ಸೋಮವಾರ ಮೈಸೂರು ಜಿಲ್ಲೆಯಲ್ಲಿ 13 ಜನರಿಗೆ ಸೋಂಕು: 31 ಮಂದಿ ಗುಣಮುಖ
ಮೈಸೂರು

ಸೋಮವಾರ ಮೈಸೂರು ಜಿಲ್ಲೆಯಲ್ಲಿ 13 ಜನರಿಗೆ ಸೋಂಕು: 31 ಮಂದಿ ಗುಣಮುಖ

February 2, 2021

ಮೈಸೂರು, ಫೆ.1(ಎಂಕೆ)- ಜಿಲ್ಲೆಯಲ್ಲಿ ಸೋಮವಾರ 13 ಮಂದಿಗೆ ಕೊರೊನಾ ಸೋಂಕು ತಗುಲಿದೆ. 31 ಮಂದಿ ಗುಣ ಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ದ್ದಾರೆ. ಯಾವುದೇ ಸಾವು ಸಂಭವಿಸಿಲ್ಲ. ಒಟ್ಟು ಸೋಂಕಿತರ ಸಂಖ್ಯೆ 53,448ಕ್ಕೆ ಏರಿಕೆ ಯಾದರೆ, 52,211 ಮಂದಿ ಗುಣಮುಖ ರಾಗಿದ್ದು, 1,026 ಮಂದಿ ಸಾವನ್ನಪ್ಪಿದ್ದು, 211 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ.

ರಾಜ್ಯದ ವಿವರ: ರಾಜ್ಯದಲ್ಲಿಂದು 388 ಮಂದಿಗೆ ಸೋಂಕು ತಗುಲಿದ್ದು, 470 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 9,39, 775ಕ್ಕೆ ಏರಿಕೆಯಾಗಿದ್ದು, 9,21,592 ಮಂದಿ ಗುಣ ಮುಖರಾಗಿದ್ದಾರೆ. ಇಂದು 3 ಮಂದಿ ಸಾವ ನ್ನಪ್ಪಿದ್ದು, ಈವರೆಗೆ 12,220 ಮಂದಿ ಮೃತಪಟ್ಟಿದ್ದಾರೆ. 5,944 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ. ಬಾಗಲಕೋಟೆ 1, ಬಳ್ಳಾರಿ 4, ಬೆಳಗಾವಿ 2, ಬೆಂ. ಗ್ರಾಮಾಂ ತರ 7, ಬೆಂ. ನಗರ 201, ಬೀದರ್ 8, ಚಾ.ನಗರ 4, ಚಿಕ್ಕಬಳ್ಳಾಪುರ 1, ಚಿಕ್ಕಮಗ ಳೂರು 8, ಚಿತ್ರದುರ್ಗ 5, ದಕ್ಷಿಣಕನ್ನಡ 16, ಹಾಸನ 13, ಕಲಬುರಗಿ 10, ಕೊಡಗು 27, ಕೋಲಾರ 6, ಕೊಪ್ಪಳ 1, ಮಂಡ್ಯ 6, ರಾಯಚೂರು 1, ರಾಮನಗರ 2, ಶಿವಮೊಗ್ಗ 1, ತುಮಕೂರು 27, ಉಡುಪಿ 8, ಉತ್ತರಕನ್ನಡ 10, ವಿಜಯಪುರ 4 ಯಾದಗಿರಿ 2 ಪ್ರಕರಣ ವರದಿಯಾಗಿದೆ.

 

 

 

Translate »