ಮೈಸೂರು ಜಿಲ್ಲಾಸ್ಪತ್ರೆ, ಕೆಆರ್ ಆಸ್ಪತ್ರೆಗೆ ಅಗತ್ಯ ಸೌಲಭ್ಯ ಕಲ್ಪಿಸಲು ಸಂಬಂಧಿಸಿದ ಇಲಾಖೆಗಳಿಗೆ ಸಿಎಂ ಸೂಚನೆ
ಮೈಸೂರು

ಮೈಸೂರು ಜಿಲ್ಲಾಸ್ಪತ್ರೆ, ಕೆಆರ್ ಆಸ್ಪತ್ರೆಗೆ ಅಗತ್ಯ ಸೌಲಭ್ಯ ಕಲ್ಪಿಸಲು ಸಂಬಂಧಿಸಿದ ಇಲಾಖೆಗಳಿಗೆ ಸಿಎಂ ಸೂಚನೆ

August 2, 2020

ಮೈಸೂರು, ಆ.1(ಪಿಎಂ)- ಮೈಸೂರು ಜಿಲ್ಲಾಸ್ಪತ್ರೆ (ಕೋವಿಡ್ ಆಸ್ಪತ್ರೆ) ಹಾಗೂ ಕೆಆರ್ ಆಸ್ಪತ್ರೆಗೆ ಅಗತ್ಯವಿರುವ ಮೂಲಭೂತ ಸೌಲಭ್ಯ, ಮಾನವ ಸಂಪನ್ಮೂಲ ಹಾಗೂ ಯಂತ್ರೋಪಕರಣ ಒದಗಿಸಲು ಸಲ್ಲಿಸಿದ್ದ ಮನವಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿ ಯೂರಪ್ಪ ಸ್ಪಂದಿಸಿದ್ದು, ಸಂಬಂಧಿಸಿದ ಇಲಾಖೆಗಳಿಗೆ ಕ್ರಮ ವಹಿಸಲು ಸೂಚಿಸಿ ದ್ದಾರೆ ಎಂದು ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಮುಖ್ಯವಾಗಿ ವೆಂಟಿಲೇಟರ್, ಸ್ಟಾಫ್ ನರ್ಸ್, ಸ್ವಚ್ಛತಾ ಕಾರ್ಮಿಕರು, ಅಟೆಂಡರ್ಸ್ ಸೇರಿದಂತೆ ಅಗತ್ಯವಿರುವ ಎಲ್ಲಾ ಮೂಲ ಭೂತ ಸೌಲಭ್ಯ ಕಲ್ಪಿಸಲು ಸಿಎಂ ಅವರಿಗೆ ಮನವಿ ಮಾಡಲಾಗಿತ್ತು ಎಂದರು.

ಈ ಸಂಬಂಧ ಮುಖ್ಯಮಂತ್ರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ವೈದ್ಯ ಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯ ದರ್ಶಿಗಳಿಗೆ ಸೂಚನೆ ನೀಡಿದ್ದಾರೆ. ಎರಡೂ ಆಸ್ಪತ್ರೆಗಳಿಗೂ ಒಟ್ಟಾರೆಯಾಗಿ 50 ವೆಂಟಿ ಲೇಟರ್ ನೀಡಲು ಕ್ರಮ ವಹಿಸಲು ನಿರ್ದೇ ಶನ ನೀಡಿದ್ದಾರೆ. ಅಗತ್ಯ ವಿರುವ ಸೌಲಭ್ಯ ಒದ ಗಿಸುವ ಸಂಬಂಧ ಹಣಕಾಸು ಇಲಾಖೆ ಮಂಜೂರಾತಿ ನೀಡಿದೆ ಎಂದು ಎಸ್.ಎ. ರಾಮ ದಾಸ್ ಹೇಳಿದರು.

ಕೆಆರ್ ಕ್ಷೇತ್ರದಲ್ಲಿ ಕೊರೊನಾ ಸೋಂಕಿ ತರ ಪ್ರಾಥಮಿಕ ಸಂಪರ್ಕ ಹೊಂದಿರುವ ಎಲ್ಲರನ್ನೂ ಪರೀಕ್ಷೆ ಮಾಡಿಸಲಾಗಿದೆ. ಕೆಆರ್ ಕ್ಷೇತ್ರ ಮಾತ್ರವಲ್ಲದೆ, ಮೈಸೂರು ನಗರದ ನಿರ್ದಿಷ್ಟ ಪ್ರದೇಶದಲ್ಲಿ ವಿವಿಧ ರೀತಿಯ ಹೈರಿಸ್ಕ್ ರೋಗಿಗಳ ಮಾಹಿತಿ ಕಲೆ ಹಾಕ ಲಾಗಿದೆ. ಉಸಿರಾಟದ ಸಮಸ್ಯೆ, ಕಿಡ್ನಿ ಸಮಸ್ಯೆ, ಕ್ಯಾನ್ಸರ್ ಹೀಗೆ ನಾನಾ ರೀತಿಯಲ್ಲಿ ರಿಸ್ಕ್ ಇರುವ ರೋಗಿಗಳು ಯಾವ್ಯಾವ ಮನೆ ಯಲ್ಲಿದ್ದಾರೆ ಎಂದು ಸರ್ವೇ ಮಾಡಿಸಿ ದ್ದೇವೆ. ಇದೊಂದು ಪ್ರಾಯೋಗಿಕ ಕಾರ್ಯಕ್ರಮ ಎಂದು ತಿಳಿಸಿದರು.

