ಬಿಜೆಪಿಗೆ ಮೊಟ್ಟ ಮೊದಲು   ಮೈಸೂರು ಮೇಯರ್ ಗಾದಿ
ಮೈಸೂರು

ಬಿಜೆಪಿಗೆ ಮೊಟ್ಟ ಮೊದಲು  ಮೈಸೂರು ಮೇಯರ್ ಗಾದಿ

February 15, 2021

ಮೈಸೂರು,ಫೆ.14(ಪಿಎಂ)-ಮೈಸೂರು ಮಹಾನಗರ ಪಾಲಿಕೆ ಯಲ್ಲಿ ಮೊಟ್ಟಮೊದಲ ಬಾರಿಗೆ ಬಿಜೆಪಿ ಮೇಯರ್ ಸ್ಥಾನ ಅಲಂಕರಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಜೊತೆಗೆ ಮೈಸೂರು ಹಾಲು ಒಕ್ಕೂಟದ ಚುನಾ ವಣೆಯಲ್ಲೂ ಮೊದಲ ಬಾರಿಗೆ ಬಿಜೆಪಿ ಯವರೇ ಅಧ್ಯಕ್ಷರಾಗುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನಕ್ಕೆ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಮೈಸೂರಿನ ಚಾಮರಾಜಪುರಂನ ಬಿಜೆಪಿ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ 2021-22ನೇ ಸಾಲಿನ ಬಜೆಟ್ ಕುರಿತ ವಿಮರ್ಶೆ ಮತ್ತು ವಿಶ್ಲೇಷಣೆ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಮೈಸೂರು ಹಾಲು ಒಕ್ಕೂಟದ ಚುನಾವಣೆಯನ್ನೂ ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಪಕ್ಷಕ್ಕೆ ಒಕ್ಕೂಟದ ಅಧ್ಯಕ್ಷ ಸ್ಥಾನ ಲಭ್ಯವಾಗಬೇಕು ಎಂದು ಹೇಳಿದರು.

ತಾಪಂ ರದ್ದು ಅನುಮಾನ: ಮುಂಬರುವ ತಾಪಂ, ಜಿಪಂ ಚುನಾವಣೆಗೆ ಪಕ್ಷ ಸಜ್ಜುಗೊಳ್ಳಬೇಕಿದೆ. ತಾಪಂ ರದ್ದುಪಡಿಸಬೇಕು ಎಂಬುದು ಪಕ್ಷಾತೀತವಾಗಿ ಎಲ್ಲರ ಅಭಿಪ್ರಾಯವಾಗಿದೆ. ಆದರೆ ಚುನಾವಣಾ ಆಯೋಗ ಈಗಾಗಲೇ ಪ್ರಕ್ರಿಯೆ ಶುರು ಮಾಡಿ ರುವ ಹಿನ್ನೆಲೆಯಲ್ಲಿ ಈ ಬಾರಿ ತಾಪಂ ರದ್ದುಗೊಳ್ಳುವುದು ಅನು ಮಾನ ಎಂದರು. ಕಾಯ್ದೆ ತಿದ್ದುಪಡಿ ಮೂಲಕ ಎಪಿಎಂಸಿ ಮಾರು ಕಟ್ಟೆ ಹೊರತಾಗಿಯೂ ಕೃಷಿ ಉತ್ಪನ್ನ ಮಾರಾಟ ಮಾಡಲು ಯಾವುದೇ ಪರವಾನಗಿ ಅಗತ್ಯವಿಲ್ಲ ಎಂಬ ಬದಲಾವಣೆ ಮಾಡ ಲಾಗಿದೆ. ಇದರ ಉದ್ದೇಶ ರೈತರಿಗೆ ಒಳ್ಳೆಯ ಬೆಲೆ ದೊರೆಯಬೇಕೆಂಬುದಾಗಿದೆ. ರೈತರಿಗೆ ಯಾವುದೇ ನಿರ್ಬಂಧ ಇರದಂತೆ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಬೆಂಬಲ ಬೆಲೆ ಹಾಗೂ ಎಪಿಎಂಸಿ ರದ್ದುಗೊಳಿಸು ವುದಿಲ್ಲ. ಎಪಿಎಂಸಿ ತಿದ್ದುಪಡಿ ಕಾಯ್ದೆಯಲ್ಲಿ ಏನಾದರೂ ತೊಂದರೆ ಇದ್ದರೆ ಈಗಲೂ ಸರಿಪಡಿಸಲು ಮುಖ್ಯಮಂತ್ರಿಗಳು ಸಿದ್ಧವಿದ್ದಾರೆ ಎಂದರು. ಮೈಸೂರಿಗೆ ಈ ಬಜೆಟ್‍ನಲ್ಲಿ ಮಂಡ ಕಳ್ಳಿ ವಿಮಾನ ನಿಲ್ದಾಣ ಅಭಿವೃದ್ಧಿ, ವರುಣ ಕ್ಷೇತ್ರದ 160 ಎಕರೆ ಜಾಗದಲ್ಲಿ ಚಿತ್ರನಗರಿ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳಿಗೆ ಅನುದಾನ ಕಲ್ಪಿಸಬೇಕೆಂದು ಪಕ್ಷದ ಹಾಲಿ ಮತ್ತು ಮಾಜಿ ಪದಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಅಭಿಪ್ರಾಯ ಸಂಗ್ರ ಹಿಸಿ ಸಿಎಂಗೆ ತಲುಪಿಸಲಾಗುವುದು ಎಂದರು.

