಬಾಗಲಕೋಟೆ, ಬೀದರ್, ಗದಗ್, ಕಲಬುರಗಿ, ಯಾದಗಿರಿ ಜಿಲ್ಲೆಯಲ್ಲಿ ಶನಿವಾರ ಒಂದೂ ಪ್ರಕರಣ ವರದಿಯಾಗಿಲ್ಲ. ರಾಜ್ಯ ದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ೨೯,೭೭,೨೨೫ಕ್ಕೆ ಏರಿಕೆಯಾಗಿದೆ. ಇಂದು ಗುಣಮುಖ ರಾದ ೭೪೫ ಮಂದಿ ಸೇರಿ ಇದುವರೆಗೆ ಒಟ್ಟು ೨೯,೨೭,೦೨೯ ಸೋಂಕಿತರು ಗುಣ ಕಂಡಿದ್ದಾರೆ. ಶನಿವಾರ ರಾಜ್ಯದಲ್ಲಿ ೪ ಸೋಂಕಿತರು ಮೃತಪಟ್ಟಿದ್ದು, ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ ೩೭,೮೧೧ಕ್ಕೆ ಏರಿಕೆಯಾಗಿದೆ. ಪ್ರಸ್ತುತ ೧೨,೩೫೬ ಸಕ್ರಿಯ ಪ್ರಕರಣಗಳಿವೆ.

Translate »