ಮೈಸೂರಿಂದ ಮತ್ತೆ ಬೆಂಗಳೂರು, ಹೈದರಾಬಾದ್, ಕೊಚ್ಚಿ, ಗೋವಾ ನಡುವೆ ವಿಮಾನ ಹಾರಾಟ
ಮೈಸೂರು

ಮೈಸೂರಿಂದ ಮತ್ತೆ ಬೆಂಗಳೂರು, ಹೈದರಾಬಾದ್, ಕೊಚ್ಚಿ, ಗೋವಾ ನಡುವೆ ವಿಮಾನ ಹಾರಾಟ

May 28, 2020

ಮೈಸೂರು, ಮೇ 27(ಆರ್‍ಕೆಬಿ)- ಮೊನ್ನೆಯಷ್ಟೇ ಮೈಸೂರು-ಬೆಂಗಳೂರು-ಬೆಳಗಾವಿ ನಡುವೆ ವಿಮಾನ ಹಾರಾಟ ಆರಂಭವಾಗಿತ್ತು. ಈಗ ವಿಮಾನಗಳ ಸೇವೆ ಇನ್ನಷ್ಟು ವಿಸ್ತರಿಸಲಾಗಿದ್ದು, ಮೈಸೂರಿನಿಂದ ಬೆಂಗಳೂರು, ಗೋವಾ, ಕೊಚ್ಚಿ, ಹೈದರಾಬಾದ್‍ಗೆ ಅಲಯನ್ಸ್ ಏರ್‍ಲೈನ್ಸ್ ವಿಮಾನಗಳು ಮೇ 27ರಿಂದ ಹಾರಾಟ ಆರಂಭಿಸಿವೆ.

ಹೈದರಾಬಾದ್‍ನಿಂದ ಬೆಳಿಗ್ಗೆ 6.30ಕ್ಕೆ ಹೊರಟ ಅಲಯನ್ಸ್ ಏರ್‍ಲೈನ್ಸ್ ವಿಮಾನ ಮೈಸೂರಿಗೆ ಬೆಳಿಗ್ಗೆ 8.15ಕ್ಕೆ ಬಂದು ಸೇರಲಿದೆ. ಮೈಸೂರಿನಿಂದ 8.55ಕ್ಕೆ ಹೊರಟು 10.25ಕ್ಕೆ ಕೊಚ್ಚಿ ತಲುಪಲಿದೆ. ಕೊಚ್ಚಿಯಿಂದ ಬೆಳಿಗ್ಗೆ 11.05ಕ್ಕೆ ಹೊರಟು ಮೈಸೂರಿಗೆ ಮಧ್ಯಾಹ್ನ 12.35ಕ್ಕೆ ಸೇರಲಿದೆ. ಮೈಸೂರಿನಿಂದ ಮಧ್ಯಾಹ್ನ 1.15ಕ್ಕೆ ಹೊರಡುವ ವಿಮಾನ ಹೈದರಾಬಾದ್‍ಗೆ ಮಧ್ಯಾಹ್ನ 3 ಗಂಟೆಗೆ ಸೇರಲಿದೆ. ಮತ್ತೊಂದು ವಿಮಾನ ಬೆಂಗಳೂರಿ ನಿಂದ ಮಧ್ಯಾಹ್ನ 2.50ಕ್ಕೆ ಹೊರಟು ಮೈಸೂರಿಗೆ ಮಧ್ಯಾಹ್ನ 3.15ಕ್ಕೆ ತಲುಪಲಿದೆ. ಮೈಸೂರನ್ನು ಮಧ್ಯಾಹ್ನ 3.55ಕ್ಕೆ ಬಿಟ್ಟು ಸಂಜೆ 6ಕ್ಕೆ ಗೋವಾ ತಲುಪಲಿದೆ. ಸಂಜೆ 7ಕ್ಕೆ ಗೋವಾ ಬಿಟ್ಟು ರಾತ್ರಿ 8.30 ಗಂಟೆಗೆ ಮೈಸೂರು ಸೇರಲಿದೆ. ಮೈಸೂರಿನಿಂದ ರಾತ್ರಿ 8.55ಕ್ಕೆ ಹೊರಟು ಬೆಂಗಳೂರನ್ನು 9.45ಕ್ಕೆ ಸೇರಲಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

Translate »