ಅನ್ಯ ವಿಷಯಗಳೇ ಹೆಚ್ಚು: ಕೇಂದ್ರ ಬಜೆಟ್ ಕುರಿತು ಏರ್ಪಡಿಸಿದ್ದ ವಿಮರ್ಶೆ-ವಿಶ್ಲೇಷಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಕಾರ್ಯಕರ್ತರು ಹೆಚ್ಚು ಅನ್ಯ ವಿಷಯಗಳನ್ನೇ ಪ್ರಸ್ತಾಪಿಸಿದರು. ಸರ್ಕಾರದ ವಿವಿಧ ಯೋಜನೆಗಳ ಸಂಬಂಧ ಫಲಾನುಭವಿಗಳಿಗೆ ನಿಗದಿತ ಸಮಯಕ್ಕೆ ಸೌಲಭ್ಯ ನೀಡದಿರುವುದೂ ಸೇರಿದಂತೆ ತಮ್ಮ ಗಮನಕ್ಕೆ ಬಂದಿರುವ ಸ್ಥಳೀಯ ಸಮಸ್ಯೆಗಳನ್ನು ಕಾರ್ಯಕರ್ತರು ಸಚಿವರ ಗಮನಕ್ಕೆ ತಂದರು. ಕೇಂದ್ರ ಬಜೆಟ್‍ನಲ್ಲಿ ಆರೋಗ್ಯ, ಮೂಲಭೂತ ಸೌಲಭ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಇದೊಂದು ಉತ್ತಮ ಬಜೆಟ್ ಎಂಬ ಅಭಿಪ್ರಾಯ ಒಟ್ಟಾರೆ ವ್ಯಕ್ತವಾಯಿತು. ಮಾಜಿ ಶಾಸಕ ಭಾರತಿ ಶಂಕರ್, ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ಪಕ್ಷದ ಮುಖಂಡ ರಾದ ಗಂಗಾಧರ್ ಪ್ರಸಾದ್, ಸತ್ಯನಾರಾಯಣ ಮತ್ತಿತರರು ಹಾಜರಿದ್ದರು.

ಬಿಜೆಪಿಗೆ ಮೇಯರ್ ಸ್ಥಾನ ದಕ್ಕುವುದು ಗ್ಯಾರಂಟಿ?

ಮೈಸೂರು,ಫೆ.14(ಪಿಎಂ)-ಮೈಸೂರು ಮಹಾನಗರ ಪಾಲಿಕೆ ಅಸ್ತಿತ್ವಕ್ಕೆ ಬಂದಾಗಿನಿಂದ ಮೇಯರ್ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿದ್ದ ಬಿಜೆಪಿ ಈ ಬಾರಿ ಇದನ್ನು ಪ್ರತಿಷ್ಠೆಯಾಗಿ ಪರಿಗಣಿಸಿದೆ. ಹೀಗಾಗಿ ಮೈಸೂರು ಮೇಯರ್ ಸ್ಥಾನ ಬಿಜೆಪಿಗೆ ಒಲಿಯುವುದು ಖಚಿತ ಎಂದೇ ಹೇಳಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ವಿಶೇಷ ಕಾಳಜಿ ವಹಿಸಿ ಮೈಸೂರು ಮೇಯರ್ ಸ್ಥಾನವನ್ನು `ಸಾಮಾನ್ಯ ಮಹಿಳೆ’ಗೆ ಮೀಸಲಿರಿಸುವಲ್ಲಿ ಯಶಸ್ವಿಯಾಗಿದ್ದು, ಈ ಒತ್ತಾಸೆಯ ಹಿಂದೆ ಮೈಸೂರು ಪ್ರಥಮ ಸ್ಥಾನದಲ್ಲಿ ಕಮಲ ಅರಳಿಸುವ ಕಸರತ್ತಿದೆ ಎಂದು ನಂಬಲರ್ಹ ಉನ್ನತ ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಹದಾಸೆ ಯಂತೆ ಮೈಸೂರು ಮಹಾನಗರ ಪಾಲಿಕೆ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಬಿಜೆಪಿ ಮೇಯರ್ ಗಾದಿ ಹಿಡಿಯುವ ವಿಚಾರದಲ್ಲಿ ಉಸ್ತುವಾರಿ ಸಚಿವರು ವಿಶೇಷ ಕಾಳಜಿ ವಹಿಸಿದ್ದಾರೆ. ಈಗಾಗಲೇ ವಿಧಾನ ಪರಿಷತ್ ಸಭಾಪತಿ ಆಯ್ಕೆಯಲ್ಲಿ ಜೆಡಿಎಸ್ ಜೊತೆಗೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದ್ದು, ಬಿಜೆಪಿಯ ಉನ್ನತ ಮಟ್ಟದ ನಾಯಕರ ಮಾತುಕತೆ ಬಳಿಕ ಮೈಸೂರು ಮೇಯರ್ ಆಯ್ಕೆ ನಿಷ್ಕರ್ಷೆ ಆಗಲಿದೆ ಎನ್ನಲಾಗುತ್ತಿದೆ.

