ರಾಜ್ಯದಲ್ಲಿ ವೈದ್ಯರ ಅಸಹಕಾರ ಚಳುವಳಿ ಆರಂಭ
ಮೈಸೂರು

ರಾಜ್ಯದಲ್ಲಿ ವೈದ್ಯರ ಅಸಹಕಾರ ಚಳುವಳಿ ಆರಂಭ

September 15, 2020

ಮೈಸೂರು, ಸೆ.14(ಆರ್‍ಕೆ)- ಗುತ್ತಿಗೆ ಆಧಾ ರದ ವೈದ್ಯರ ಸೇವೆ ಖಾಯಂ, ವೇತನ ತಾರತಮ್ಯ ನಿವಾರಣೆ, ಸುರಕ್ಷತಾ ಕ್ರಮ ಸೇರಿದಂತೆ ತಮ್ಮ ಬಾಕಿ ಇರುವ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯದಾದ್ಯಂತ ಸರ್ಕಾರಿ ವೈದ್ಯರು ಇಂದಿ ನಿಂದ ಅಸಹಕಾರ ಚಳುವಳಿ ಆರಂಭಿಸಿದ್ದಾರೆ.

ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ (KGMOA)ದ ನಿರ್ಧಾರ ಹಾಗೂ ಕರೆಯ ಮೇರೆಗೆ ಕೋವಿಡ್-19 ಹಾಗೂ ನಾನ್ ಕೋವಿಡ್ ಸಂಬಂಧ ಮಾಹಿತಿ ಹಾಗೂ ಪರೀಕ್ಷಾ ವರದಿಯನ್ನು ಸರ್ಕಾ ರಕ್ಕೆ ನೀಡದೇ ಅಸಹಕಾರ ಚಳುವಳಿಗೆ ವೈದ್ಯರು ಮುಂದಾಗಿದ್ದಾರೆ. ಇಂದಿನಿಂದ ಎಷ್ಟು ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಮಾಡ ಲಾಯಿತು, ಎಷ್ಟು ಮಂದಿಗೆ ಪಾಸಿಟಿವ್ ಬಂದಿದೆ, ಎಷ್ಟು ಮಂದಿ ಸೋಂಕಿತರು ಸಾವನ್ನಪ್ಪಿದರು, ಎಷ್ಟು ಮಂದಿ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂಬಿ ತ್ಯಾದಿ ಮಾಹಿತಿ, ವರದಿಯನ್ನು ವೈದ್ಯರು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಸಲ್ಲಿ ಸುವುದಿಲ್ಲ ಎಂದು ಭಾರತೀಯ ವೈದ್ಯ ಕೀಯ ಸಂಘ (ಐಎಂಎ) ಮೈಸೂರು ಶಾಖೆ ಅಧ್ಯಕ್ಷ ಡಾ. ಸುರೇಶ್ ರುದ್ರಪ್ಪ ಅವರು ‘ಮೈಸೂರು ಮಿತ್ರ’ನಿಗೆ ತಿಳಿಸಿದರು. ಎಲ್ಲಾ ವೈದ್ಯಕೀಯ ಸೇವೆಗಳನ್ನೂ ಮುಂದು ವರೆಸುತ್ತೇವೆ, ರೋಗಿಗಳಿಗೆ ತೊಂದರೆ ಯಾಗುವುದಿಲ್ಲ. ಆದರೆ, ಕೋವಿಡ್ ಸೇರಿ ದಂತೆ ಯಾವುದೇ ವರದಿಯನ್ನು ಮಾತ್ರ ಸರ್ಕಾರಕ್ಕೆ ನೀಡುವುದಿಲ್ಲ. ಸೆಪ್ಟೆಂಬರ್ 20 ರವರೆಗೆ ನಮ್ಮ ಬೇಡಿಕೆಗಳನ್ನು ಈಡೇರಿಸ ದಿದ್ದಲ್ಲಿ ಸೆ.21ರಂದು ರಾಜ್ಯದಾದ್ಯಂತ ಎಲ್ಲಾ ವೈದ್ಯರೂ, ಬೆಂಗಳೂರು ಚಲೋ ನಡೆಸಿ ಆನಂದರಾವ್ ಸರ್ಕಲ್‍ನಲ್ಲಿ ಬೃಹತ್ ಪ್ರತಿಭಟನೆ ಮಾಡುವುದಾಗಿ ಡಾ.ಸುರೇಶ್‍ರುದ್ರಪ್ಪ ಎಚ್ಚರಿಕೆ ನೀಡಿದ್ದಾರೆ.

