ಕುಸ್ತಿ ಫೆಡರೇಷನ್‍ನಿಂದ ಕುಸ್ತಿಪಟುಗಳಿಗೆ ಅವಮಾನ:   ಮಾಜಿ ಮೇಯರ್ ಪುರುಷೋತ್ತಮ್ ಆರೋಪ
ಮೈಸೂರು

ಕುಸ್ತಿ ಫೆಡರೇಷನ್‍ನಿಂದ ಕುಸ್ತಿಪಟುಗಳಿಗೆ ಅವಮಾನ:  ಮಾಜಿ ಮೇಯರ್ ಪುರುಷೋತ್ತಮ್ ಆರೋಪ

February 2, 2021

ಮೈಸೂರು, ಫೆ.1(ಆರ್‍ಕೆಬಿ)- ಕಳೆದ ತಿಂಗಳು ಉತ್ತರ ಪ್ರದೇಶದ ನೊಯಿಡಾ ದಲ್ಲಿ ಜರುಗಿದ ಹಿರಿಯ ರಾಷ್ಟ್ರಮಟ್ಟದ ಕುಸ್ತಿ ಚಾಂಪಿಯನ್‍ಷಿಪ್ ಪಂದ್ಯಾವಳಿ ಯಲ್ಲಿ ಪಾಲ್ಗೊಳ್ಳಲು ತೆರಳಿದ್ದ ರಾಜ್ಯದ ಕುಸ್ತಿ ಪಟುಗಳ ಮೇಲ್ವಿಚಾರಣೆ ನೋಡಿ ಕೊಳ್ಳದೇ ಅವರನ್ನು ಅಪಮಾನಕರವಾಗಿ ನಡೆಸಿಕೊಳ್ಳಲಾಗಿದೆ. ಇದು ಖಂಡನೀಯ ಎಂದು ಮಾಜಿ ಮೇಯರ್ ಪುರುಷೋ ತ್ತಮ್ ಬೇಸರ ವ್ಯಕ್ತಪಡಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ಸೋಮವಾರ ಕುಸ್ತಿ ಪ್ರಿಯರ ಬಳಗ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಂಡ ಮರಳಿ ಬರುವಾಗ ಟ್ರೈನ್ ಟಿಕೆಟ್ ಬುಕ್ ಮಾಡಿಸಿರಲಿಲ್ಲ. ಜೊತೆಗೆ ಟ್ರೈನ್ ಹೊರಡು ವುದು ಮುಂದೂಡಿಕೆಯಾದ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣದ ಹೊರಗೇ ಕುಸ್ತಿಪಟುಗಳು ಹಗಲು ರಾತ್ರಿ ಊಟ ನಿದ್ರೆಯಿಲ್ಲದೇ ಕಳೆಯ ಬೇಕಾಗಿ ಬಂದಿತು ಎಂದು ಟೀಕಿಸಿದರು.

ಈ ಬಗ್ಗೆ ರಾಜ್ಯ ಕುಸ್ತಿ ಫೆಡರೇಷನ್ ಕಾರ್ಯದರ್ಶಿಯನ್ನು ದೂರವಾಣಿ ಮೂಲಕ ಪ್ರಶ್ನಿಸಿದಾಗ ಅವರನ್ನು ಹಾಗೂ ತಂಡದ ತರಬೇತುದಾರರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಈ ಕುರಿತ ವಾಟ್ಸಪ್ ರೆಕಾರ್ಡ್‍ಗಳು ಎಲ್ಲೆಡೆ ಹರಿದಾ ಡಿವೆ. ಈ ವೇಳೆ ಕುಸ್ತಿ ಪಟುಗಳಿಗೆ ಆದ ಅಪಮಾನ ಎಲ್ಲರೂ ತಲೆತಗ್ಗಿಸುವಂತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕುಸ್ತಿ ಪಟುಗಳಿಗೆ ಸೂಕ್ತ ಉತ್ತೇ ಜನ ದೊರೆಯುತ್ತಿಲ್ಲ. ಹೀಗಾಗಿ ಈ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆನ್ನುವವರಿಗೆ ನಿರಾಸೆಯಾಗುತ್ತಿದೆ. ರಾಜ್ಯ ಕುಸ್ತಿ ಫೆಡರೇಷನ್ ನಲ್ಲಿ ಕಳೆದ ಹಲವಾರು ದಶಕಗಳಿಂ ದಲೂ ಅವರವರೇ ಇರುವ ಕಾರಣ ಈ ಪರಿಸ್ಥಿತಿ ಉಂಟಾಗಿದ್ದು, ಕೂಡಲೇ ಅದನ್ನು ಪುನಾ ರಚಿಸಬೇಕು. ಜೊತೆಗೆ, ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಶಾಖೆ ತೆರೆಯುವ ಮೂಲಕ ಕುಸ್ತಿಗೆ ಉತ್ತೇಜನ ನೀಡಬೇಕು ಎಂದು ಪುರುಷೋತ್ತಮ್ ಆಗ್ರಹಿಸಿದರು. ಸುದ್ದಿ ಗೋಷ್ಠಿಯಲ್ಲಿ ಕುಸ್ತಿ ಪಟುಗಳಾದ ರಫೀಕ್, ಅಫ್ರೋಜ್‍ಖಾನ್, ಜಿಲ್ಲಾಧ್ಯಕ್ಷ ಪ್ರವೀಣ್, ಪ್ರಸನ್ನ ಇನ್ನಿತರರು ಉಪಸ್ಥಿತರಿದ್ದರು.

 

 

 

 

Translate »