ಕುಶಾಲನಗರದಲ್ಲಿ ನಡುತೋಪಿಗೆ ಬೆಂಕಿ ; ನೂರಾರು ಗಿಡಗಳ ನಾಶ
ಕೊಡಗು

ಕುಶಾಲನಗರದಲ್ಲಿ ನಡುತೋಪಿಗೆ ಬೆಂಕಿ ; ನೂರಾರು ಗಿಡಗಳ ನಾಶ

March 17, 2020

ಕುಶಾಲನಗರ,ಮಾ.16-ಬೇಸಿಗೆ ಉರಿ ಬಿಸಿಲು ಹೆಚ್ಚಾಗುತ್ತಿದ್ದು ಇದರ ನಡುವೆ ಕುಶಾಲನಗರ ಆರ್‍ಎಂಸಿ ಆವರಣದಲ್ಲಿನ ನಡುತೋಪಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.

ಕಳೆದ 4 ವರ್ಷಗಳ ಹಿಂದೆ ಅರಣ್ಯ ಇಲಾಖೆ ಮತ್ತು ಕುಶಾಲನಗರ ಕಾವೇರಿ ಪರಿಸರ ರಕ್ಷಣಾ ಬಳಗ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನೆಟ್ಟು ಬೆಳೆಸಿದ್ದ ನೂರಾರು ಗಿಡಗಳು ಬೆಂಕಿಯ ಕೆನ್ನಾಲಿಗೆಗೆ ಬೆಂದು, ಸುಟ್ಟುಹೋಗಿರುವ ದೃಶ್ಯ ಮನಕಲಕುತ್ತಿದೆ.ಭಾನುವಾರ ಈ ಘಟನೆ ನಡೆದಿದ್ದು ಬೆಳೆದು ನಿಂತಿದ್ದ ವಿವಿಧ ಜಾತಿಗಳ ಗಿಡ ಮರಗಳು ಬಹುತೇಕ ನಾಶವಾಗಿದೆ.

ಅರಣ್ಯ ಇಲಾಖೆಯ ನಡುತೋಪು ಯೋಜನೆಯಡಿಯಲ್ಲಿ ಆರ್‍ಎಂಸಿ ಆವ ರಣದಲ್ಲಿ ಸುಮಾರು 500 ಕ್ಕೂ ಅಧಿಕ ಗಿಡಗಳನ್ನು ನೆಟ್ಟು ಬೆಳೆಸಿ ಪೆÇೀಷಿಸಲಾಗು ತ್ತಿತ್ತು. ಆರ್ ಎಂಸಿ ಆವರಣದ ಸುತ್ತಲೂ ತಡೆಗೋಡೆಗಳಿಂದ ರಕ್ಷಿತವಾಗಿದೆ. ಆದರೂ ಕೂಡ ಕಾವೇರಿ ನದಿ ತಟದಲ್ಲಿ ರುವ ನಡುತೋಪಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಸಾಧ್ಯತೆ ಕಂಡುಬಂದಿದೆ.

ಬೆಳೆದು ನಿಂತಿದ್ದ ಗಿಡಗಳಿಗೆ ಬೆಂಕಿ ಹಚ್ಚಿ ನಾಶಕ್ಕೆ ಕಾರಣಕರ್ತರಾದವರ ಮೇಲೆ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಕಾವೇರಿ ಪರಿಸರ ರಕ್ಷಣಾ ಬಳಗದ ಸಂಚಾಲಕ ಎಂ.ಎನ್.ಚಂದ್ರಮೋಹನ್ ಒತ್ತಾಯಿಸಿದ್ದಾರೆ. ನಡುತೋಪು ನಿರ್ವ ಹಣೆಗೆ ಅರಣ್ಯ ಇಲಾಖೆ ನೌಕರನನ್ನು ನಿಯೋಜಿಸಬೇಕಿದೆ. ನಾಮಕಾವಸ್ಥೆಗೆ ಗಿಡಗಳನ್ನು ನೆಟ್ಟು ಸುಮ್ಮನಾಗದೆ ಅವುಗಳ ಪೆÇೀಷಣೆ, ರಕ್ಷಣೆಗೆ ಅರಣ್ಯ ಇಲಾಖೆ ಕಾಳಜಿ ವಹಿಸ ಬೇಕೆಂದು ಆಗ್ರಹಿಸಿದ್ದಾರೆ.

Translate »