ವೈದ್ಯಕೀಯ ಸಿಬ್ಬಂದಿ ನಿವೃತ್ತಿ ಮುಂದೂಡಿದ ಸರ್ಕಾರ
ಮೈಸೂರು

ವೈದ್ಯಕೀಯ ಸಿಬ್ಬಂದಿ ನಿವೃತ್ತಿ ಮುಂದೂಡಿದ ಸರ್ಕಾರ

July 1, 2020

ಮೈಸೂರು, ಜೂ.30(ಎಸ್‍ಪಿಎನ್)- ಮಾರ್ಚ್-ಮೇ ತಿಂಗಳಾಂತ್ಯದಲ್ಲಿ ನಿವೃತ್ತಿ ಹೊಂದಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ವೈದ್ಯಕೀಯ ಸಿಬ್ಬಂದಿಗಳ ಸೇವೆಯನ್ನು ರಾಜ್ಯ ಸರ್ಕಾರ ನ.30ರವರೆಗೂ ವಿಸ್ತರಿಸಿದೆ.

ಮಾ.31 ಹಾಗೂ ಮೇ 31ರಂದು ಸೇವೆಯಿಂದ ನಿವೃತ್ತಿ ಹೊಂದಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ವೈದ್ಯಕೀಯ, ಅರೆ ವೈದ್ಯಕೀಯ ಹಾಗೂ ಕ್ಲಿನಿಕಲ್ ಮತ್ತು ನಾನ್ ಕ್ಲಿನಿಕಲ್ ಸಿಬ್ಬಂದಿಗಳ ಸೇವೆಯನ್ನು ಸರ್ಕಾರ ಈ ಮೊದಲು ಜೂ.30 ರವರೆಗೆ ವಿಸ್ತರಿಸಿತ್ತು. ಕೋವಿಡ್-19 ಸೋಂಕು ದಿನೇದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಪಾಸಣೆ ಮತ್ತು ಚಿಕಿತ್ಸೆಗೆ ವೈದ್ಯಕೀಯ, ಅರೆ ವೈದ್ಯಕೀಯ ಹಾಗೂ ಕ್ಲಿನಿಕಲ್ ಹಾಗೂ ನಾನ್ ಕ್ಲಿನಿಕಲ್ ಸಿಬ್ಬಂದಿಗಳ ಸೇವೆ ಅತ್ಯಗತ್ಯವಾಗಿರುವುದ ರಿಂದ ಮಾರ್ಚ್ ಹಾಗೂ ಮೇ ತಿಂಗಳಲ್ಲಿ ನಿವೃತ್ತಿ ಹೊಂದಿ ದವರ ಸೇವೆಯನ್ನು 6 ತಿಂಗಳವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಮಂಗಳವಾರ ಅಧಿಸೂಚನೆ ಹೊರಡಿಸಿದೆ. ನವೆಂ ಬರ್ ಅಂತ್ಯದಲ್ಲಿ ನಿವೃತ್ತಿ ಹೊಂದುವವರ ಸೇವೆಯನ್ನು ಡಿ.31ರವರೆಗೆ ಸೇವೆಯನ್ನು ವಿಸ್ತರಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಪರ ಕಾರ್ಯದರ್ಶಿ ಜಾವೇದ್ ಅಖ್ತರ್ ಅಧಿಸೂಚನೆ ಹೊರಡಿಸಿದ್ದಾರೆ.

 

 

 

Translate »