ಮಡಿವಾಳ ಸಮುದಾಯದ ಶ್ರೇಯೋಭಿವೃದ್ಧಿಗೆ ಸರ್ಕಾರಕ್ಕೆ ಹಲವು ಬೇಡಿಕೆ ಸಲ್ಲಿಕೆ
ಮೈಸೂರು

ಮಡಿವಾಳ ಸಮುದಾಯದ ಶ್ರೇಯೋಭಿವೃದ್ಧಿಗೆ ಸರ್ಕಾರಕ್ಕೆ ಹಲವು ಬೇಡಿಕೆ ಸಲ್ಲಿಕೆ

February 2, 2021

ಮೈಸೂರು,ಫೆ.1(ಪಿಎಂ)-ಮಡಿವಾಳ ಸಮುದಾಯಕ್ಕೆ ಆರ್ಥಿಕ, ಔದ್ಯೋಗಿಕ ಹಾಗೂ ಶೈಕ್ಷಣಿಕ ಶಕ್ತಿ ಲಭಿಸಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪನವರಲ್ಲಿ ಹಲವು ಬೇಡಿಕೆಗಳನ್ನಿ ಡುವ ಉದ್ದೇಶ ಹೊಂದಿದ್ದೇನೆ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ರಘು ಆರ್.ಕೌಟಿಲ್ಯ ತಿಳಿಸಿದರು.

ಮೈಸೂರಿನ ಕಲಾಮಂದಿರದ ಮನೆ ಯಂಗಳ ಸಭಾಂಗಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿ ಯಿಂದ ಸರಳ ಹಾಗೂ ಸಾಂಕೇತಿಕವಾಗಿ ಸೋಮವಾರ ಹಮ್ಮಿಕೊಂಡಿದ್ದ ಮಡಿ ವಾಳ ಮಾಚಿದೇವರ ಜಯಂತಿ ಕಾರ್ಯ ಕ್ರಮದಲ್ಲಿ ಮಡಿವಾಳ ಮಾಚಿದೇವರ ಚಿತ್ರ ಪಟಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

ಮಡಿವಾಳ ಸಮಾಜ ಇಂದಿಗೂ ವೃತ್ತಿ ಆಧಾರಿತ ಬದುಕು ಕಟ್ಟಿಕೊಳ್ಳಲು ಸಾಕಷ್ಟು ಬವಣೆ ಪಡುತ್ತಿದೆ. ಕೊರೊನಾ ಲಾಕ್ ಡೌನ್‍ನಿಂದ ಮಡಿವಾಳ ಸಮಾಜ ಕೂಡ ಅತ್ಯಂತ ತೊಂದರೆಗೆ ಸಿಲುಕಿದೆ. ಈ ಕಾರ ಣಕ್ಕೆ ಸರ್ಕಾರ ಮಡಿವಾಳ ಸಮುದಾಯಕ್ಕೂ ಈಗಾಗಲೇ ಆರ್ಥಿಕ ನೆರವು ಒದಗಿಸಿ ಕೊಟ್ಟಿದೆ. ಮುಂದೆಯೂ ಬಿ.ಎಸ್.ಯಡಿ ಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಮಡಿವಾಳ ಸಮುದಾಯದ ಶ್ರೇಯೋ ಭಿವೃದ್ಧಿಗೆ ಬದ್ಧವಾಗಿದೆ ಎಂದರು.

ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹಾಗೂ ಮಡಿವಾಳ ಮಾಚಿ ದೇವರ ಅಭಿವೃದ್ಧಿ ನಿಗಮದ ಮೂಲಕ ಮಡಿ ವಾಳದ ಸಮಾಜಕ್ಕೆ ಆರ್ಥಿಕ ನೆರವು ಒದಗಿ ಸುವುದು ಮಾತ್ರವಲ್ಲದೇ ಇವರ ವೃತ್ತಿಗೆ ಬೇಕಾದ ಕೌಶಲ್ಯ ತರಬೇತಿಗೂ ಒತ್ತು ನೀಡ ಲಾಗುವುದು. ಸಮುದಾಯದ ಮಕ್ಕಳ ಉನ್ನತ ಶಿಕ್ಷಣಕ್ಕೆ 5 ಲಕ್ಷ ರೂ.ವರೆಗೆ ಆರ್ಥಿಕ ನೆರವು ನೀಡುವ ಯೋಜನೆ ಇದೆ. ಜೊತೆಗೆ ವಿದೇಶಿ ವ್ಯಾಸಂಗ ಮಾಡುವವರಿಗೆ 10 ಲಕ್ಷ ರೂ.ವರೆಗೆ ಬಡ್ಡಿರಹಿತ ಆರ್ಥಿಕ ನೆರವು ಒದಗಿಸುವ ಯೋಜನೆಯೂ ಇದೆ. ಸಮು ದಾಯದ ಸ್ವಾವಲಂಬನೆಗೆ ಹಲವು ಯೋಜನೆ ಗಳಿವೆ. ಮಡಿವಾಳ ಸಮಾಜ ಸೇರಿದಂತೆ ಸಣ್ಣ ಸಣ್ಣ ಸಮುದಾಯಗಳಿಗೆ ಹೆಚ್ಚಿನ ಉತ್ತೇ ಜನ ನೀಡುವಂತಹ ಬದ್ಧತೆ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕಿದೆ ಎಂದು ಹೇಳಿದರು.

12ನೇ ಶತಮಾನದ ವೀರ ಮಡಿವಾಳ ಮಾಚಿದೇವರ ಜಯಂತಿಯನ್ನು ಸರ್ಕಾರ ಕೊರೊನಾ ಹಿನ್ನೆಲೆಯಲ್ಲಿ ಸರಳ ಮತ್ತು ಸಾಂಕೇತಿಕವಾಗಿ ಆಚರಣೆ ಮಾಡಲಾಗು ತ್ತಿದೆ. ಜಯಂತಿ ಕಾರ್ಯಕ್ರಮದಲ್ಲಿ ಸಮು ದಾಯದವರು ಭಾಗವಹಿಸಿ ಅರ್ಥಪೂರ್ಣ ಆಚರಣೆಗೆ ಸಹಕಾರ ನೀಡಿದ್ದಾರೆ ಎಂದರು.

ಇದಕ್ಕೂ ಮುನ್ನ ಜಯಂತಿ ಕಾರ್ಯ ಕ್ರಮದ ವೇದಿಕೆಯಲ್ಲಿ ಮಾತನಾಡಿದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇ ಶಕ ಹೆಚ್.ಚೆನ್ನಪ್ಪ, ಶರಣ ಚಳುವಳಿಯಲ್ಲಿ ಅನೇಕ ದಾರ್ಶನಿಕರು ಜನ್ಮತಾಳಿ ಸಮಾ ಜದ ಸುಧಾರಣೆಗೆ ಶ್ರಮಿಸಿದ್ದಾರೆ. ಇಂದಿಗೂ ಶರಣರು ನಮ್ಮ ಸಮಾಜಕ್ಕೆ ಪ್ರಸ್ತುತವಾಗಿ ದ್ದಾರೆ. ಅಂತಹ ಶರಣರಲ್ಲಿ ಮಡಿವಾಳ ಮಾಚಿದೇವರು ತಮ್ಮದೇ ವಿಶಿಷ್ಟ ನಿಲುವು ಗಳಿಂದ ಗಮನ ಸೆಳೆಯುತ್ತಾರೆ. `ಅರಸು ತನ ಮೇಲಲ್ಲಾ, ಅಗಸತನ ಕೀಳಲ್ಲ’ ಎಂದು ಮಹತ್ವದ ಸಂದೇಶವನ್ನು ಮಡಿವಾಳ ಮಾಚಿ ದೇವರು ಸಾರಿದ್ದಾರೆ ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಮಂಜುನಾಥಸ್ವಾಮಿ, ಕನ್ನಡಪರ ಹೋರಾಟಗಾರ ಮೂಗೂರು ನಂಜುಂಡ ಸ್ವಾಮಿ, ಮೈಸೂರು ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ರವಿ ನಂದನ್, ಕಾರ್ಯಾ ಧ್ಯಕ್ಷ ರಾಜು, ಪ್ರಧಾನ ಕಾರ್ಯದರ್ಶಿ ಚೆನ್ನಕೇಶವ ಮತ್ತಿತರರು ಹಾಜರಿದ್ದರು.

Translate »