ಶೌಚಾಲಯ ನಿರ್ಮಿಸಿಕೊಟ್ಟರೂ ಬಳಸದ ಜನತೆ
ಮೈಸೂರು

ಶೌಚಾಲಯ ನಿರ್ಮಿಸಿಕೊಟ್ಟರೂ ಬಳಸದ ಜನತೆ

July 31, 2020

ಮೈಸೂರು, ಜು.30(ಆರ್‍ಕೆಬಿ)- ಶೌಚಾಲಯ ಗಳಿದ್ದರೂ ಅದರ ಬಳಕೆ ಪ್ರಮಾಣ ಕಡಿಮೆಯಾಗು ತ್ತಿದೆ. ಯಾವ ಉದ್ದೇಶಕ್ಕಾಗಿ ಶೌಚಾಲಯ ಬಳಸ ಬೇಕೋ ಆ ಉದ್ದೇಶ ಈಡೇರುತ್ತಿಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಂ ಬೇಸರ ವ್ಯಕ್ತಪಡಿಸಿದರು.

ಮೈಸೂರು ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ನೀರಿನ ಕೊರತೆ, ಶೌಚಾಲಯ ಬಳಕೆ ಬಗ್ಗೆ ಅರಿವಿಲ್ಲದಿರುವುದು, ಅಲ್ಲದೆ ಮನೆಯಂಗಳದಲ್ಲಿ ಶೌಚಾಲಯವೇಕೆ? ಎಂಬ ಮನ ಸ್ಥಿತಿಯಿಂದಾಗಿ ಶೌಚಾಲಯಗಳ ಬಳಕೆ ಕಡಿಮೆ ಇದೆ. ಬಯಲುಶೌಚದಿಂದ ಸಾಂಕ್ರಾಮಿಕ ರೋಗ ಹರಡು ತ್ತದೆಂಬ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸಬೇಕಿದೆ. ಆ ನಿಟ್ಟಿನಲ್ಲಿ 1 ವಾರದ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಸಪ್ತಾಹ ಹೆಚ್ಚು ಪ್ರಯೋಜನಕಾರಿಯಾಗಬೇಕು. ಜನಜಾಗೃತಿ ಅಗತ್ಯವಿದೆ. ಇದರ ಬಗ್ಗೆ ಹೆಚ್ಚು ಪ್ರಚಾರ ಆಗಬೇಕು ಎಂದು ಹೇಳಿದರು.

ಕುಡಿಯುವ ನೀರು, ಗ್ರಾಮೀಣ ನೈರ್ಮಲ್ಯ ವಿಚಾರ ದಲ್ಲಿ ಮಾಡಬೇಕಾದ್ದು ಬಹಳಷ್ಟಿದೆ. ಮೂಲಸೌಕರ್ಯ ಗಳನ್ನು ಕಲ್ಪಿಸಲು ಸಾಕಷ್ಟು ಶ್ರಮ ಅಗತ್ಯ. ನಿರ್ವ ಹಣೆಯೂ ಉತ್ತಮವಾಗಬೇಕು ಎಂದು ಹೇಳಿದರು.

