ಪ್ರಥಮ ಪಿಯುಸಿ ತರಗತಿ ಆರಂಭ
ಮೈಸೂರು

ಪ್ರಥಮ ಪಿಯುಸಿ ತರಗತಿ ಆರಂಭ

February 2, 2021

ಮೈಸೂರು,ಫೆ.1(ಆರ್‍ಕೆ)-ಕೊರೊನಾ ವೈರಸ್ ಸೋಂಕಿನಿಂದಾಗಿ ಕಳೆದ 10 ತಿಂಗ ಳಿಂದ ಬಂದ್ ಮಾಡಲಾಗಿದ್ದ 9 ಹಾಗೂ ಪ್ರಥಮ ಪಿಯುಸಿ ಆಫ್‍ಲೈನ್ ತರಗತಿಗಳು ಇಂದಿನಿಂದ ಪುನಾರಂಭಗೊಂಡವು.ಕೊರೊನಾ ಸೋಂಕು ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮದೊಂದಿಗೆ ಫೆ. 1ರಿಂದ 9ನೇ ತರಗತಿ ಮತ್ತು ಪ್ರಥಮ ಪಿಯುಸಿ ಆಫ್‍ಲೈನ್ ಕ್ಲಾಸ್‍ಗಳನ್ನು ಆರಂಭಿಸಬೇ ಕೆಂದು ವಾರದ ಹಿಂದೆ ಸರ್ಕಾರ ಆದೇಶಿ ಸಿತ್ತು. ಅದರಂತೆ ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ 74 ಸರ್ಕಾರಿ, 32 ಅನುದಾನಿತ ಹಾಗೂ 156 ಅನುದಾನರಹಿತ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ತರಗತಿಗಳನ್ನು ಇಂದಿನಿಂದ ಆರಂಭಿಸಲಾಯಿತು ಎಂದು ಪದವಿ ‘ಪೂರ್ವ ಮತ್ತು ವೃತ್ತಿ ಶಿಕ್ಷಣ ಉಪನಿರ್ದೇಶಕ ನಾಗ ಮಲ್ಲೇಶ ತಿಳಿಸಿದ್ದಾರೆ.

ತಾವು ಮೈಸೂರು ನಗರ ಹಾಗೂ ತಾಲೂಕಿನ ಕೆಲ ಪಿಯು ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ, ಮಾಸ್ಕ್ ಧರಿಸುವುದು. ಅಂತರ ಕಾಯ್ದುಕೊಳ್ಳುವುದು, ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್‍ನಿಂದ ಕೈತೊಳೆದುಕೊಳ್ಳುವುದೂ ಸೇರಿದಂತೆ ಕೊರೊನಾ ಹರಡ ದಂತೆ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವುದು ಕಂಡುಬಂದಿತು ಎಂದರು. ಎಲ್ಲಾ ಕಾಲೇಜುಗಳಲ್ಲಿ ಶೇ.70ರಿಂದ 80ರಷ್ಟು ವಿದ್ಯಾರ್ಥಿಗಳು ಹಾಜ ರಾಗಿದ್ದು, ಪ್ರಥಮ ಪಿಯುಸಿ ಪಾಠಗಳು ಪೂರ್ಣಪ್ರಮಾಣದಲ್ಲಿ ಆರಂಭವಾಗಿವೆ. 2020ರ ಡಿಸೆಂಬರ್ ಮಾಹೆಯಲ್ಲೇ ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಿದ್ದು, ಯಾವುದೇ ಆತಂಕವಿಲ್ಲದೇ ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ ಎಂದು ನಾಗಮಲ್ಲೇಶ ತಿಳಿಸಿದರು.

9ನೇ ತರಗತಿಗಳನ್ನು ಎಲ್ಲಾ ಪ್ರೌಢಶಾಲೆಗಳಲ್ಲಿ ಆರಂಭಿಸಿದ್ದು, ಕೋವಿಡ್-19 ಮಾರ್ಗ ಸೂಚಿಗಳನ್ನು ಚಾಚೂ ತಪ್ಪದೆ ಪಾಲಿಸಿರುವ ಕಾರಣ, ಮಕ್ಕಳು ಹಾಗೂ ಶಿಕ್ಷಕರು ಶೇ.90ರಷ್ಟು ಮೊದಲ ದಿನವೇ ಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ. ಪಾಂಡುರಂಗ ಅವರು ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

 

 

Translate »