ಸ್ವಾಮಿ ವಿವೇಕಾನಂದ, ಸುಭಾಷ್‍ಚಂದ್ರ ಬೋಸ್, ಕೆ.ಎಂ.ಕಾರ್ಯಪ್ಪ ಸ್ಮರಣೆ ಫೆ.7ರಂದು ವಿಚಾರ ಸಂಕಿರಣ
ಮೈಸೂರು

ಸ್ವಾಮಿ ವಿವೇಕಾನಂದ, ಸುಭಾಷ್‍ಚಂದ್ರ ಬೋಸ್, ಕೆ.ಎಂ.ಕಾರ್ಯಪ್ಪ ಸ್ಮರಣೆ ಫೆ.7ರಂದು ವಿಚಾರ ಸಂಕಿರಣ

February 2, 2021

ಮೈಸೂರು, ಫೆ.1(ಆರ್‍ಕೆಬಿ)- ಯುವ ಜನಾಂಗದಲ್ಲಿ ರಾಷ್ಟ್ರಪ್ರೇಮವನ್ನು ಬಿತ್ತುವ ನಿಟ್ಟಿನಲ್ಲಿ ಭಾರತೀಯ ಸಾಂಸ್ಕøತಿಕ ವಿಕಾಸ ವೇದಿಕೆಯಿಂದ ಸ್ವಾಮಿ ವಿವೇಕಾನಂದ, ದೇಶಭಕ್ತ ಸುಭಾಷ್‍ಚಂದ್ರ ಬೋಸ್, ಪೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸ್ಮರಣೆ ಅಂಗವಾಗಿ ಫೆ.7ರಂದು ಮೈಸೂರಿನಲ್ಲಿ ವಿಚಾರ ಸಂಕಿ ರಣ ಆಯೋಜಿಸಲಾಗಿದೆ ಎಂದು ವೇದಿಕೆಯ ಮಹಾ ಪೋಷಕ ಎಸ್.ಇ.ಮಹದೇವಪ್ಪ ತಿಳಿಸಿದರು. ಮೈಸೂರು ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ಅಂದು ಬೆಳಿಗ್ಗೆ 8.30 ಗಂಟೆಗೆ ಮೈಸೂ ರಿನ ಚೆಲುವಾಂಬ ಉದ್ಯಾನವನದಲ್ಲಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಶಾಸಕ ತನ್ವೀರ್‍ಸೇಠ್, ಬಳಿಕ ಮೆಟ್ರೋಪೋಲ್ ವೃತ್ತದಲ್ಲಿರುವ ಕೆ.ಎಂ.ಕಾರ್ಯಪ್ಪ ಪ್ರತಿಮೆಗೆ ಎಲ್.ನಾಗೇಂದ್ರ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ನಂತರ ಸದ್ಭಾವನಾ ನಡಿಗೆ ಆಯೋಜಿಸಲಾಗಿದೆ ಎಂದರು.

ಸಂಜೆ 4 ಗಂಟೆಗೆ ಜೆಎಲ್‍ಬಿ ರಸ್ತೆಯ ಆರಾಧ್ಯ ಸಭಾಂಗಣದಲ್ಲಿ ನಡೆಯುವ ವಿಚಾರ ಸಂಕಿರಣಕ್ಕೆ ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್ ಚಾಲನೆ ನೀಡುವರು. ಸೋಮೇಶ್ವರನಾಥ ಸ್ವಾಮೀಜಿ, ಡಾ.ಮಾತೆ ಬಸವಾಂಜಲಿ ದೇವಿ, ರಾಮಕೃಷ್ಣಮಠದ ಶಾಂತಿವ್ರತಾನಂದಜೀ ಮಹಾರಾಜ್, ಪ್ರೊ.ನೀಲಗಿರಿ ತಳವಾರ್, ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಮಾತನಾಡುವರು ಎಂದು ಹೇಳಿದರು.

ಇದಕ್ಕೂ ಮುನ್ನ ಆರಾಧ್ಯ ಸಭಾ ಭವನದಲ್ಲಿ ವಿಶೇಷವಾಗಿ ರೂಪಿತವಾಗಿರುವ ರಾಮಕೃಷ್ಣ ಪರಮಹಂಸ ಮಹಾದ್ವಾರವನ್ನು ನಾಗಭೂಷಣಾರಾಧ್ಯ, ಲೇಖಕಿ ತ್ರಿವೇಣಿ ಸಭಾಂಗಣವನ್ನು ಡಾ.ಎಸ್‍ಇ. ಮಹದೇವಪ್ಪ, ಅಪ್ಪನೆರವಂಡ ಹರಿದಾಸ ಅಪ್ಪಚ್ಚು ಕವಿ ವೇದಿಕೆಯನ್ನು ಅಪ್ಪನೆರವಂಡ ಡಾ.ಎ.ಸೋನಿಯಾ ಮಂದಪ್ಪ ಉದ್ಘಾಟಿಸುವರು. ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್ ಉದ್ಘಾಟಿಸುವರು. ಸಮಾಜ ಸೇವಕ ಡಾ.ಕೆ.ರಘುರಾಂ ವಾಜಪೇಯಿ ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭದಲ್ಲಿ ಭಾರತೀಯ ಸಾಂಸ್ಕøತಿಕ ವೇದಿಕೆ ಮತ್ತು ಭೂಮಿಕಾ ಭಾವೈಕ್ಯ ಬಳಗದ ನೂತನ ಪದಾಧಿಕಾರಿಗಳು ಪ್ರತಿಜ್ಞಾ ವಿಧಿ ಸ್ವೀಕರಿ ಸುವರು ಎಂದರು. ಸುದ್ದಿಗೋಷ್ಠಿಯಲ್ಲಿ ಸಿ.ಜಗದೀಶ್, ಬಿ.ಎಸ್.ಗೀತಾ ಗಣೇಶ್, ಡಾ.ನಳಿನಿ ತಮ್ಮಯ್ಯ, ಮೀನಾಕ್ಷಿ, ವೇದಿಕೆ ಅಧ್ಯಕ್ಷ ತಗಡೂರು ಗೌರೀಶಂಕರ್ ಉಪಸ್ಥಿತರಿದ್ದರು.

 

 

 

Translate »