ಕಾರ್ ಶೋರೂಂನ ಸರ್ವೀಸ್ ಸ್ಟೇಷನ್‍ಗೆ ಬೆಂಕಿ
ಮೈಸೂರು

ಕಾರ್ ಶೋರೂಂನ ಸರ್ವೀಸ್ ಸ್ಟೇಷನ್‍ಗೆ ಬೆಂಕಿ

December 27, 2021

ಸಾರ್ವಜನಿಕರು ಇಂದು ಬೆಳಗ್ಗೆ 8.30ಕ್ಕೆ ಕರೆ ಮಾಡಿ, ಕಾರ್ ಶೋ ರೂಮ್‍ನಲ್ಲಿ ಬೆಂಕಿ ಬಿದ್ದಿರುವ ಬಗ್ಗೆ ಮಾಹಿತಿ ನೀಡಿದರು. ಕೂಡಲೇ ನಾಲ್ಕು ಅಗ್ನಿಶಾಮಕ ವಾಹನ ಗಳನ್ನು ಕಳುಹಿಸಿ ತುರ್ತು ಕಾರ್ಯಾಚರಣೆ ನಡೆಸಿ ಬೆಂಕಿ ಸರ್ವಿಸ್ ಸ್ಟೇಷನ್‍ನಿಂದ ಮೇಲಿನ ಮಹಡಿಗೆ ವ್ಯಾಪಿಸುವುದನ್ನು ತಡೆಗಟ್ಟಲಾಯಿತು. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸುಮಾರು 30ಕ್ಕೂ ಹೆಚ್ಚು ಮಂದಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಬಿದ್ದಿದೆ ಎಂದು ಸರ್ವಿಸ್ ಸ್ಟೇಷನ್ ಸಿಬ್ಬಂದಿ ತಿಳಿಸಿದ್ದಾರೆ. -ನಾಗರಾಜ ಅರಸ್, ಸರಸ್ವತಿಪುರಂ ಫೈರ್‍ಸ್ಟೇಷನ್ ಆಫಿಸರ್(ಎಫ್‍ಎಸ್‍ಓ)

ಮೈಸೂರು, ಡಿ.26(ಎಂಟಿವೈ)- ಕಾರ್ ಶೋ ರೂಂ ವೊಂದರ ಸರ್ವೀಸ್ ಸ್ಟೇಷನ್‍ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಒಂದು ಹೊಸ ಕಾರು ಸೇರಿ ದಂತೆ 4 ಕಾರುಗಳು ಸುಟ್ಟು ಹೋಗಿದ್ದು, ಅಗ್ನಿ ಶಾಮಕ ಸಿಬ್ಬಂದಿಯ ಸಕಾಲಿಕ ಕಾರ್ಯಾಚರಣೆ ಯಿಂದ ಭಾರೀ ದುರಂತವೊಂದು ತಪ್ಪಿದಂತಾಗಿದೆ.
ಲಕ್ಷ್ಮೀಪುರಂನಲ್ಲಿರುವ ಅದ್ವೈತ್ ಹೂಂಡೈ ಶೋ ರೂಮ್‍ನ ಕೆಳ ಮಹಡಿಯಲ್ಲಿರುವ ಸರ್ವಿಸ್ ಸ್ಟೇಷನ್ ನಲ್ಲಿ ಈ ದುರಂತ ಸಂಭವಿಸಿದ್ದು, ಒಂದು ಹೊಸ ಕಾರು ಭಾಗಶಃ ಸುಟ್ಟುಹೋಗಿದ್ದು, ಸರ್ವೀಸ್‍ಗೆ ಬಿಟ್ಟಿದ್ದ 3 ಕಾರುಗಳು ಅಲ್ಪ ಪ್ರಮಾಣದಲ್ಲಿ ಸುಟ್ಟಿದೆ.

ಮುಂಜಾನೆಯೇ ಶೋರೂಮ್‍ನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಸರಸ್ವತಿಪುರಂ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ತುರ್ತು ಕಾರ್ಯಾಚರಣೆ ನಡೆಸಿ ಶೋರಂನ ಸರ್ವೀಸ್ ಸ್ಟೇಷನ್‍ನಲ್ಲಿ ಉರಿಯು ತ್ತಿದ್ದ ಬೆಂಕಿಯನ್ನು ನಂದಿಸಿ ಬೆಂಕಿ ಮೇಲ್ಮಹಡಿಗೆ ವ್ಯಾಪಿಸದಂತೆ ತಡೆದು ದೊಡ್ಡ ಅನಾಹುತವನ್ನು ತಪ್ಪಿಸಿದರು. ಇಂದು ಬೆಳಗ್ಗೆ ವಾಯುವಿಹಾರಕ್ಕೆ ಹೋಗುತ್ತಿ ದ್ದವರ ಸಮಯ ಪ್ರಜ್ಞೆಯಿಂದಾಗಿ ಭಾರೀ ಪ್ರಮಾಣದ ಅಗ್ನಿ ಅವಘಡ ಆಗುವುದು ತಪ್ಪಿದಂತಾಗಿದೆ. ಘಟನೆಯ ಸಂಬಂಧ ಎಷ್ಟು ಪ್ರಮಾಣದ ಹಾನಿಯಾಗಿದೆ ಎಂದು ಅಂದಾಜಿಸಿಲ್ಲ. ಅಲ್ಲದೆ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸುದ್ದಿ ತಿಳಿದು ಸ್ಥಳಕ್ಕೆ ಚೀಫ್ ಫೈರ್ ಆಫೀಸರ್ ಜಯರಾಮಯ್ಯ, ರೀಜನಲ್ ಫೈರ್ ಆಫೀಸರ್ ನವೀನ್‍ಕುಮಾರ್, ಜಿಲ್ಲಾ ಅಗ್ನಿಶಾಮಕಾಧಿಕಾರಿ ಗಂಗಾನಾಯಕ್, ಚಂದನ್, ಫೈರ್ ಸ್ಟೇಷನ್ ಆಫಿಸರ್(ಎಫ್‍ಎಸ್‍ಓ) ನಾಗರಾಜ ಅರಸ್ ಭೇಟಿ ನೀಡಿದ್ದರು. ಶಿವಸ್ವಾಮಿ ನೇತೃತ್ವದಲ್ಲಿ 30 ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Translate »