ಶ್ರವಣಬೆಳಗೊಳ: ಹೈನುಗಾರಿಕೆ ಯಿಂದ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ಜತೆಗೆ ಅಗತ್ಯ ಸಾವಯವ ಗೊಬ್ಬರ ಪಡೆದು ಕೃಷಿಯಲ್ಲೂ ಸ್ವಾವ ಲಂಬನೆ ಸಾಧಿಸಬಹುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಹೋಬಳಿ ಕಾಂತರಾಜಪುರ ಗ್ರಾಪಂ ವ್ಯಾಪ್ತಿಯ ಉತ್ತೇನಹಳ್ಳಿಯಲ್ಲಿ 9.5 ಲಕ್ಷ ರೂ. ವೆಚ್ಚದ ನೂತನ ಹಾಲು ಉತ್ಪಾದ ಕರ ಕೇಂದ್ರದ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಕೃಷಿ ಯೊಂದಿಗೆ ಉಪಕಸುಬಾಗಿ ಹೈನುಗಾರಿಕೆ ಯಲ್ಲಿ ರೈತರು ಹೆಚ್ಚಾಗಿ ತೊಡಗಿಸಿಕೊಳ್ಳು ವುದರಿಂದ ಆರ್ಥಿಕವಾಗಿ ಸ್ವಾವಲಂಬನೆ ಬದುಕು ನಡೆಸಬಹುದು ಎಂದು ತಿಳಿಸಿದರು.
ಈ ಭಾಗದ ರೈತರಿಂದ ಪ್ರತಿನಿತ್ಯ 900 ಲೀ. ಹಾಲು ಉತ್ಪಾದನೆಯಾಗುತ್ತಿದ್ದು, 4 ಲಕ್ಷ ರೂ. ಲಾಭ ಗಳಿಸಿ ಮಾದರಿ ಹಾಲು ಉತ್ಪಾದಕರ ಕೇಂದ್ರವಾಗಿದೆ. ಈ ಭಾಗ ದಲ್ಲಿ ಹಾಲು ಉತ್ಪಾದಕರ ಕೇಂದ್ರಗಳು ಲಾಭದಾಯಕವಾಗಿ ನಡೆಯುತ್ತಿದ್ದು, ಕೇಂದ್ರದ ಮೇಲ್ವಿಚಾರಣೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದರೆ ರೈತರ ಆರೋಗ್ಯ ವೂ ಉತ್ತಮವಾಗಿರುತ್ತದೆ ಎಂದರು.
ಹಿರಿಸಾವೆ-ಮತಿಘಟ್ಟ ಏತನೀರಾವರಿ ಯೋಜನೆ ಮೂಲಕ ಶ್ರವಣಬೆಳಗೊಳ ಹೋಬಳಿಯ 5 ಗ್ರಾಮಗಳ ಕೆರೆಗಳಿಗೆ ಮೊದಲ ಹಂತದಲ್ಲಿ ನೀರು ತುಂಬಿಸ ಲಾಗುವುದು ಹಾಗೂ ಜಲಧಾರೆ ಯೋಜನೆ ಯಡಿಯಲ್ಲಿ ಹೆಚ್ಚಿನ ನೀರಿನ ಬಳಕೆಗೆ ಆದ್ಯತೆ ನೀಡಲಾಗುವುದು ಎಂದು ಇದೇ ವೇಳೆ ಭರವಸೆ ನೀಡಿದರು.
ಕಾಂತರಾಜಪುರ ನ್ಯಾಯಬೆಲೆ ಅಂಗಡಿ ಯಿಂದ ಉತ್ತೇನಹಳ್ಳಿ, ಜಿನ್ನೇನಹಳ್ಳಿ, ಗೊಮ್ಮಟನಗರ ನಿವಾಸಿಗಳಿಗೆ ವಿತರಣೆ ಯಾಗುತ್ತಿದ್ದ ಪಡಿತರವನ್ನು ಇನ್ನು ಮುಂದೆ ಜಿನ್ನೇನಹಳ್ಳಿಯಲ್ಲಿಯೇ ವಿತರಿಸಲು ಸಾಂಕೇತಿಕವಾಗಿ ಉಪ ವಿತರಣಾ ಕೇಂದ್ರ ತೆರೆದು ವಿತರಿಸುವ ಮೂಲಕ ಶಾಸಕರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಪರಮಕೃಷ್ಣೇಗೌಡ, ಕಬ್ಬಾಳು ರಮೇಶ್, ಮಂಜಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ರಾಜಪ್ಪ, ಸದಸ್ಯ ಜೆ.ಎನ್.ಮಧುಸೂದನ್, ಕಾರ್ಯದರ್ಶಿ ಪ್ರಮಿಳಾ, ಕೆಎಂಎಫ್‍ನ ದಯಾನಂದ್, ಯೋಗೇಶ್, ಮಂಜುಶ್ರೀ, ಪುಟ್ಟಸ್ವಾಮಿ, ಧನಂಜಯ ಉಪಸ್ಥಿತರಿದ್ದರು.