ಮೂರು ವರ್ಷ ಗುತ್ತಿಗೆ ಅವಧಿ ಪೂರ್ಣ ಗೊಳಿಸಿರುವ ವೈದ್ಯರ ಸೇವೆಯನ್ನು ಖಾಯಂ ಮಾಡಬೇಕು, ಎಐಸಿಟಿಇ (All India Council for Technical Education) ಮಾರ್ಗಸೂಚಿಯಂತೆ ಇಂಜಿನಿಯ ರಿಂಗ್ ಕಾಲೇಜು ಪ್ರಾಧ್ಯಾಪಕರಿಗೆ ನೀಡು ತ್ತಿರುವಂತೆಯೇ ವೈದ್ಯರಿಗೂ ಸಂಬಳ ನಿಗದಿ ಪಡಿಸುವ ಮೂಲಕ ವೇತನ ತಾರತಮ್ಯ ನಿವಾರಿಸಬೇಕು, ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಇತರೆಡೆ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು ಹಾಗೂ ಸಿಬ್ಬಂದಿ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂಬುದೂ ಸೇರಿದಂತೆ ನಮ್ಮ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸುತ್ತಿದ್ದರೂ ಸರ್ಕಾರ ಸ್ಪಂದಿಸದಿರುವುದರಿಂದ ಅಸಹ ಕಾರ ಚಳುವಳಿ ಆರಂಭಿಸಿದ್ದೇವೆ ಎಂದರು.

ಈಗ ನಾವು ಸಾಮಾನ್ಯ, ತುರ್ತು, ಕೋವಿಡ್ ಸೇವೆಗಳನ್ನು ನೀಡುತ್ತೇವೆ. ಆದರೆ, ಸೆ.21 ರಿಂದ ಕೇವಲ ತುರ್ತು ವೈದ್ಯಕೀಯ ಸೇವೆ ಹೊರತುಪಡಿಸಿ ಉಳಿದಂತೆ ಎಲ್ಲಾ ಹೊರ ರೋಗಿ ವಿಭಾಗವನ್ನು ಬಂದ್ ಮಾಡಿ ಸಂಪೂರ್ಣ ಮುಷ್ಕರ ಮಾಡುತ್ತೇವೆ ಎಂದು ಡಾ. ಸುರೇಶ್ ರುದ್ರಪ್ಪ ನುಡಿದರು. ಇಂದು ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ವೈದ್ಯಾಧಿಕಾರಿಗಳು, ಲಿಖಿತ ರೂಪದ ಮನವಿ ಸಲ್ಲಿಸಿದರು. ಸೆ.20ರವರೆಗೆ ಬೇಡಿಕೆ ಈಡೇರಿಸದಿದ್ದಲ್ಲಿ ಸೆ.21ರಿಂದ ಮುಷ್ಕರ ಹೂಡುವುದಾಗಿ ತಿಳಿಸಿದರು.

ಮನವಿ ಪತ್ರ ಸ್ವೀಕರಿಸಿದ ಜಿಲ್ಲಾಧಿಕಾರಿ ಬಿ.ಶರತ್ ಅವರು, ಮನವಿ ಪತ್ರವನ್ನು ಸರ್ಕಾರಕ್ಕೆ ಕಳುಹಿಸುತ್ತೇವೆ. ಅಲ್ಲಿಂದ ಯಾವುದೇ ನಿರ್ದೇಶನ ಬಂದರೂ ನಿಮಗೆ ತಲುಪಿಸುತ್ತೇವೆ ಎಂದು ತಿಳಿಸಿದರು.

ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಹೋರಾಟಕ್ಕೆ ಭಾರತೀಯ ವೈದ್ಯ ಕೀಯ ಸಂಘ, ಮಾ ಅಸೋಸಿಯೇಷನ್ ಸೇರಿದಂತೆ ಎಲ್ಲಾ ವೈದ್ಯಕೀಯ ಸಂಘಗಳೂ ಮುಷ್ಕರಕ್ಕೆ ಬೆಂಬಲ ನೀಡಿವೆ ಎಂದು ತಿಳಿಸಿದರು. ಪರಿಣಾಮ ಕೋವಿಡ್ ಸಂಬಂ ಧಿಸಿದ ಮಾಹಿತಿಯು ಆರೋಗ್ಯ ಇಲಾಖೆ ಅಥವಾ ಜಿಲ್ಲಾಡಳಿತದ ವತಿಯಿಂದ ಬಿಡುಗಡೆ ಮಾಡುತ್ತಿರುವ ಹೆಲ್ತ್ ಬುಲೇ ಟಿನ್‍ನಲ್ಲಿ ಇಂದಿನಿಂದ ಯಾವುದೇ ಮಾಹಿ ತಿಯು ಪ್ರಕಟವಾಗುವುದಿಲ್ಲ ಎಂದು ಡಾ. ಸುರೇಶ್ ರುದ್ರಪ್ಪ ತಿಳಿಸಿದರು.

 

 

Translate »