ಬಲ್ಲ ಮೂಲಗಳ ಪ್ರಕಾರ ಮುಖ್ಯಮಂತ್ರಿ ಯಡಿಯೂರಪ್ಪ ಜೆಡಿಎಸ್ ನಾಯಕರೊಂದಿಗೆ ಈಗಾಗಲೇ ಸಮಾಲೋಚಿಸಿದ್ದು, ಹೀಗಾಗಿಯೇ ಈ ಬಾರಿ ಬಿಜೆಪಿ ಮೇಯರ್ ಸ್ಥಾನವನ್ನು ಗಿಟ್ಟಿಸಿ ಕೊಳ್ಳುವುದು ಬಹುತೇಕ ಖಚಿತವಾಗಿದೆ ಎಂದು ಹೇಳಲಾಗು ತ್ತಿದೆ. ಮೇಯರ್ ಸ್ಥಾನ ಪಕ್ಷ ದಕ್ಕಿಸಿಕೊಳ್ಳುವ ನಿಟ್ಟಿನಲ್ಲಿ ಸಂಸದ ಪ್ರತಾಪ್‍ಸಿಂಹ, ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಅವರೊಂದಿಗೆ ಚರ್ಚಿಸಿ, ಉಸ್ತುವಾರಿ ಸಚಿವರು ಕಾರ್ಯತಂತ್ರ ರೂಪಿಸಿದ್ದಾರೆ. ಅದರಂತೆ ಪಕ್ಷದ ಅಭ್ಯರ್ಥಿಗೆ ಅನುಕೂಲವಾಗುವ ರೀತಿಯಲ್ಲಿ ಮೀಸಲಾತಿ ನಿಗದಿಪಡಿಸುವಲ್ಲಿ ಸಚಿವರು ಯಶಸ್ವಿ ಯಾಗಿದ್ದಾರೆ ಎಂದೇ ಹೇಳಲಾಗುತ್ತಿದೆ. ಅದರಲ್ಲೂ ಪಾಲಿಕೆಯ ಹಿರಿಯ ಸದಸ್ಯೆ ಸುನಂದ ಪಾಲನೇತ್ರ (ವಾರ್ಡ್ ನಂ.59) ಮೈಸೂರು ಮೇಯರ್ ಸ್ಥಾನ ಅಲಂಕರಿಸಲಿದ್ದಾರೆ ಎನ್ನಲಾಗುತ್ತಿದೆ. 2018ರಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಆ ಪ್ರಕಾರ ಮೊದಲು ಮೇಯರ್ ಸ್ಥಾನ ಪಡೆಯುವ ಪಕ್ಷಕ್ಕೆ 2 ವರ್ಷ ಹಾಗೂ ನಂತರ ಮೇಯರ್ ಸ್ಥಾನ ಪಡೆಯುವ ಪಕ್ಷಕ್ಕೆ 3 ಬಾರಿ ಮೇಯರ್ ಸ್ಥಾನದ ಅಧಿಕಾರಾವ ಧಿಯಂತೆ ಹೊಂದಾಣಿಕೆ ಮಾಡಿಕೊಳ್ಳಲಾಗಿತ್ತು. ಅದರಂತೆ ಮೊದಲ ಅವಧಿಯಲ್ಲಿ ಕಾಂಗ್ರೆಸ್‍ನ ಪುಷ್ಪಲತಾ ಜಗನ್ನಾಥ್ ಮೇಯರ್ ಹಾಗೂ ಜೆಡಿಎಸ್‍ನ ಶಫಿ ಅಹಮ್ಮದ್ ಉಪಮೇಯರ್ ಆಗಿದ್ದರು. ಬಳಿಕ 2ನೇ ಅವಧಿಯಲ್ಲಿ (ಕಳೆದ ಅವಧಿ) ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮುಂದುವರೆದು ಜೆಡಿಎಸ್‍ನ ತಸ್ನಿಂ ಮೇಯರ್ ಹಾಗೂ ಕಾಂಗ್ರೆಸ್ ಶ್ರೀಧರ್ ಉಪಮೇಯರ್ ಆಗಿ ಅಧಿಕಾರ ನಡೆಸಿದ್ದರು. ಇದೀಗ ಮೂರನೇ ಅವಧಿ ವೇಳೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮುರಿದು ಬೀಳುವ ಮೂಲಕ ಬಿಜೆಪಿ ಹಾಗೂ ಜೆಡಿಎಸ್‍ನ ಮೈತ್ರಿ ಪರ್ವ ಆರಂಭವಾಗುವುದು ಖಚಿತ ಎಂದೇ ಹೇಳಲಾಗುತ್ತಿದೆ.

 

 

 

 

 

 

Translate »