ಬಿ.ವೈ.ವಿಜಯೇಂದ್ರ ಅಭಿಮಾನಿಗಳಿಂದ ಮುನೇಶ್ವರ ನಗರದಲ್ಲಿ ಆಹಾರ ವಿತರಣೆ
ಮೈಸೂರು

ಬಿ.ವೈ.ವಿಜಯೇಂದ್ರ ಅಭಿಮಾನಿಗಳಿಂದ ಮುನೇಶ್ವರ ನಗರದಲ್ಲಿ ಆಹಾರ ವಿತರಣೆ

April 7, 2020

ಮೈಸೂರು,ಏ.6(ಎಂಟಿವೈ)- ಲಾಕ್‍ಡೌನ್‍ನಿಂದ ಸಂಕಷ್ಟಕ್ಕೊಳಗಾದವರಿಗೆ ಬಿ.ವೈ. ವಿಜಯೇಂದ್ರ ಅಭಿಮಾನಿಗಳು ಆಹಾರ ವಿತರಿಸುವ ಕಾರ್ಯಕ್ರಮ ಮುಂದುವರೆ ಸಿದ್ದು, ಮೈಸೂರಿನ ಮುನೇಶ್ವರನಗರ ಹಾಗೂ ಮಹದೇವಪುರ ಸುತ್ತಮುತ್ತ ಮಧ್ಯಾಹ್ನದ ಆಹಾರ ವಿತರಿಸಿದರು. ತಾ.ಪಂ ಮಾಜಿ ಅಧ್ಯಕ್ಷ ಎಲ್.ಆರ್.ಮಹಾದೇವಸ್ವಾಮಿ ನೇತೃತ್ವ ದಲ್ಲಿ ಮುನೇಶ್ವರ ನಗರ ಹಾಗೂ ಮಹದೇವಪುರ ಸುತ್ತಮುತ್ತ ನಿರಾಶ್ರಿತರು, ಕಟ್ಟಡ ಕಾರ್ಮಿಕರು ಹಾಗೂ ನಿರ್ಗತಿಕರಿಗೆ ಆಹಾರ ವಿತರಿಸಿದರು. ಅಲ್ಲದೆ ವಿವಿಧೆಡೆ ಕರ್ತವ್ಯ ನಿರತÀ ಪೊಲೀಸರು ಹಾಗೂ ವಿವಿಧ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿರುವವರಿಗೆ ಆಹಾರದ ಪೊಟ್ಟಣ, ಮಜ್ಜಿಗೆ ವಿತರಿಸಿದರು. ಈ ಸಂದರ್ಭದಲ್ಲಿ ವಿಜಯೇಂದ್ರ ಅಭಿಮಾನಿ ಬಳಗದ ಸದಸ್ಯರಾದ ಲಕ್ಷ್ಮೀದೇವಿ, ಆನಂದ್, ನಿಖಿಲ್, ಜಸ್ವಂತ್, ಕೆ.ಎಸ್.ಅಪ್ಪು ಅನಿಲ್, ಗಂಗಾಧರ, ಉಮೇಶ್, ಅರುಣ್, ಕಾರ್ಯಪ್ಪ ಇದ್ದರು

Translate »