ಮೈಸೂರಲ್ಲಿ ಸಾವಿರಾರು ವಿದ್ಯಾರ್ಥಿಗಳಿಂದ ಧ್ವಜ ಉತ್ಸವ
ಮೈಸೂರು

ಮೈಸೂರಲ್ಲಿ ಸಾವಿರಾರು ವಿದ್ಯಾರ್ಥಿಗಳಿಂದ ಧ್ವಜ ಉತ್ಸವ

August 13, 2022

ಮೈಸೂರು,ಆ.12(ಎಂಟಿವೈ)- ಸ್ವಾತಂತ್ರ್ಯ ದಿನ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಸಾವಿರಾರು ವಿದ್ಯಾರ್ಥಿಗಳು ತ್ರಿವರ್ಣ ಧ್ವಜ ಹಿಡಿದು ಪ್ರಭಾತ್ ಪೇರಿ ನಡೆಸುವ ಮೂಲಕ ದೇಶ ಭಕ್ತಿ ಸಾರಿದರು.

ಮೈಸೂರಿನ ಕೆ.ಆರ್.ಕ್ಷೇತ್ರದಲ್ಲಿ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಹಮ್ಮಿ ಕೊಂಡಿರುವ ಅಮೃತ ಸಪ್ತಾಹ ಕಾರ್ಯ ಕ್ರಮದ ಅಂಗವಾಗಿ ಶುಕ್ರವಾರ ಮೈಸೂರು ಅರಮನೆ ಆವರಣದಿಂದ ಆರಂಭವಾದ ಬೃಹತ್ ಪ್ರಭಾತ್ ಪೇರಿ(ಮೆರವಣಿಗೆ)ಯಲ್ಲಿ ಕೆ.ಆರ್.ಕ್ಷೇತ್ರದ ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳ ಸಾವಿರಾರು ವಿದ್ಯಾರ್ಥಿ ಗಳು ಪಾಲ್ಗೊಂಡು ತ್ರಿವರ್ಣ ಧ್ವಜ ಹಿಡಿದು ಸಾಗುವ ಮೂಲಕ ದೇಶಭಕ್ತಿ ಮೆರೆದರು.

ಇಂದು ಬೆಳಗ್ಗೆ ಪ್ರಭಾತ್ ಪೇರಿಗೆ ಸ್ವಾತಂತ್ರ್ಯ ಹೋರಾಟಗಾರರಾದ ಪುಟ್ಟಣ್ಣ ಹಾಗೂ ಬಿ.ಲಿಂಗಯ್ಯ ತ್ರಿವರ್ಣ ಧ್ವಜ ಪ್ರದರ್ಶಿಸುವ ಮೂಲಕ ಚಾಲನೆ ನೀಡಿ, ಶುಭ ಕೋರಿದರು. ಶಾಸಕ ಎಸ್.ಎ. ರಾಮದಾಸ್ ಉಪಸ್ಥಿತರಿದ್ದರು. ಬಳಿಕ ವರಹಾ ದ್ವಾರದಿಂದ ತ್ರಿವರ್ಣ ಧ್ವಜ ಹಿಡಿದು ಸಾಲಾಗಿ ಬಂದ ವಿದ್ಯಾರ್ಥಿ ಸಮೂಹ ನೆರೆದಿದ್ದವರ ಕಣ್ಮನ ಸೆಳೆಯಿತು.

