ಕೋವಿಡ್-19 ಮಾರ್ಗಸೂಚಿ ಅನುಸರಿಸಿ  ಹಂತ ಹಂತವಾಗಿ ಏರುತ್ತಿದೆ   ವಿದ್ಯಾರ್ಥಿಗಳ ಹಾಜರಾತಿ
ಮೈಸೂರು

ಕೋವಿಡ್-19 ಮಾರ್ಗಸೂಚಿ ಅನುಸರಿಸಿ  ಹಂತ ಹಂತವಾಗಿ ಏರುತ್ತಿದೆ  ವಿದ್ಯಾರ್ಥಿಗಳ ಹಾಜರಾತಿ

January 5, 2021

ಮೈಸೂರು, ಜ.4(ಆರ್‍ಕೆಬಿ)- ಕೋವಿಡ್ ಲಾಕ್ ಡೌನ್ ಮತ್ತು ನಂತರದ ಮಾರ್ಗಸೂಚಿಗಳಿಂದಾಗಿ ಕಳೆದ 9 ತಿಂಗಳಿನಿಂದ ಮನೆಯಲ್ಲಿಯೇ ಉಳಿದಿದ್ದ ವಿದ್ಯಾರ್ಥಿಗಳು ಆನ್‍ಲೈನ್ ತರಗತಿಗಳಿಂದ ಬೇಸತ್ತು, ಜ.1ರಿಂದ ಆರಂಭಗೊಂಡಿರುವ ಶಾಲಾ ಕಾಲೇಜು ಗಳ 10 ಮತ್ತು 12ನೇ ತರಗತಿಗಳಿಗೆ ಹಾಜರಾಗುತ್ತಿದ್ದಾರೆ.

ತರಗತಿ ಆರಂಭವಾಗಿ 3ನೇ ದಿನವಾದ ಇಂದು ಶೇ. 60ರಷ್ಟು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುವ ಮೂಲಕ ಪಾಠ ಪ್ರವಚನಗಳತ್ತ ಮುಖ ಮಾಡಿದ್ದಾರೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದು, ಸ್ಯಾನಿಟೈಸರ್ ಬಳಕೆ ಸೇರಿದಂತೆ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಶಾಲಾ ಕಾಲೇಜು ಗಳಲ್ಲಿ ಪಾಲಿಸಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜು ಗಳ ಪ್ರವೇಶ ದ್ವಾರದಲ್ಲಿಯೇ ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಿಸಿ, ಕೈಗಳಿಗೆ ಸ್ಯಾನಿಟೈಸರ್ ಹಾಕಿ ಬರಮಾಡಿಕೊಳ್ಳಲಾಗುತ್ತಿದೆ.

`ಮೈಸೂರು ಮಿತ್ರ’ ಇಂದು ಕೆಲ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ದಾಗ ವಿದ್ಯಾರ್ಥಿಗಳ ಶೇ.60ರಷ್ಟು ಹಾಜರಾತಿ ಇರುವುದು ಕಂಡು ಬಂದಿತು. ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಆರ್‍ಟಿ-ಪಿಸಿಆರ್ ಪರೀಕ್ಷೆಗೆ ಒಳಪಟ್ಟು, ಕೋವಿಡ್ ನೆಗೆ ಟಿವ್ ಇರುವುದನ್ನು ಖಚಿತಪಡಿಸಿಕೊಂಡು ಶಾಲೆಗಳಿಗೆ ಪ್ರವೇಶ ನೀಡಲಾಗುತ್ತಿದೆ. ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿರುವ ವಿದ್ಯಾ ವರ್ಧಕ ಪ್ರೌಢಶಾಲೆಯಲ್ಲಿ 170 ವಿದ್ಯಾರ್ಥಿಗಳ ಪೈಕಿ 125 (ಶೇ.73 ರಷ್ಟು) ಮಂದಿ ಇಂದು ತರಗತಿಗೆ ಹಾಜರಾಗಿದ್ದಾರೆ. ಕಳೆದ ತಿಂಗಳು ಆರಂಭವಾದ ಪದವಿ ಕಾಲೇಜಿನಲ್ಲಿ 283 ವಿದ್ಯಾರ್ಥಿಗಳ ಪೈಕಿ 152 ಮಂದಿ (ಶೇ.45ರಷ್ಟು) ತರಗತಿಗಳಿಗೆ ಹಾಜರಾಗಿದ್ದು, ಉಳಿದ ವಿದ್ಯಾರ್ಥಿಗಳು ತರಗತಿ ವೇಳೆಯಲ್ಲಿಯೇ ನಡೆ ಯುವ ಆನ್‍ಲೈನ್ ಮೂಲಕ ತರಗತಿ ಪಡೆಯುತ್ತಿ ದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದರು.

ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಇಂದಿನಿಂದ ಆರಂಭವಾಗಿರುವ ತರಗತಿಗಳಿಗೆ 571 ವಿದ್ಯಾರ್ಥಿಗಳ ಪೈಕಿ 35 ಮಂದಿ ಮಾತ್ರ ಹಾಜರಾಗಿದ್ದಾರೆ.  ಬಿಎಎಲ್ ಎಲ್‍ಬಿ ಮತ್ತು ಎಲ್‍ಎಲ್‍ಬಿ ತರಗತಿಗಳಿರುವ ಕಾಲೇಜಿನ ತರಗತಿಗಳನ್ನು ಪುನಾರಂಭಿಸುವ ಕುರಿತು ಶನಿವಾರ ವಷ್ಟೇ ವಿವಿಯಿಂದ ಆದೇಶ ಬಂದ ಹಿನ್ನೆಲೆಯಲ್ಲಿ ಕಾನೂನು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸೋಮ ವಾರದಿಂದ ಶಾಲೆ ತೆರೆಯುವ ಬಗ್ಗೆ ಮಾಹಿತಿ ನೀಡಲಾಗಿದೆ. ಬಹುಶಃ ಇನ್ನೆರಡು ದಿನಗಳಲ್ಲಿ ವಿದ್ಯಾರ್ಥಿಗಳ ಹಾಜ ರಾತಿ ಸಂಖ್ಯೆಯಲ್ಲಿ ಗಣನೀಯ ಏರಿಕೆ ಸಾಧ್ಯವಾಗಲಿದೆ ಎಂದು ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಪಿ.ದೀಪು `ಮೈಸೂರು ಮಿತ್ರ’ನಿಗೆ ತಿಳಿಸಿದರು.

 

 

Translate »