ಕೆಆರ್ ಕ್ಷೇತ್ರವನ್ನು ಕೊರೊನಾದಿಂದ ಸಾವಿ ಲ್ಲದ ಕ್ಷೇತ್ರವಾಗಿಸಲು ಪ್ರಯತ್ನಿಸಿದರೂ ಎರಡು ಸಾವು ಸಂಭವಿಸಿದ್ದು, ಇದು ನೋವಿನ ಸಂಗತಿ. ಈವರೆಗೆ ಕ್ಷೇತ್ರದಲ್ಲಿ ಒಟ್ಟು 268 ಪಾಸಿಟಿವ್ ಕೇಸ್‍ಗಳು ದಾಖಲಾಗಿವೆ. ಕೊರೊನಾ ನಿಯಂತ್ರಿಸಲು ಎಲ್ಲಾ ಮುನ್ನೆಚ್ಚ ರಿಕಾ ಕ್ರಮಗಳನ್ನು ಕ್ಷೇತ್ರದಲ್ಲಿ ಕೈಗೊಳ್ಳ ಲಾಗಿದೆ ಎಂದರು.

ಆ.5ರಿಂದ ಜಾತಿ, ಆದಾಯ ಪ್ರಮಾಣ ಪತ್ರಕ್ಕೆ ಅರ್ಜಿ: ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಪ್ರಯೋಜನ ಪಡೆಯಲು ಬ್ರಾಹ್ಮಣ ಸಮುದಾಯದ ಆರ್ಥಿಕವಾಗಿ ಹಿಂದುಳಿದವರು ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕಾಗಿ ಆ.5ರಿಂದ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು ಎಂದರು.

ರಾಜ್ಯ ಸರ್ಕಾರ ಆರ್ಥಿಕವಾಗಿ ಹಿಂದು ಳಿದ ಬ್ರಾಹ್ಮಣ ಸಮುದಾಯದವರಿಗೆ ಆರ್ಥಿ ಕತೆ, ಶಿಕ್ಷಣ ಹಾಗೂ ಕೌಶಲಾಭಿವೃದ್ಧಿಗೆ ಮಂಡಳಿ ರಚನೆ ಮಾಡಿದೆ. ಮಂಡಳಿ ಮೂಲಕ ಪ್ರಯೋಜನ ಪಡೆಯಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಜರು ಪಡಿಸ ಬೇಕಿತ್ತು. ಆದರೆ ರಾಜ್ಯದಲ್ಲಿ ಬ್ರಾಹ್ಮಣ ಸಮು ದಾಯಕ್ಕೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯುವ ವ್ಯವಸ್ಥೆ ಇರಲಿಲ್ಲ ಎಂದರು.

ಬ್ರಾಹ್ಮಣ ಸಮುದಾಯಕ್ಕೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ವಿತರಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶಿಸಲಾಗಿತ್ತು. ಆದರೆ ತಂತ್ರಾಂಶದಲ್ಲಿ ಕೆಲವು ತೊಡಕುಗಳು ಉಂಟಾಗಿದ್ದವು. ಇದೀಗ ಆ.5ರಿಂದ ಎಲ್ಲ ಸಮಸ್ಯೆ ನಿವಾರಿಸಿ ಪ್ರಮಾಣ ಪತ್ರ ಕೊಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ಮೀಸಲಾತಿ ಇಲ್ಲದ ಆರ್ಥಿಕವಾಗಿ ಹಿಂದು ಳಿದ ಮೇಲ್ವರ್ಗದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲು ಕಲ್ಪಿಸಲು ಲೋಕ ಸಭೆಯಲ್ಲಿ ಬಿಲ್ ಪಾಸು ಮಾಡಿ ಆದೇಶ ಹೊರಡಿಸಿದ್ದರು. ಇದನ್ನು ಹಲವು ರಾಜ್ಯಗಳಲ್ಲಿ ಜಾರಿ ಮಾಡಲಾಗಿದೆ. ಆದರೆ ರಾಜ್ಯದಲ್ಲಿ ಜಾರಿಗೆ ಬಂದಿರಲಿಲ್ಲ. ಮುಖ್ಯಮಂತ್ರಿ ಯಡಿ ಯೂರಪ್ಪ ಅವರಿಗೆ ಈ ಸಂಬಂಧ ಮನವಿ ಮಾಡಿದ ಹಿನ್ನೆಲೆಯಲ್ಲಿ ಸಮಿತಿ ರಚಿಸಿದ್ದರು. ಸಮಿತಿ ವರದಿ ಶೀಘ್ರ ಜಾರಿಗೆ ತರುವ ಮನವಿಗೆ ಸಿಎಂ ಒಪ್ಪಿದ್ದಾರೆ ಎಂದರು.

ಈಗಾಗಲೇ ಸರ್ವೇ ಆಫ್ ಇಂಡಿಯಾ 2018-19ರ ಸಾಲಿನಲ್ಲಿ ಜಾತಿ ಸಮೀಕ್ಷೆ ಮಾಡಿದ್ದು, ಹೀಗಾಗಿ ಬ್ರಾಹ್ಮಣ ಸಮು ದಾಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯುವಲ್ಲಿ ನಕಲು ಆಗಲು ಸಾಧ್ಯವಿಲ್ಲ. ಸರ್ಕಾರದ ಬಳಿ ದಾಖಲಾತಿ ಇದೆ ಎಂದು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು

Translate »