ಗ್ರಾಮೀಣ ಪ್ರದೇಶದಲ್ಲಿ ಕೃಷಿಕರು, ಕೂಲಿ ಕಾರ್ಮಿಕ ಕುಟುಂಬಗಳಿಗೆ ನೈರ್ಮಲ್ಯ ಕಾರಣದಿಂದ ಕಾಯಿಲೆ ಗಳು ಬಂದರೆ ಅವರು ಆರ್ಥಿಕವಾಗಿ ಹಿನ್ನಡೆ ಅನು ಭವಿಸುತ್ತಾರೆ, ಜೊತೆಗೆ ಮಕ್ಕಳ ಶೈಕ್ಷಣಿಕ ಭವಿಷ್ಯವೂ ಹಾಳಾಗುತ್ತದೆ. ಇದಕ್ಕಾಗಿ ನೈರ್ಮಲ್ಯಕ್ಕೆ ಹೆಚ್ಚಿನ ಮಹತ್ವ ಕೊಡಬೇಕಾಗುತ್ತದೆ. ಅಧಿಕಾರಿ, ಸಿಬ್ಬಂದಿ ಬದ್ಧತೆಯಿಂದ ಕೆಲಸ ಮಾಡಿದರೆ ನಿರೀಕ್ಷಿತ ಯಶಸ್ಸು ಸಾಧ್ಯ. ಇದಕ್ಕೆ ಸಾಕ್ಷರತಾ ಅಭಿಯಾನ ಕಾರ್ಯಕರ್ತರು ಹಾಗೂ ಸಂಘ ಸಂಸ್ಥೆಗಳು, ಮಹಿಳಾ ಸಂಘಟನೆಗಳನ್ನು ಬಳಸಿ ಕೊಳ್ಳÀಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ವಿಶೇಷ ಅಭಿಯಾನ: ಜಿಪಂ ಸಿಇಓ ಪ್ರಶಾಂತ್ ಕುಮಾರ್ ಮಿಶ್ರಾ, 1 ವರ್ಷದಲ್ಲಿ ಕೈಗೊಂಡ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾರ್ಯ ಕ್ರಮಗಳ ವಿವರವನ್ನು ಸಭೆಗೆ ನೀಡಿದರು.

ಒಟ್ಟು 17.55 ಲಕ್ಷ ಜನಸಂಖ್ಯೆ ಹಾಗೂ 5.36 ಲಕ್ಷ ಕುಟುಂಬಗಳನ್ನು ಹೊಂದಿರುವ ಮೈಸೂರು ಜಿಲ್ಲೆ ಯಲ್ಲಿ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯಡಿ ಸ್ವಚ್ಛ ಭಾರತ ಮಿಷನ್ (ಗ್ರಾ) ಹಾಗೂ ಜಲಜೀವನ್ ಯೋಜನೆ ಮೂಲಕ `ಸ್ವಚ್ಛ ಮೈಸೂರು ಜಿಪಂ’ ರೂಪಿಸಲು ಅನೇಕ ಕಾರ್ಯಕ್ರಮ ಹಮ್ಮಿ ಕೊಂಡಿದ್ದೇವೆ. 2019-20ರಲ್ಲಿ 1,22,649 ಕುಟುಂಬ ಗಳಿಗೆ ಎಫ್‍ಹೆಚ್‍ಟಿಸಿ ಸಂಪರ್ಕ ಕಲ್ಪಿಸಿದ್ದು, ಮುಂದಿನ ದಿನಗಳಲ್ಲಿ 2,04,053 ಕುಟುಂಬಗಳಿಗೆ ಸಂಪರ್ಕ ನೀಡುವ ಗುರಿ ಇದೆ ಎಂದರು.

ಇದೇ ಸಂದರ್ಭ ಪರಿಸರ ದಿನಾಚರಣೆ ಅಂಗ ವಾಗಿ ಜಿಪಂನಿಂದ ಏರ್ಪಡಿಸಿದ್ದ `ಸ್ವಚ್ಛ ಗ್ರಾಮ-ಸ್ವಚ್ಛ ಪರಿಸರ’ ಸ್ಪರ್ಧೆ ವಿಜೇತರಿಗೆ ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ ಪ್ರಶಸ್ತಿಪತ್ರ ವಿತರಿಸಿದರು. ಶೌಚಾ ಲಯ ಬಳಕೆ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಉಪಾಧ್ಯಕ್ಷೆ ಮಂಗಳಾ ಸೋಮಶೇಖರ್, ಜಿಲ್ಲಾ ಧಿಕಾರಿ ಅಭಿರಾಂ ಜಿ.ಶಂಕರ್ ಉಪಸ್ಥಿತರಿದ್ದರು

Translate »