ದಸರಾ ಗಜಪಡೆಯೂ ಭಾಗಿ: ಅರಮನೆ ಪ್ರಾಂಗಣದ ಮುಂಭಾಗ ನೆರೆದಿದ್ದ ಸಾವಿ ರಾರು ವಿದ್ಯಾರ್ಥಿಗಳು ದಸರಾ ಗಜಪಡೆಯ ಮಾಜಿ ನಾಯಕ ಅರ್ಜುನ, ಕುಮ್ಕಿ ಆನೆ ಗಳಾದ ಲಕ್ಷ್ಮೀ ಮತ್ತು ಚೈತ್ರ ಸಮ್ಮುಖದಲ್ಲಿ ಸಂಭ್ರಮಿಸಿದರು. ಅರಮನೆ ಹೆಬ್ಬಾಗಿಲಲ್ಲಿ ಮೂರು ಆನೆಗಳಿಗೂ ಸಾಂಪ್ರದಾಯಿಕವಾಗಿ ಅರ್ಚಕ ಎಸ್.ವಿ.ಪ್ರಹ್ಲಾದ ರಾವ್ ಪೂಜೆ ಸಲ್ಲಿಸಿದರು. ಈ ವೇಳೆ ಶಾಸಕ ಎಸ್.ಎ. ರಾಮದಾಸ್ ಪುಷ್ಪನಮನ ಸಲ್ಲಿಸಿದರು. ಕೆಲ ಹೊತ್ತು ಮಕ್ಕಳ ಬಳಿ ನಿಂತಿದ್ದ ದಸರಾ ಆನೆಗಳು ನಂತರ ವಿದ್ಯಾರ್ಥಿ ಸಮೂಹದ ನಡುವೆ ರಾಜಗಾಂಭಿರ್ಯದಿಂದ ಶೆಡ್‍ನತ್ತ ಹೆಜ್ಜೆ ಹಾಕಿದವು. ಈ ವೇಳೆ ವಿದ್ಯಾರ್ಥಿ ಗಳು ಗಜಪಡೆಗೆ ಜೈಕಾರ ಹಾಕಿದರು.

ಭವ್ಯ ಮೆರವಣಿಗೆ: ವರಹಾ ದ್ವಾರದಿಂದ ಹೊರ ಬಂದ ವಿದ್ಯಾರ್ಥಿಗಳು ಗನ್‍ಹೌಸ್, ಜೆಎಸ್‍ಎಸ್ ವಿದ್ಯಾಪೀಠ, ರಾಮಾನುಜ ರಸ್ತೆ, ಅಗ್ರಹಾರ ವೃತ್ತ, ಸಿದ್ದಪ್ಪ ವೃತ್ತ, ನಾರಾಯಣಶಾಸ್ತ್ರಿ ರಸ್ತೆ, ಚಾಮುಂಡಿಪುರಂ ವೃತ್ತದ ಮೂಲಕ ವಿದ್ಯಾರಣ್ಯಪುರಂನಲ್ಲಿರುವ ಭೂತಾಳೆ ಮೈದಾನ ತಲುಪಿತು. ತ್ರಿವರ್ಣ ಧ್ವಜ ಹಿಡಿದ ವಿದ್ಯಾರ್ಥಿಗಳು ಹಾಗೂ ಮೆರವಣಿಗೆ ಮಧ್ಯೆ 120 ಅಡಿ ಉದ್ದದ ತ್ರಿವರ್ಣ ಧ್ವಜ ಹಿಡಿದಿದ್ದ ವಿದ್ಯಾರ್ಥಿಗಳ ಸಾಲು ನೋಡಗರ ಮನಸೂರೆಗೊಂಡಿತು. ದಾರಿಯುದ್ದಕ್ಕೂ ಭಾರತಾಂಭೆಗೆ ಜೈಕಾರ ಹಾಕುತ್ತಾ ಸಾಗಿದ ವಿಧ್ಯಾರ್ಥಿಗಳು ಸ್ವಾತಂತ್ರ್ಯೋತ್ಸವ ಅಮೃತ ಘಳಿಗೆಗೆ ಮೆರಗು ನೀಡಿದರು. ಕಿಲೋಮೀಟರ್ ಉದ್ದವಿದ್ದ ಮೆರವಣಿಗೆ ಮಾರ್ಗದುದ್ದಕ್ಕೂ ದೇಶಭಕ್ತಿ ಸಂದೇಶ ರವಾನಿಸಿದರು. ಮಧ್ಯೆ ಮಧ್ಯೆ ದೇಶಭಕ್ತಿ ಗೀತೆ ಗುನುಗುವ ಮೂಲಕ ಮೆರಗು ನೀಡಿದರು.
ಮೆರವಣಿಗೆಯಲ್ಲಿ ಸಚಿವರು: ಪ್ರಭಾತ್ ಪೇರಿ ಯಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ನಾಗೇಶ್ ಚಾಮುಂಡಿಪುರಂ ವೃತ್ತದಿಂದ ವಿದ್ಯಾರ್ಥಿ ಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.

