ಇಂದಿನಿಂದ ಮೈಸೂರಿಂದ ಬೆಂಗಳೂರು, ಬೆಳಗಾವಿಗೆ ವಿಮಾನ ಹಾರಾಟ
ಮೈಸೂರು

ಇಂದಿನಿಂದ ಮೈಸೂರಿಂದ ಬೆಂಗಳೂರು, ಬೆಳಗಾವಿಗೆ ವಿಮಾನ ಹಾರಾಟ

May 25, 2020

ಮೈಸೂರು, ಮೇ 24(ಆರ್‍ಕೆಬಿ)- ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ನಾಳೆಯಿಂದ (ಮೇ 25) ವಿಮಾನಗಳ ಹಾರಾಟ ಪುನಾ ರಂಭಗೊಳ್ಳಲಿದೆ. ಅಲೆಯನ್ಸ್ ಏರ್ ಕಂಪನಿಯ 2 ವಿಮಾನಗಳು ಮೈಸೂರು -ಬೆಂಗಳೂರು ನಡುವೆ ಹಾಗೂ ಟ್ರೂಜೆಟ್ ಏರ್‍ಲೈನ್ಸ್‍ನ 2 ವಿಮಾನ ಗಳು ಮೈಸೂರು-ಬೆಳಗಾವಿ ನಡುವೆ ಹಾರಾಟ ನಡೆಸಲಿವೆ. ಕೊರೊನಾ ವೈರಸ್ ಹಾವಳಿಯಿಂದ ಲಾಕ್‍ಡೌನ್ ಜಾರಿಯಾ ಗಿದ್ದರಿಂದ ಕಳೆದ 2 ತಿಂಗಳಿಂದ ವಿಮಾನ ಹಾರಾಟ ಸ್ಥಗಿತಗೊಂಡಿದ್ದವು.

ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ಅಲಿಯನ್ಸ್ ಏರ್‍ನ ವಿಮಾನ (91898) ಪ್ರತಿದಿನ ಸಂಜೆ 4.30ಕ್ಕೆ ಬೆಂಗಳೂರಿನಿಂದ ಹೊರಟು, ಸಂಜೆ 5.30ಕ್ಕೆ ಮೈಸೂರು ತಲುಪಲಿದೆ. ಮತ್ತೆ ಸಂಜೆ 6.15ಕ್ಕೆ ಮೈಸೂರಿನಿಂದ (91897) ಹೊರಟು 7.15ಕ್ಕೆ ಬೆಂಗಳೂರು ತಲುಪಲಿದೆ. ಪ್ರತಿ ಮಂಗಳವಾರ (919898) ಬೆಂಗಳೂರಿನಿಂದ ಮಧ್ಯಾಹ್ನ 3.30ಕ್ಕೆ ಹೊರಟು ಸಂಜೆ 4 ಗಂಟೆಗೆ ಮೈಸೂರು ತಲುಪಲಿದೆ. ಮತ್ತೆ (919897) ಮೈಸೂರಿನಿಂದ ರಾತ್ರಿ 9.45ಕ್ಕೆ ಹೊರಟು ರಾತ್ರಿ 10.45ಕ್ಕೆ ಬೆಂಗಳೂರು ಸೇರಲಿದೆ.

ಮೈಸೂರು-ಬೆಳಗಾವಿ ನಡುವೆ ಪ್ರತಿದಿನ ಸಂಚರಿಸುವ ಟ್ರೂಜೆಟ್ ಏರ್‍ಲೈನ್ಸ್ ವಿಮಾನ (2ಟಿ-543) ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯನ್ನು ಬಿಟ್ಟು ಸಂಜೆ 4.20ಕ್ಕೆ ಮೈಸೂರು ತಲುಪಲಿದೆ. ಮತ್ತೆ ಮೈಸೂರಿನಿಂದ ಸಂಜೆ 4.55ಕ್ಕೆ ಹೊರಟು ಸಂಜೆ 6.15ಕ್ಕೆ ಬೆಳಗಾವಿ ತಲುಪಲಿದೆ ಮೈಸೂರಿನಿಂದ ಬೆಂಗಳೂರಿಗೆ 25 ಮಂದಿ ಮತ್ತು ಬೆಳಗಾವಿಗೆ 15 ಮಂದಿ ಸೋಮವಾರ ಪ್ರಯಾಣಿಸಲು ಈಗಾಗಲೇ ಆನ್‍ಲೈನ್ ಮೂಲಕ ಟಿಕೆಟ್ ಕಾಯ್ದಿ ರಿಸಿದ್ದಾರೆ ಎಂದು ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಮಂಜುನಾಥ್ ತಿಳಿಸಿದ್ದಾರೆ.

Translate »