ಮೈಸೂರಿಗೂ ವಕ್ಕರಿಸಿದ ಒಮಿಕ್ರಾನ್
ಮೈಸೂರು

ಮೈಸೂರಿಗೂ ವಕ್ಕರಿಸಿದ ಒಮಿಕ್ರಾನ್

December 24, 2021

ಮೈಸೂರು,ಡಿ.23(ಆರ್‍ಕೆ)-ಬೆಂಗಳೂರು, ಬೆಳಗಾವಿಯಲ್ಲಿ ಕಾಣಿಸಿಕೊಂಡಿದ್ದ ಕೊರೊನಾ ರೂಪಾಂತರಿ ಒಮಿಕ್ರಾನ್ ಪ್ರಕರಣ ಇಂದು ಮೈಸೂ ರಲ್ಲಿ ಪತ್ತೆಯಾಗಿದೆ. ಇದನ್ನು ದೃಢಪಡಿಸಿರುವ ಮೈಸೂರು ಜಿಲ್ಲಾ ಆರೋಗ್ಯಾಧಿ ಕಾರಿ ಡಾ.ಕೆ.ಹೆಚ್.ಪ್ರಸಾದ್, ಪೋಷಕರೊಂದಿಗೆ ವಿದೇಶ ದಿಂದ ವಾಪಸ್ಸಾಗಿರುವ 9 ವರ್ಷದ ಬಾಲಕಿಗೆ ಒಮಿಕ್ರಾನ್ ಸೋಂಕು ತಗುಲಿರುವುದು ಖಾತರಿಯಾಗಿದೆ ಎಂದು ತಿಳಿಸಿ ದ್ದಾರೆ. ಸ್ವಿಟ್ಜರ್‍ಲ್ಯಾಂಡ್‍ನಿಂದ ವಾಪಸ್ಸಾದ ಅವರಿಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಡಿಸೆಂಬರ್ 19ರಂದು ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ವರದಿ ಬಂದಾಗ ಮೈಸೂರಿನ ಪೋಷಕರಿಗೆ ನೆಗೆಟಿವ್ ಬಂದಿದ್ದರೆ, ಅವರೊಂದಿಗಿದ್ದ 9 ವರ್ಷದ ಬಾಲಕಿಗೆ ಪಾಸಿಟಿವ್ ಬಂದಿರುವುದು ಇಂದು ಬೆಳಿಗ್ಗೆ ತಿಳಿಯಿತು. ನಮಗೆ ಮಾಹಿತಿ ತಲುಪುತ್ತಿದ್ದಂತೆಯೇ ಬಾಲಕಿಯನ್ನು ಪ್ರತ್ಯೇಕವಾಗಿರಿಸಿ ವೈದ್ಯಕೀಯ ಚಿಕಿತ್ಸೆ ನೀಡಿ ಆಕೆಯ ಆರೋಗ್ಯದ ಮೇಲೆ ತೀವ್ರ ನಿಗಾ ಇರಿಸಲಾಗಿದೆ ಎಂದು ಡಾ.ಪ್ರಸಾದ್ ತಿಳಿಸಿದರು. ಒಮಿಕ್ರಾನ್ ಸೋಂಕು ತಗುಲಿರುವುದು ದೃಢಪಟ್ಟಿದೆ ಯಾದರೂ, ಬಾಲಕಿಗೆ ಯಾವುದೇ ರೋಗ ಲಕ್ಷಣ ಗಳು ಕಂಡುಬಂದಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಪೋಷಕರಿಂದ ಬೇರ್ಪಡಿಸಿ ಆಕೆಯನ್ನು ಪ್ರತ್ಯೇಕ ವಾಗಿರಿಸಲಾಗಿದೆಯಲ್ಲದೆ, ಅವರ ಮೊದಲ ಮತ್ತು ಎರಡನೇ ಸಂಪರ್ಕದಲ್ಲಿದ್ದವರನ್ನು ಪತ್ತೆ ಮಾಡಿ ಕೋವಿಡ್-19 ಮಾರ್ಗ ಸೂಚಿಯಂತೆ ಅಗತ್ಯ ಕ್ರಮ ವಹಿಸಲಾಗಿದೆ ಎಂದರು. ಆ ಕುಟುಂಬದ ಸಂಪರ್ಕದಲ್ಲಿ ದವರನ್ನೂ ತಪಾಸಣೆಗೊಳಪಡಿಸಲಾ ಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ, ಅವರ ಆರೋಗ್ಯದ ಮೇಲೆ ನಿರಂತರವಾಗಿ ನಿಗಾ ವಹಿಸುತ್ತಿದ್ದು, ಸೋಂಕು ಹರಡದಂತೆ ಅಗತ್ಯ ಮುಂಜಾಗ್ರತೆ ವಹಿಸುತ್ತಿದ್ದೇವೆ. ಸದ್ಯ ಬಾಲಕಿ ಆರೋಗ್ಯದಿಂದಿದ್ದಾಳೆ ಎಂದು ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಮೊದಲ ಒಮಿಕ್ರಾನ್ ಪ್ರಕರಣ ಪತ್ತೆ ಯಾಗುತ್ತಿದ್ದಂತೆಯೇ ಎಚ್ಚೆತ್ತ ಜಿಲ್ಲಾಧಿಕಾರಿ ಡಾ .ಬಗಾದಿ ಗೌತಮ್ ತಮ್ಮ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆ, ನಗರ ಪಾಲಿಕೆ ಆರೋಗ್ಯ ವಿಭಾಗ, ಜಿಲ್ಲಾ ಪಂಚಾಯ್ತಿ ಹಾಗೂ ಮೈಸೂರು ಮೆಡಿ ಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಂದು ಒಮಿಕ್ರಾನ್ ಪಾಸಿಟಿವ್ ಪ್ರಕರಣ ಪತ್ತೆಯಾಗಿರುವುದರಿಂದ ಕಟ್ಟೆಚ್ಚರ ವಹಿ ಸುವಂತೆ ಸೂಚನೆ ನೀಡಿದರು.

