1-2 ತಿಂಗಳಲ್ಲಿ ಪ್ರತಿ ದಿನ 10 ಲಕ್ಷ ಕೋವಿಡ್-19 ಟೆಸ್ಟ್
ಮೈಸೂರು

1-2 ತಿಂಗಳಲ್ಲಿ ಪ್ರತಿ ದಿನ 10 ಲಕ್ಷ ಕೋವಿಡ್-19 ಟೆಸ್ಟ್

July 31, 2020

ನವದೆಹಲಿ, ಜು.30- ಒಂದೆರಡು ತಿಂಗಳುಗಳಲ್ಲಿ ಪ್ರತಿ ದಿನ 10 ಲಕ್ಷ ಕೋವಿಡ್-19 ಸೋಂಕು ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ.

ಭಾರತದಲ್ಲಿ ಈಗ ದಿನಂಪ್ರತಿ 5 ಲಕ್ಷ ಸೋಂಕು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಮುಂದಿನ ಒಂದು ಅಥವಾ ಎರಡು ತಿಂಗಳಲ್ಲಿ ಈ ಸಂಖ್ಯೆ ಯನ್ನು ದುಪ್ಪಟ್ಟು ಮಾಡುವ ಗುರಿ ಹೊಂದಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಕೋವಿಡ್-19ಗೆ ಸಂಬಂಧಿಸಿದ ವೈಜ್ಞಾನಿಕ ಮತ್ತು ಕೈಗಾ ರಿಕಾ ಸಂಶೋಧನೆ ತಂತ್ರಜ್ಞಾನಗಳ (ಸಿಎಸ್‍ಐಆರ್) ಸಂಗ್ರಹವನ್ನು ಬಿಡುಗಡೆ ಮಾಡಿ ಮಾತನಾಡಿರುವ ಹರ್ಷವರ್ಧನ್, ಕೋವಿಡ್-19ನ್ನು ಎದುರಿಸುವುದಕ್ಕಾಗಿ ವೈದ್ಯ ಕೀಯ ಸಮುದಾಯದ ಜೊತೆಗೆ ಶ್ರಮಿಸುತ್ತಿರುವ ವೈಜ್ಞಾ ನಿಕ ಸಮುದಾಯವನ್ನೂ ಸಚಿವರು ಪ್ರಶಂಸಿಸಿದ್ದಾರೆ. ಬಹುತೇಕ ವೆಂಟಿಲೇಟರ್‍ಗಳನ್ನು ದೇಶದಲ್ಲೇ ತಯಾರಿಸಲಾಗುತ್ತಿದೆ. ಭಾರತ ಹೈಡ್ರಾಕ್ಸಿಕ್ಲೋರೊಕ್ವಿನ್ ಔಷಧ ವನ್ನು 150 ದೇಶಗಳಿಗೆ ರಫ್ತು ಮಾಡುತ್ತಿದೆ. ಏಪ್ರಿಲ್‍ನಲ್ಲಿ ದಿನವೊಂದಕ್ಕೆ 6,000 ಪರೀಕ್ಷೆಗಳಷ್ಟೇ ನಡೆಯುತ್ತಿತ್ತು. ಈಗ ದಿನವೊಂದಕ್ಕೆ 5 ಲಕ್ಷ ಸೋಂಕು ಪರೀಕ್ಷೆ ನಡೆಸಲಾಗುತ್ತಿದೆ ಎಂದು ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.

Translate »