ಕೊನೆಗೂ 1 ರೂ. ದಂಡ ಕಟ್ಟಿದ ವಕೀಲ ಪ್ರಶಾಂತ್ ಭೂಷಣ್
ಮೈಸೂರು

ಕೊನೆಗೂ 1 ರೂ. ದಂಡ ಕಟ್ಟಿದ ವಕೀಲ ಪ್ರಶಾಂತ್ ಭೂಷಣ್

September 15, 2020

ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕ ರಣದಲ್ಲಿ ತಪ್ಪಿತಸ್ಥ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು ಸರಿಯಲ್ಲ ಎಂದು ವಾದಿಸುತ್ತಾ ಬಂದಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್, ಕೊನೆಗೂ ಕೋರ್ಟ್ ತೀರ್ಪಿನಂತೆ 1 ರೂ. ದಂಡ ಪಾವತಿ ಮಾಡಿದ್ದಾರೆ. ಆದರೆ ತಮ್ಮನ್ನು ತಪ್ಪಿತಸ್ಥರು ಎಂದು ತೀರ್ಪಿತ್ತ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ವಿಸ್ಕೃತ ಪೀಠಕ್ಕೆ ಮನವಿ ಸಲ್ಲಿಸಲು ಬಯಸಿರುವ ಭೂಷಣ್, ಕಳೆದ ಶನಿವಾರ, ಇದಕ್ಕೆ ಅನು ಮತಿ ನೀಡುವಂತೆ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಪ್ರಕರಣ ವಿಚಾ ರಣೆಯನ್ನು ವಿಸ್ಕೃತ ಪೀಠದಲ್ಲಿನ ಬೇರೆ ನ್ಯಾಯಮೂರ್ತಿಗಳು ನಡೆಸಲು ಅವಕಾಶ ನೀಡಬೇಕು ಎಂದು ಅರ್ಜಿಯಲ್ಲಿ ಕೋರಿ ದ್ದಾರೆ. ಇವರ ಮನವಿಗೆ ಸಂಬಂಧಿಸಿದ ಅರ್ಜಿ ಇನ್ನೂ ಇತ್ಯರ್ಥಕ್ಕೆ ಬಾಕಿ ಇದೆ. ತಾವು ದಂಡದ ಹಣ ನೀಡಿರುವ ಹಾಗೂ ಸುಪ್ರೀಂಕೋರ್ಟ್‍ಗೆ ಪುನಃ ಅರ್ಜಿ ಸಲ್ಲಿಸಿ ರುವ ಕುರಿತಂತೆ ಸ್ಪಷ್ಟನೆ ನೀಡಿರುವ ಅವರು, ನಾನು ದಂಡದ ಹಣವನ್ನು ಪಾವತಿ ಮಾಡಿ ದ್ದೇನೆ ಎಂದರೆ ಇದರರ್ಥ ನಾನು ನ್ಯಾಯಾ ಲಯದ ತೀರ್ಪನ್ನು ಸ್ವೀಕರಿಸಿದ್ದೇನೆ ಎಂದಲ್ಲ. ಸುಪ್ರೀಂಕೋರ್ಟ್‍ನ ತೀರ್ಪಿನಂತೆ ಈ ಹಣವನ್ನು ಜಮಾ ಮಾಡಿದ್ದೇನಷ್ಟೇ. ಆದರೆ ತಮ್ಮ ಕೇಸನ್ನು ಬೇರೆ ಪೀಠಕ್ಕೆ ವರ್ಗಾಯಿ ಸಲು ಅನುಮತಿ ಕೋರಿ ಇದಾಗಲೇ ಅರ್ಜಿ ಸಲ್ಲಿಸಿದ್ದೇನೆ. ಜತೆಗೆ ಈ ತೀರ್ಪಿನ ವಿರುದ್ಧ ಪುನರ್ ಪರಿಶೀಲನಾ ಅರ್ಜಿಯನ್ನೂ ಸಲ್ಲಿಸುತ್ತಿದ್ದೇನೆ ಎಂದಿದ್ದಾರೆ.

Translate »