ಆರ್‍ಟಿ-ಪಿಸಿಆರ್ ಟೆಸ್ಟ್, ಲಸಿಕೆ ನೀಡುವುದನ್ನು ತೀವ್ರಗೊಳಿಸಿ, ಕೋವಿಡ್ -19 ಸೋಂಕು ಹರಡದಂತೆ ತಡೆಯ ಬೇಕು, ಆಸ್ಪತ್ರೆಗಳಲ್ಲಿ ಆಕ್ಷಿಜನೇಟೆಡ್ ಬೆಡ್, ವೆಂಟಿಲೇಟರ್ ಬೆಡ್, ಐಸಿಯು, ಔಷಧ, ಸಿಬ್ಬಂದಿಗಳೂ ಸೇರಿದಂತೆ ಕೊರೊನಾ ಪ್ರಕರಣಗಳು ಹೆಚ್ಚಾದಲ್ಲಿ ಚಿಕಿತ್ಸೆ ನೀಡಲು ಸರ್ವ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳ ಬೇಕೆಂದೂ ಜಿಲ್ಲಾಧಿಕಾರಿಗಳು ಅಧಿಕಾರಿ ಗಳಿಗೆ ನಿರ್ದೇಶನ ನೀಡಿದ್ದಾರೆ. ಶಾಲಾ-ಕಾಲೇಜು, ಕಾನ್ವೆಂಟ್‍ಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಮುಖ್ಯಸ್ಥರಿಗೆ ತಾಕೀತು ಮಾಡಿ ಶಿಕ್ಷಣ ಇಲಾಖೆ ಅಧಿಕಾರಿಗಳು ನಿರಂತರ ಮೇಲ್ವಿಚಾರಣೆ ನಡೆಸುವಂತೆ ಸಲಹೆ ನೀಡುವಂತೆಯೂ ಡಾ. ಬಗಾದಿ ಗೌತಮ್ ಸೂಚಿಸಿದ್ದಾರೆ.

Translate »