ಮಳೆಯಲ್ಲಿ ಹಾನಿಗೀಡಾದ ನಾನಾ ರೀತಿಯ ರಾಶಿ ರಾಶಿ ಹೂವು
ಮೈಸೂರು

ಮಳೆಯಲ್ಲಿ ಹಾನಿಗೀಡಾದ ನಾನಾ ರೀತಿಯ ರಾಶಿ ರಾಶಿ ಹೂವು

August 2, 2020

ಮೈಸೂರು, ಆ.1(ಪಿಎಂ)- ಶುಕ್ರವಾರ ಮಧ್ಯಾಹ್ನ ಸುರಿದ ಮಳೆಗೆ ಮೈಸೂರಿನ ಜೆಕೆ ಮೈದಾನದಲ್ಲಿ ವಿವಿಧ ರೀತಿಯ ಸಾವಿರ ಕೆಜಿ ಹೂವಿಗೆ ಹಾನಿಯಾಗಿದ್ದು, ಭಾರೀ ನಷ್ಟವಾಗಿದೆ ಎಂದು ಅಳಲುತೋಡಿ ಕೊಂಡ ದೇವರಾಜ ಮಾರುಕಟ್ಟೆ ಹೂ ವ್ಯಾಪಾರಸ್ಥರು, ಮುಂದಿನ ದಿನಗಳಲ್ಲಿ ಈ ರೀತಿ ಮಾರು ಕಟ್ಟೆ ಸ್ಥಳಾಂತರ ಮಾಡಿದರೆ ಸೂಕ್ತ ಸ್ಥಳ ಆಯ್ಕೆ ಮಾಡುವಂತೆ ಮೈಸೂರು ಮಹಾ ನಗರ ಪಾಲಿಕೆಯನ್ನು ಕೋರಿದರು.

ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಜನದಟ್ಟಣೆ ಉಂಟಾಗು ವುದನ್ನು ತಡೆಗಟ್ಟಿ ಕೊರೊನಾ ನಿಯಂತ್ರಿ ಸಲು ಜು.29ರಿಂದ 31ರವರೆಗೆ ದೇವರಾಜ ಮಾರುಕಟ್ಟೆಯ ಹೂವಿನ ಸಗಟು ಮತ್ತು ಚಿಲ್ಲರೆ ಮಾರಾಟವನ್ನು ಜೆಕೆ ಮೈದಾನಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ಹಬ್ಬದ ದಿನ ವಾದ ಶುಕ್ರವಾರ ಸುರಿದ ಮಳೆಯಿಂದ ಸಾವಿರ ಕೆಜಿಯಷ್ಟು ನಾನಾ ರೀತಿಯ ಹೂಗಳಿಗೆ ಹಾನಿಯಾಯಿತು ಎಂದು ಇಲ್ಲಿನ ಹೂ ವ್ಯಾಪಾರಸ್ಥರು ಅಳಲು ತೋಡಿಕೊಂಡರು.
ಶನಿವಾರ ಹೂ ಮಾರಾಟವನ್ನು ದೇವ ರಾಜ ಮಾರುಕಟ್ಟೆಗೆ ಸ್ಥಳಾಂತರಿಸಲಾಗಿದೆ.

`ಮೈಸೂರು ಮಿತ್ರ’ನೊಂದಿಗೆ ಮಾತನಾ ಡಿದ ಗಾಯಿತ್ರಿ ಫ್ಲವರ್ ಸ್ಟಾಲ್‍ನ ಎನ್. ಮಂಜುನಾಥ್, ಕೊರೊನಾ ಮೈಸೂರಿ ನಲ್ಲಿ ತೀವ್ರವಾಗಿ ವ್ಯಾಪಿಸುತ್ತಿದೆ. ಜನರ ಆರೋ ಗ್ಯದ ದೃಷ್ಟಿಯಿಂದ ಹೂ ಮಾರುಕಟ್ಟೆ ಯನ್ನು ಹಬ್ಬದ ಸಂದರ್ಭ ಜೆಕೆ ಮೈದಾ ನಕ್ಕೆ ಸ್ಥಳಾಂತರ ಮಾಡಿದ್ದು ಒಳ್ಳೆಯದೆ. ಇಲ್ಲವಾಗಿದ್ದರೆ ದೇವರಾಜ ಮಾರುಕಟ್ಟೆ ಯಲ್ಲಿ ಜನದಟ್ಟಣೆ ಹೆಚ್ಚಾಗಿ ಸಮಸ್ಯೆ ಯಾಗುತ್ತಿತ್ತು. ಜೊತೆಗೆ ವಾಹನ ನಿಲುಗಡೆಗೂ ಸಮಸ್ಯೆಯಾಗುತ್ತಿತ್ತು ಎಂದು ಹೇಳಿದರು.

ಜೆಕೆ ಮೈದಾನದಲ್ಲಿ ಸಗಟು, ಚಿಲ್ಲರೆ ಹಾಗೂ ಹೂವಿನ ಹಾರಕ್ಕೆ ಪ್ರತ್ಯೇಕ ಸ್ಥಳಗಳನ್ನು ನಿಗದಿ ಗೊಳಿಸಿ, ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಹಬ್ಬದ ಹಿಂದಿನ ದಿನವಾದ ಗುರುವಾರ ಹೂ ತೋಟಗಳು ಇರುವ ಸ್ಥಳ ಗಳಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಹೂವಿನ ಆವಕ ಅರ್ಧಕ್ಕರ್ಧ ತಗ್ಗಿತು. ಮಾರುಕಟ್ಟೆಗೆ ಹೂ ಪೂರೈಕೆ ಇಳಿಮುಖವಾಗಿದ್ದರಿಂದ ಸಹಜವಾಗಿಯೇ ಗುರುವಾರ ಹೂವಿನ ಬೆಲೆ ಯಲ್ಲಿ ತುಸು ಏರಿಕೆಯಾಯಿತು ಎಂದರು.

Translate »