ಮಾದರಿ ಕ್ಷೇತ್ರ: ಭೂತಾಳೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ನಾಗೇಶ್ ಮಾತನಾಡಿ, ರಾಜ್ಯದ 224 ಕ್ಷೇತ್ರಗಳಲ್ಲಿ ಮಾಡದಂತಹ ಕಾರ್ಯಕ್ರಮವನ್ನು ಶಾಸಕ ಎಸ್.ಎ.ರಾಮದಾಸ್ ತಮ್ಮ ಕೆ.ಆರ್.ಕ್ಷೇತ್ರ ದಲ್ಲಿ ಮಾಡಿದ್ದಾರೆ. ಸಾವಿರಾರು ವಿದ್ಯಾರ್ಥಿ ಗಳು ಏಕಕಾಲಕ್ಕೆ ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆಯಲ್ಲಿ ಸಾಗಿದ್ದು ನೋಡುವುದೇ ಆನಂದ. ದೇಶ ಪ್ರೇಮ ಕಡಿಮೆಯಾಗು ತ್ತಿರುವ ಆತಂಕ ಎದುರಾಗಿರುವ ಸಂದರ್ಭ ದಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ತ್ರಿವರ್ಣ ಧ್ವಜದೊಂದಿಗೆ ಮೆರವಣಿಗೆಯಲ್ಲಿ ಕರೆದೊಯ್ದು ಪರಿಣಾಮ ಕಾರಿಯಾಗಿ ದೇಶಭಕ್ತಿ ಮೂಡಿಸುವ ಕಾರ್ಯ ನಡೆಸಿದ್ದಾರೆ. ಸದಾ ಕ್ರಿಯಾಶೀಲತೆಯನ್ನು ವಿಭಿನ್ನ ಕಾರ್ಯ ಕ್ರಮ ಆಯೋಜಿಸುವ ಮೂಲಕ ಗಮನ ಸೆಳೆದಿದ್ದಾರೆ. ದೇಶಭಕ್ತಿ ಮೂಡಿ ಸುವ ಕಾರ್ಯಕ್ರಮಗಳು ಹೆಚ್ಚಾಗಿ ಆಯೋ ಜಿಸಬೇಕು ಎಂದು ಸಲಹೆ ನೀಡಿದರು.ವಿವಿಧ ಕಾರ್ಯಕ್ರಮಗಳು: ಶಾಸಕ ಎಸ್.ಎ. ರಾಮದಾಸ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷದ ಸಂಭ್ರಮಾ ಚರಣೆಯಲ್ಲಿ ದೇಶದ ಜನತೆ ಇದ್ದಾರೆ. ದೇಶದಾದ್ಯಂತ ಅಮೃತ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಕೆ.ಆರ್. ಕ್ಷೇತ್ರದಲ್ಲಿ ಆ.8ರಿಂದ ಅಮೃತ ಸಪ್ತಾಹ ಆಯೋಜಿಸುವ ಮೂಲಕ ವಿವಿಧ ಕಾರ್ಯ ಕ್ರಮವನ್ನು ಆಯೋಜಿಸಲಾಗಿದೆ. ಈಗಾಗಲೇ ವಿವಿಧ ಕಾರ್ಯಕ್ರಮಗಳ ಮೂಲಕ ಅಮೃತ ಮಹೋತ್ಸವವನ್ನು ಅರ್ಥಪೂರ್ಣ ವಾಗಿ ಆಚರಿಸಲಾಗುತ್ತಿದೆ. ಅದರ ಒಂದು ಭಾಗವಾಗಿ ಇಂದು ಪ್ರಭಾತ್ ಪೇರಿ ಆಯೋಜಿಸಲಾಗಿದೆ. ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದೆ. ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ತ್ರಿವರ್ಣ ಧ್ವಜ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ. ವಿವಿಧ ಸ್ಪರ್ಧೆಯನ್ನು ನಡೆಸಲಾಗುತ್ತಿದೆ. ಆ.14ರಂದು ಕೆ.ಆರ್. ಕ್ಷೇತ್ರದ ಯುವಜನರಿಂದ ಬೈಕ್ ಜಾಥಾ ನಡೆಸಲಾ ಗುತ್ತಿದೆ ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಸದಸ್ಯರಾದ ಬಿ.ವಿ.ಮಂಜು ನಾಥ್, ರೂಪ ಯೋಗೇಶ್, ಚಂಪಕ, ಶಾರದಮ್ಮ, ಶಾಂತಮ್ಮ, ಗೀತಾಶ್ರೀ, ಮುಖಂಡರಾದ ವಡಿವೇಲು, ಶ್ರೀನಿವಾಸ್, ನಾಗೇಂದ್ರ, ಪ್ರಸಾದ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Translate »