ಸಾರಿಗೆ ಬಸ್ ಹರಿದು ಮಹಿಳೆ ಸಾವು
ಮೈಸೂರು

ಸಾರಿಗೆ ಬಸ್ ಹರಿದು ಮಹಿಳೆ ಸಾವು

February 2, 2021

ಮೈಸೂರು, ಫೆ.1(ಆರ್‍ಕೆ)- ಗ್ರಾಮಾಂ ತರ ಸಾರಿಗೆ ಬಸ್ ಹರಿದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಮೈಸೂರು-ಬೆಂಗಳೂರು ಹೆದ್ದಾರಿಯ ಕೆ.ಆರ್.ಮಿಲ್ ಕಾಲೋನಿ ಸಮೀಪ ಸೋಮವಾರ ಮಧ್ಯಾಹ್ನ ಸಂಭವಿಸಿದೆ.

ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿ ಕೃಷ್ಣಯ್ಯ ಅವರ ಪುತ್ರಿ ವೆಂಕ ಟಮ್ಮ(28) ಸಾವನ್ನಪ್ಪಿದವರು. ಮಂಡ್ಯ ನಗರದ ಕಾರ್ತಿಕ ಎಂಬುವರ ಜೊತೆ ಬಜಾಜ್ ಪಲ್ಸರ್ ಬೈಕ್‍ನಲ್ಲಿ ಮೈಸೂರಿನಿಂದ ಶ್ರೀರಂಗಪಟ್ಟಣ ಕಡೆಗೆ ಹೋಗುತ್ತಿದ್ದಾಗ ಹಿಂದಿನಿಂದ ಕೆಎಸ್‍ಆರ್‍ಟಿಸಿ ಬಸ್ ಮಧ್ಯಾಹ್ನ ಸುಮಾರು 1.25 ಗಂಟೆ ವೇಳೆಗೆ ಕೆ.ಆರ್. ಮಿಲ್ ಕಾಲೋನಿ ಬಳಿ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಬೈಕ್‍ನೊಂದಿಗೆ ಅದನ್ನು ಓಡಿಸುತ್ತಿದ್ದ ಕಾರ್ತಿಕ್ ಎಡಬದಿಗೆ ಬಿದ್ದರೆ, ಹಿಂದೆ ಕುಳಿತಿದ್ದ ವೆಂಕಟಮ್ಮ ಬಲಭಾಗಕ್ಕೆ ಬಿದ್ದರು. ಈ ವೇಳೆ ಬಸ್ಸಿನ ಹಿಂದಿನ ಎಡಚಕ್ರ ಆಕೆಯ ಹೊಟ್ಟೆ ಮೇಲೆ ಹರಿಯಿತು. ದೇಹ ಛಿದ್ರಗೊಂಡು ವೆಂಕಟಮ್ಮ ಸ್ಥಳದಲ್ಲೇ ಅಸುನೀಗಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಎನ್.ಆರ್. ಸಂಚಾರ ಠಾಣೆ ಇನ್‍ಸ್ಪೆಕ್ಟರ್ ಪ್ರಸನ್ನ ಕುಮಾರ ಹಾಗೂ ಸಿಬ್ಬಂದಿ, ಮಹ ಜರು ನಡೆಸಿ ದೇಹವನ್ನು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋ ಧನಾ ಸಂಸ್ಥೆ ಶವಾಗಾರಕ್ಕೆ ಸ್ಥಳಾಂ ತರಿಸಿದರು. ಎಡಭಾಗಕ್ಕೆ ಬಿದ್ದ ಬೈಕ್ ಸವಾರ ಕಾರ್ತಿಕ್ ಯಾವುದೇ ಗಾಯ ವಾಗದೆ ಅಪಾಯದಿಂದ ಪಾರಾ ಗಿದ್ದು, ಮರಣೋತ್ತರ ಪರೀಕ್ಷೆ ನಡೆ ಸಿದ ನಂತರ ವೆಂಕಟಮ್ಮ ದೇಹವನ್ನು ವಾರಸುದಾರರಿಗೆ ಒಪ್ಪಿಸಿದ್ದು, ಬೈಕ್ ಮತ್ತು ಸಾರಿಗೆ ಬಸ್ಸನ್ನು ವಶಕ್ಕೆ ಪಡೆದಿದ್ದಾರೆ.

Translate »