ಬೆಂಗಳೂರು, ಡಿ.22(ಕೆಎಂಶಿ)-ಮಹಾರಾಷ್ಟ್ರ ಏಕೀಕರಣ ಸಮಿತಿ ನಿಷೇಧಿಸುವಂತೆ ಆಗ್ರಹಿಸಿ, ಕನ್ನಡಪರ ಸಂಘಟನೆ ಗಳು ಡಿ.31ರಂದು ರಾಜ್ಯ ಬಂದ್‍ಗೆ ಕರೆ ನೀಡಿವೆ.
ಡಿಸೆಂಬರ್ 29 ರೊಳಗೆ ಎಂಇಎಸ್ ನಿಷೇಧ ಮಾಡದಿದ್ದರೆ, ಅಂದು ಶಾಂತಿ ಯುತ ಬಂದ್ ಆಚರಿಸುವುದಾಗಿ ಸಂಘಟನೆ ಗಳು ಹೇಳಿಕೊಂಡಿವೆ. ವಾಟಾಳ್ ನಾಗ ರಾಜ್ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಇಂದು ಸಭೆ ಸೇರಿ ಬಂದ್ ನಿರ್ಧಾರ ಕೈಗೊಂಡಿವೆ. ವಾಟಾಳ್ ಕರೆಗೆ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣಗೌಡ ವಿರೋಧ ವ್ಯಕ್ತಪಡಿಸಿ, ಬಂದ್‍ಗೂ ನಮಗೂ ಸಂಬಂಧವಿಲ್ಲ. ಕೋವಿಡ್‍ನಿಂದ ಜನ ನರಳಿ ಇದೀಗ ಹೊಟ್ಟೆಪಾಡಿಗೆ ಕೂಲಿನಾಲಿ ಮಾಡು ತ್ತಿದ್ದಾರೆ. ಅಂತಹವರ ಹೊಟ್ಟೆ ಮೇಲೆ ಹೊಡೆಯಬಾರದು. ಪ್ರತಿಭಟನೆ ನಡೆಸುವುದರ ಮೂಲಕ ಸರ್ಕಾರದ ಗಮನ ಸೆಳೆದು ಎಂಇಎಸ್‍ನ್ನು ನಿಷೇಧಿಸಲು ಒತ್ತಾಯಿಸಬೇಕೆಂಬ ನಿಲುವು ತೆಗೆದುಕೊಂಡಿದ್ದಾರೆ.
ನಾರಾಯಣಗೌಡ ಅವರ ಹೇಳಿಕೆಗೆ ಮನ್ನಣೆ ನೀಡದ ವಾಟಾಳ್ ಪಡೆ, ಒಂದೆರಡು ಸಂಘಟನೆಗಳು ವಿರೋಧ ಮಾಡಬಹುದು. ಉಳಿದೆಲ್ಲವೂ ಒಗ್ಗಟ್ಟಾಗಿವೆ. ನಮ್ಮ ನೆಲ, ಜಲ ಉಳಿವಿಗಾಗಿ ನಮ್ಮ ಹೋರಾಟ ಎಂದಿದ್ದಾರೆ. ನಮ್ಮ ಹಕ್ಕು ಕಸಿಯಲು ಮತ್ತು ಕನ್ನಡ ಭಾಷೆಗೆ ಮಸಿ ಬಳಿಯಲು ಮರಾಠಿಗರು ಮತ್ತು ಸಂಘಟನೆಗಳು ನಿರಂತರವಾಗಿ ಪ್ರಯತ್ನ ಮಾಡುತ್ತಿವೆ. ಅಂತಹ ಸಂಘ ಟನೆಯನ್ನು ನಿಷೇಧಿಸುವಂತೆ ಸರ್ಕಾರಕ್ಕೆ ಗಡುವು ನೀಡಿದ್ದೇವೆ. ಗಡುವಿನೊಳಗೆ ನಿಷೇಧ ಮಾಡಿದರೆ, ಡಿಸೆಂಬರ್ 31 ರಂದು ಕರೆಯಲಾಗಿದ್ದ ಬಂದ್‍ನ್ನು ಹಿಂದಕ್ಕೆ ಪಡೆ ಯುತ್ತೇವೆ. ನಮ್ಮ ಹೋರಾಟಕ್ಕೆ ಕನ್ನಡಪರ ಸಂಘಟನೆಗಳು ಅಷ್ಟೇ ಅಲ್ಲದೆ, ಹೊಟೇಲ್ ಉದ್ಯಮ, ಸಿನಿಮಾ, ಖಾಸಗಿ ಸಾರಿಗೆ, ಕಾರ್ಮಿಕ ಸಂಘಟನೆಗಳು ಈಗಾಗಲೇ ಬೆಂಬಲ ವ್ಯಕ್ತಪಡಿಸಿವೆ. ಬಂದ್ ದಿನ ಇಡೀ ಚಿತ್ರೋದ್ಯಮ ನಿಶಬ್ದಗೊಳ್ಳಲಿದೆ. ಅಂದು ಸಿನಿಮಾ ಮಂದಿರ ಗಳು ಇರುವುದಿಲ್ಲ. ಹೊರಾಂಗಣ ಚಿತ್ರೀಕರಣ ಸೇರಿ ದಂತೆ ಎಲ್ಲ ಚಟುವಟಿಕೆಗಳು ಸ್ಥಗಿತಗೊಳಿಸುವುದಾಗಿ ಚಿತ್ರ ನಿರ್ಮಾಪಕ ಹಾಗೂ ಫಿಲ್ಮ್ ಛೇಂಬರ್‍ನ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದ್ ತಿಳಿಸಿದ್ದಾರೆ. ಅಂದು ರಾಜಧಾನಿಯಲ್ಲಿ ಬೃಹತ್ ರ್ಯಾಲಿ ನಡೆಸಿ, ಎಲ್ಲ ಸಂಘಟನೆಗಳು ಒಂದೇ ವೇದಿಕೆಯಲ್ಲಿ ನಮ್ಮ ನೆಲ-ಜಲದ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ, ಎಂಇಎಸ್ ನಿಷೇಧಕ್ಕೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು. ಈ ಸಂಘಟನೆ ನಿಷೇಧ ಮಾಡುವವರೆಗೂ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತಿದೆ ಎಂದು ವಾಟಾಳ್ ನಾಗರಾಜ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.