ಅರಮನೆ ಆವರಣದಲ್ಲಿ ಡಿ.25ರಿಂದ ಫಲಪುಷ್ಪ ಪ್ರದರ್ಶನ
ಮೈಸೂರು

ಅರಮನೆ ಆವರಣದಲ್ಲಿ ಡಿ.25ರಿಂದ ಫಲಪುಷ್ಪ ಪ್ರದರ್ಶನ

December 23, 2021

ಮೈಸೂರು, ಡಿ.22(ಎಂಟಿವೈ)- ಕ್ರಿಸ್‍ಮಸ್ ಹಾಗೂ ಹೊಸ ವರ್ಷದ ಸಂಭ್ರಮಕ್ಕೆ ಸಾಂಸ್ಕøತಿಕ ನಗರಿ ಮೈಸೂರು ಸಜ್ಜಾಗುತ್ತಿದ್ದು, ಅರಮನೆಯ ಅಂಗಳ ದಲ್ಲಿ ಹಲವು ವೈವಿಧ್ಯತೆಯೊಂದಿಗೆ ಡಿ.25ರಿಂದ ಜ.2ರವರೆಗೆ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ.

ಮಾಗಿ ಉತ್ಸವದ ಮೂಲಕ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿ ಕೊಳ್ಳುತ್ತಿದ್ದ ಮೈಸೂರಲ್ಲಿ ಕಳೆದ ಎರಡು ವರ್ಷಗಳಿಂದ ಕೊರೊನಾದಿಂದ ಬ್ರೇಕ್ ಬಿದ್ದಿತ್ತು. ಈ ವರ್ಷ ಹೊಸ ವರ್ಷವನ್ನು ಫಲಪುಷ್ಪ ಪ್ರದರ್ಶನ ಮೂಲಕ ಬರ ಮಾಡಿಕೊಳ್ಳಲಾಗುತ್ತಿದ್ದು, ತಮಿಳುನಾಡಿನ ಊಟಿ ಸಮೀಪದ ಕೂನೂರು ಬಳಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಭಾರತೀಯ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಹೃದಯಾಘಾತ ದಿಂದ ನಿಧನರಾದ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಪುಷ್ಪ ನಮನ ಸಲ್ಲಿ ಸಿದರೆ, ಒಲಿಂಪಿಕ್ಸ್‍ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ನೀರಜ್ ಚೋಪ್ರಾ ಅವರ ಮೂರ್ತಿ ಪುಷ್ಪಗಳಿಂದ ಅರಳಿ ಜನರ ಕಣ್ಮನ ಸೆಳೆಯಲಿವೆ.

4ಲಕ್ಷ ಗುಲಾಬಿ ಬಳಕೆ: ಅರಮನೆ ಆವರಣ ದಲ್ಲಿ ನಡೆಯುವ ಫಲಪುಷ್ಪ ಪ್ರದರ್ಶ ನದಲ್ಲಿ 15 ಸಾವಿರಕ್ಕೂ ಹೆಚ್ಚು ಹೂವಿನ ಕುಂಡಗಳಲ್ಲಿ ವಿಭಿನ್ನ ರೀತಿಯ ಅಲಂಕಾ ರಿಕ ಹೂವುಗಳಾದ ಮೆರಿಗೋಲ್ಡ್, ಸಾಲ್ವಿಯ, ಡೇಲಿಯ, ಪಿಟೋನಿಯ, ಸೇವಂತಿಗೆ, ಕೋಲಿಯಸ್, ಸಿಲೋಷಿಯ, ನಸ್ಟರ್‍ಸಿಯಂ, ಆಂಟಿರೈನಂ, ಬೋನ್ಸಾಯ್ ಗಿಡಗಳು, ಸೇರಿದಂತೆ 32 ಜಾತಿಯ ಹೂವಿನ ಗಿಡಗಳು ಫ್ಲವರ್ ಶೋನಲ್ಲಿ ಪ್ರವಾಸಿಗರ ಕಣ್ಮನ ಸೆಳೆಯಲಿವೆ.

ಇದರೊಂದಿಗೆ ವಿವಿಧ ಬಣ್ಣಗಳಿಂದ ಕೂಡಿದ 4 ಲಕ್ಷಕ್ಕೂ ಹೆಚ್ಚು ಗುಲಾಬಿಗಳು, ಕ್ರೈಸಾಂಥಿಮಮ್, ಪಿಂಗ್‍ಪಾಂಗ್, ಕಾರ್ನೆ ಷನ್, ಆಸ್ಟ್ರಮೇರಿಯ, ಜರ್ಬೆರಾ, ಆಂಥೋ ರಿಯಮ್, ಆರ್ಕಿಡ್ಸ್, ಬ್ಲೂ ಡೈಸಿ, ಡ್ರೆಸಿನಾ ಹಾಗೂ ಇತರೆ ಅಲಂಕಾರಿಕ ಹೂವುಗಳಿಂದ ಹಾಗೂ ಊಟಿ ಕಟ್ ಫ್ಲವರ್‍ಗಳಿಂದÀ ವಿವಿಧ ಆಕೃತಿಗಳನ್ನು ನಿರ್ಮಿಸಲಾಗುತ್ತಿದೆ.

