ವಿಮಾನ, ರೈಲು, ಅಂತರ ರಾಜ್ಯ ಸಂಚಾರಕ್ಕೆ ಹೊಸ ಮಾರ್ಗಸೂಚಿ
ಮೈಸೂರು

ವಿಮಾನ, ರೈಲು, ಅಂತರ ರಾಜ್ಯ ಸಂಚಾರಕ್ಕೆ ಹೊಸ ಮಾರ್ಗಸೂಚಿ

May 25, 2020

ನವದೆಹಲಿ, ಮೇ 24- ಲಾಕ್‍ಡೌನ್ ಹಿನ್ನೆಲೆಯಲ್ಲಿ ವಿಮಾನ, ರೈಲು, ಅಂತಾ ರಾಜ್ಯ ವಲಯದಲ್ಲಿ ಸಂಚರಿಸುವ ಪ್ರಯಾಣಿಕರಿಗಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಹೊಸ ಮಾರ್ಗಸೂಚಿ ಅನುಸರಿಸಿಯೇ ಪ್ರಯಾಣಿಕರಿಗೆ ಸೂಕ್ತ ವ್ಯವಸ್ಥೆ ಮಾಡ ಬೇಕು ಎಂದು ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ. ಖಾಸಗಿ ಟಿಕೆಟ್ ಬುಕಿಂಗ್ ಏಜೆನ್ಸಿ ಮೂಲಕ ಟಿಕೆಟ್ ಪಡೆದು, ಪ್ರಯಾಣಿಸಲು ಅವಕಾಶ ಇಲ್ಲ. ವಿಮಾನ, ರೈಲು, ಅಂತಾರಾಜ್ಯ ಸಂಚಾರದ ಪ್ರಯಾಣಿಕರು ಕಡ್ಡಾಯವಾಗಿ ಆರೋಗ್ಯ ಸೇತು ಆಪ್‍ಲೋಡ್ ಮಾಡಿಕೊಂಡು, ಬಳಕೆ ಮಾಡಬೇಕು. ಕೋವಿಡ್-19 ಸೋಂಕಿಗೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮವನ್ನು ವಿಮಾನ, ರೈಲು, ಬಸ್ ಟರ್ಮಿನಲ್‍ಗಳಲ್ಲಿ ಅನುಸರಿಸಬೇಕು. ವಿಮಾನ, ರೈಲು, ಬಸ್ ಸಂಚಾರದ ಪ್ರಯಾಣಿಕರನ್ನು ಪ್ರಯಾಣದ ವೇಳೆ ಕೊರೊನಾ ಸ್ಕ್ರೀನಿಂಗ್ ಪರೀಕ್ಷೆಗೆ ಒಳಪಡಿಸಬೇಕು. ಸೋಂಕಿನ ಲಕ್ಷಣ ಗಳು ಕಂಡುಬಾರದೇ ಇದ್ದಲ್ಲಿ ಮಾತ್ರ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು ಎಂದಿದೆ.

Translate »