4 ಕೋಟಿ ರೂ. ವೆಚ್ಚದಲ್ಲಿ  ಬೇಲೂರು ಕ್ರೀಡಾಂಗಣ ಅಭಿವೃದ್ಧಿ
ಹಾಸನ

4 ಕೋಟಿ ರೂ. ವೆಚ್ಚದಲ್ಲಿ  ಬೇಲೂರು ಕ್ರೀಡಾಂಗಣ ಅಭಿವೃದ್ಧಿ

October 17, 2018

ಬೇಲೂರು: ಪಟ್ಟಣದ ಹೊರ ವಲಯದ ಹನುಮಂತನಗರ ಬಳಿ ಇರುವ ಕ್ರೀಡಾಂಗಣದ ಹೆಚ್ಚುವರಿ ಅಭಿವೃದ್ಧಿ ಕಾಮ ಗಾರಿಗೆ 4 ಕೋಟಿ ರೂ. ಬಿಡುಗಡೆ ಆಗಿದೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.

ಇಲ್ಲಿನ ಸರ್ವೋದಯ ವಿದ್ಯಾಸಂಸ್ಥೆ ಆವರಣದಲ್ಲಿ ಏರ್ಪಡಿಸಿದ್ದ ಮೈಸೂರು ವಿಭಾಗಮಟ್ಟದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಥ್ರೋ ಬಾಲ್ ಕ್ರೀಡಾ ಕೂಟ ಉದ್ಘಾಟಿಸಿ ಅವರುಮಾತನಾಡಿದರು.

ಹಾಲಿ ಕ್ರೀಡಾಂಗಣದಲ್ಲಿ ಹಲವು ರೀತಿಯ ಸೌಲಭ್ಯಗಳ ಅಗತ್ಯವಿದ್ದು, ಕೆಲವೊಂದು ಕಾಮಗಾರಿಗಳು ನೆನೆಗುದಿಗೆ ಬಿದ್ದಿದೆ. ಇದನ್ನು ಮನಗಂಡು ಅನುದಾನ ನೀಡುವಂತೆ ಮನವಿ ಮಾಡಲಾಗಿತ್ತು. ಇದೀಗ ಅನುದಾನ ಬಿಡುಗಡೆಯಾಗಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.

ತಾಲೂಕಿನಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ವಿದೆ. ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಕೊರತೆ ಹೆಚ್ಚಿದ್ದು, ಉತ್ತಮ ಕ್ರೀಡಾಪಟುಗಳ ಪ್ರೋತ್ಸಾ ಹಿಸುವಲ್ಲಿ ವಿಫಲವಾಗುತ್ತಿದ್ದೇವೆ. ಈ ಬಗ್ಗೆ ಶಿಕ್ಷಣ ಸಚಿವರ ಬಳಿ ಚರ್ಚಿಸುವುದಾಗಿ ಹೇಳಿದ ಶಾಸಕರು, ಗ್ರಾಮೀಣ ಭಾಗದಲ್ಲಿನ ಕ್ರೀಡಾಪಟುಗಳ ಉತ್ತೇಜಿಸಲು ಉತ್ತಮ ಕ್ರೀಡಾಪಟುಗಳ ಒಂದುಗೂಡಿಸಿ ತರಬೇತಿ ಕೊಡಿಸುವ ಆಲೋಚನೆಯಿದೆ. ಇದಕ್ಕಾಗಿ ತಾಲೂಕಿನ ಎಲ್ಲಾ ದೈಹಿಕ ಶಿಕ್ಷಕರನ್ನು ಬಳಸಿ ಕೊಳ್ಳಲಾಗುವುದು ಎಂದು ಹೇಳಿದರು.

ಜಿಪಂ ಸದಸ್ಯೆ ಲತಾಮಂಜೇಶ್ವರಿ ಮಾತ ನಾಡಿ, ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವ ಹಿಸುವುದರಿಂದ ಆರೋಗ್ಯಕ್ಕೂ ಅನುಕೂಲ ಕರ. ಜತೆಗೆ ಉದ್ಯೋಗಕ್ಕೂ ಅವಕಾಶ ಸಿಗಲಿದೆ ಎಂದರು. ಬಿಜೆಪಿ ತಾಲೂಕು ಅಧ್ಯಕ್ಷ ಕೊರಟಿ ಕೆರೆ ಪ್ರಕಾಶ್ ಮಾತನಾಡಿ, ಭಾರತದಲ್ಲಿ ದೇಶಿಯ ಕ್ರೀಡೆಯನ್ನು ನಾವು ಮರೆಯು ತ್ತಿದ್ದೇವೆ. ಕ್ರೀಡೆಯಲ್ಲಿ ಕ್ರಿಕೆಟ್‍ಗೆ ಕೊಟ್ಟಷ್ಟು ಪ್ರೋತ್ಸಾಹ ಇತರ ಆಟಗಳಿಗೆ ನೀಡುತ್ತಿಲ್ಲ ಎಂದು ವಿಷಾದಿಸಿದರು.

ಪುರಸಭಾ ಅಧ್ಯಕ್ಷೆ ಭಾರತೀ ಅರುಣ ಕುಮಾರ್ ಧ್ವಜಾರೋಹಣ ನೆರವೇರಿಸಿ ದರು. ಹಾಸನ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ವೆಂಕಟೇಶಮೂರ್ತಿ, ತಾಪಂ ಇಓ ರವಿ ಕುಮಾರ್, ತಾಲೂಕು ದೈಹಿಕ ಶಿಕ್ಷಣ ಪರಿ ವೀಕ್ಷಕಿ ಚಂದ್ರಮತಿ, ಸರ್ವೋದಯ ಶಾಲೆ ಪ್ರಾಂಶುಪಾಲ ಪ್ರಕಾಶ್, ಮುಖ್ಯಶಿಕ್ಷಕ ಗಿರೀಶ್, ಟ್ರಸ್ಟಿಗಳಾದ ಮಲ್ಲೇಶಗೌಡ, ದೇವೇಂದ್ರಗೌಡ, ರಂಗನಾಥ್, ತಾಲೂಕು ದೈಹಿಕ ಸಂಘದ ಅಧ್ಯಕ್ಷ ವಿರೂಪಾಕ್ಷ, ಲಯನ್ಸ್ ಕಾರ್ಯದರ್ಶಿ ಮುಕ್ತಿಯಾರ್ ಅಹ್ಮದ್ ಇದ್ದರು. ಮೈಸೂರು ವಿಭಾಗದಿಂದ ಒಟ್ಟು 32 ತಂಡಗಳು ಭಾಗವಹಿಸಿದ್ದವು.

Translate »