ಅರಮನೆ ಅಂಗಳದಲ್ಲಿ ಅಯೋಧ್ಯೆ: ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ವಿವಿಧ ಹೂವುಗಳಿಂದ ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರತಿಕೃತಿ ರಚಿಸಲಾ ಗುತ್ತಿದೆ. 70ಘಿ32ಘಿ13 ಅಡಿ ಅಳತೆಯಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರ ಅರ ಮನೆ ಅಂಗಳದಲ್ಲಿ ನಿರ್ಮಾಣಗೊಳ್ಳಲಿದೆ. ಫಲಪುಷ್ಪ ಪ್ರದರ್ಶನದಲ್ಲಿ ಶ್ರೀ ಚಾಮುಂಡಿ ದೇವತೆ, ನಂದಿ ಮತ್ತು ಮಹಿಷಾಸುರ, ಶ್ರೀ ಜಯಚಾಮರಾಜ ಒಡೆಯರ್, ಹೂವಿನ ಪಲ್ಲಕ್ಕಿಯನ್ನು ಹೊತ್ತ ಇಬ್ಬರು ಸೇವಕರೊಂದಿಗೆ ಮಹಾರಾಣಿ, ಖೆಡ್ಡಾ ಆಪರೇಷನ್‍ನಲ್ಲಿ ಮೂರು ಆನೆ ಮತ್ತು ಒಬ್ಬ ಮಾವುತ, ಫಲಪುಷ್ಪ ಪ್ರದರ್ಶನದ ಪ್ರವೇಶ ದ್ವಾರದಲ್ಲಿ ಎರಡು ಕಡೆ ಗದೆಯ ಮಾದರಿಯ ಚಿತ್ರಗಳ ಸ್ವಾಗತ ದ್ವಾರಗಳನ್ನು ಹೂವು, ಫೋಲಿಯೇಜ್‍ಗಳಿಂದ ಅಲಂಕರಿಸಲಾಗುತ್ತಿದೆ. ದೇಶದ ಬೆನ್ನೆಲುಬಾದ ರೈತನ ನೆನಪಿಗಾಗಿ ನೇಗಿಲು ಹೊತ್ತ ರೈತ, ಚಿತ್ರದುರ್ಗದ ಕಲ್ಲಿನ ಕೋಟೆಯ ಒನಕೆ ಓಬವ್ವ, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯವರು ಅಂದು ನಡೆಸಿದ ಕ್ವಿಟ್ ಇಂಡಿಯಾ ಚಳವಳಿ ಮಾದರಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮಾದರಿ ಚಿತ್ರ, ಹೆಲಿಕಾಪ್ಟರ್ ದುರಂತದಲ್ಲಿ ನಿಧನರಾದ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಆಕೃತಿ, ಭಾರತೀಯ ಸೇನಾ ವಾಯುಪಡೆಯ ಯುದ್ಧವಿಮಾನ ಹಾಗೂ ಪರಮ ವೀರ ಚಕ್ರ ಪ್ರಶಸ್ತಿಯ ಅಭಿನಂದನ್ ಆಕೃತಿ, ಕೋವಿಡ್-19 ಬಗ್ಗೆ ಜಾಗೃತಿ ಮೂಡಿಸಲು ನಿಯಂತ್ರಣ ಕ್ರಮಗಳ ಮಾದರಿ ಚಿತ್ರ, ಮಕ್ಕಳ ಆಕರ್ಷಣೆಗಾಗಿ ಕ್ರೀಡೆಗಳ ಮಾದರಿಯಲ್ಲಿ ಕಾರ್ಟೂನ್ ಚಿತ್ರಗಳಾದ ಹಾಕಿ, ಫುಟ್‍ಬಾಲ್, ಹಾಗೂ ಇತರೆ ಚಿತ್ರಗಳನ್ನು ಹೂವುಗಳಿಂದ ಅಲಂಕರಿಸಲಾಗುತ್ತಿದೆ. ಡಿ.25ರಿಂದ ಆರಂಭವಾಗಿ ಜ.2ರವರೆಗೂ ನಡೆಯಲಿರುವ ಫಲಪುಷ್ಪ ಪ್ರದರ್ಶನದಲ್ಲಿನ ಆಕೃತಿಗಳನ್ನು ಕೊನೆ ದಿನದವರೆಗೂ ತಾಜಾತನದಿಂದ ಕಾಪಾಡುವ ನಿಟ್ಟಿನಲ್ಲಿ ಅಲಂಕಾರಕ್ಕೆ ಬಳಸಿರುವ ಹೂವು,ತರಕಾರಿಗಳನ್ನು ಒಂದು ಬಾರಿ ಬದಲಿಸಲು ಕ್ರಮ ಕೈಗೊಳ್ಳಲಾಗಿದೆ.

