ಇಂದಿನಿಂದ ಐದು ದಿನ ಕೊಡಗಿನಲ್ಲಿ ಸಾಧಾರಣ ಮಳೆ
ಮೈಸೂರು

ಇಂದಿನಿಂದ ಐದು ದಿನ ಕೊಡಗಿನಲ್ಲಿ ಸಾಧಾರಣ ಮಳೆ

July 1, 2020

ಮೈಸೂರು, ಮಂಡ್ಯ, ಚಾ.ನಗರದಲ್ಲಿ ತುಂತುರು ಮಳೆ
ಮೈಸೂರು, ಜೂ.30(ಆರ್‍ಕೆಬಿ)- ಹವಾ ಮುನ್ಸೂಚನೆ ಪ್ರಕಾರ ಜು.1ರಿಂದ 5ರವರೆಗೆ ಮೋಡ ಕವಿದ ವಾತಾವರಣದೊಂ ದಿಗೆ ಕೊಡಗು ಜಿಲ್ಲೆಯಲ್ಲಿ ಸಾಧಾರಣ ಹಾಗೂ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆ ಗಳಲ್ಲಿ ತುಂತುರು ಮಳೆ ಬೀಳುವ ಸಾಧ್ಯತೆ ಇದೆ. ಮೈಸೂರು ಜಿಲ್ಲೆಯಲ್ಲಿ ಗರಿಷ್ಠ 29ರಿಂದ 30 ಡಿಗ್ರಿ ಸೆಲ್ಸಿಯಸ್, ಕನಿಷ್ಠ 21ರಿಂದ 22 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಲಿದೆ. ಕೊಡಗು ಜಿಲ್ಲೆಯಲ್ಲಿ ಗರಿಷ್ಠ 21-22, ಕನಿಷ್ಠ 16-17 ಡಿಗ್ರಿ ಸೆಲ್ಸಿಯಸ್, ಮಂಡ್ಯ ಜಿಲ್ಲೆಯಲ್ಲಿ ಗರಿಷ್ಠ 30-31 ಹಾಗೂ ಕನಿಷ್ಠ 21-22 ಡಿಗ್ರಿ ಸೆಲ್ಸಿಯಸ್, ಚಾಮರಾಜನಗರ ಜಿಲ್ಲೆಯಲ್ಲಿ ಗರಿಷ್ಟ 29-30 ಹಾಗೂ ಕನಿಷ್ಠ 21-22 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ ಎಂದು ನಾಗನಹಳ್ಳಿ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಅಧಿಕಾರಿ ಮಂಗಳವಾರ ತಿಳಿಸಿದ್ದಾರೆ.

Translate »