ಔಷಧೀಯ ಸಸ್ಯ ವಿತರಣೆ: ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಲು ಬರುವ ಗಣ್ಯರೂ ಸೇರಿದಂತೆ 500 ಜನರಿಗೆ ಸಾಂಕೇತಿಕವಾಗಿ ಔಷಧಿಯುಕ್ತ ಗಿಡಗಳಾದ ಅಲೋವೆರ, ತುಳಸಿ, ಮಲ್ಲಿಗೆ, ವೀಳ್ಯೆದೆಲೆ ಹಾಗೂ ಇತರೆ ಗಿಡಗಳನ್ನು ವಿತರಿಸಲಾ ಗುತ್ತದೆ. ಇದೇ ವೇಳೆ ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ವತಿಯಿಂದ ಗಿಡಮೂಲಿಕೆಗಳ ಪ್ರದರ್ಶನ, ಪೌಷ್ಟಿಕಾಂಶಗಳ ಮಾಪಿಸುವುದು, ನಾಡಿ ಪರೀಕ್ಷೆ ಮಾಡುವುದು, ಆಯುರ್ವೇದದಲ್ಲಿ ಆರೋಗ್ಯಯುತ ಜೀವನ ಹಾಗೂ ಆಯುರ್ವೇದದ ಇತರೆ ಮಾಹಿತಿ ನೀಡಲಾಗುವುದು. ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸುವ ಸಮಯದಲ್ಲಿ ಶ್ರೀ ಜಯಚಾಮರಾಜ ಒಡೆಯರ್‍ರವರು ರಚಿಸಿರುವ ಕೀರ್ತನೆಗಳು ಸೇರಿದಂತೆ ಚಿssiಛಿಚಿಟ Iಟಿsಣಡಿumeಟಿಣಚಿಟ ಒusiಛಿ ಅನ್ನು ಕೇಳುವ ಅವಕಾಶವಿದೆ.

ದೀಪಾಲಂಕಾರ: ಫಲಪುಷ್ಪ ಪ್ರದರ್ಶನದ ಅಂಗವಾಗಿ ಅರಮನೆಯ ಸೊಬಗನ್ನು ಹೆಚ್ಚಿಸಲು ಅರಮನೆಯ ವಿದ್ಯುತ್ ದೀಪಾಲಂಕಾರವನ್ನು ಸಂಜೆ 7ರಿಂದ 8.30 ರವರೆಗೆ ಮಾಡಲಾಗುತ್ತದೆ. ಡಿ.25 ರಿಂದ 27ರವರೆಗೆ ಸಂಜೆ 7 ರಿಂದ 9ರವರೆಗೆ ಮೂರು ದಿನಗಳ ಕಾಲ ಸಾಂಸ್ಕøತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಎರಡು ಡೋಸ್ ಲಸಿಕೆ ಪಡೆದಿರುವವರಿಗೆ ಮಾತ್ರ ಅರಮನೆ ಪ್ರವೇಶಿಸಲು ಕ್ರಮ ಕೈಗೊಳ್ಳಲಾಗಿದೆ. ಲಸಿಕೆ ಪಡೆದಿರುವ ಪ್ರಮಾಣ ಪತ್ರ ಪ್ರದರ್ಶಿಸಿದರೆ ಮಾತ್ರ ಅವಕಾಶ ನೀಡಲಾಗುತ್ತದೆ. ಕೋಟೆ ಆಂಜನೇಸ್ವಾಮಿ ದೇವಾಲಯದ(ಉತ್ತರ ದ್ವಾರ) ಗೇಟ್ ಹಾಗೂ ವರಹಾ ಗೇಟ್‍ನಿಂದ ಮಾತ್ರ ಫಲಪುಷ್ಫ ಪ್ರದರ್ಶನ ವೀಕ್ಷಣೆಗೆ ಬರಲು ಅವಕಾಶ ಕಲ್ಪಿಸಲಾಗುತ್ತದೆ. ಎರಡೂ ಗೇಟ್ ಬಳಿ ಫಲಕವೊಂದರಲ್ಲಿ ಕೋವಿಡ್ ಲಸಿಕೆ ಪಡೆದಿರುವುದನ್ನು ಖಚಿತ ಪಡಿಸಲು ಮೊಬೈಲ್ ಸಂಖ್ಯೆಯನ್ನು ಪ್ರದರ್ಶಿಸಲಾಗಿದ್ದು, ಅದಕ್ಕೆ ಮಿಸ್ಡ್ ಕಾಲ್ ನೀಡಿದರೆ ಲಸಿಕೆ ಪಡೆದಿರುವ ಪ್ರಮಾಣ ಪತ್ರ ಪ್ರದರ್ಶನವಾಗಲಿದೆ.

Translate »