ಫುಡ್ ಡೆಲಿವರಿ ಪಾರ್ಟ್‍ನರ್ಸ್ ಪ್ರತಿಭಟನೆ
ಮೈಸೂರು

ಫುಡ್ ಡೆಲಿವರಿ ಪಾರ್ಟ್‍ನರ್ಸ್ ಪ್ರತಿಭಟನೆ

June 19, 2020

ಮೈಸೂರು, ಜೂ.18(ಆರ್‍ಕೆಬಿ)- ಗ್ರಾಹ ಕರ ಮನೆ ಬಾಗಿಲಿಗೆ ಸಿದ್ಧ ಆಹಾರ ತಲು ಪಿಸುವ ಕೆಲಸ ಮಾಡುತ್ತಿರುವ ಹಲವು ಯುವಕರು `ಯುನೈಟೆಡ್ ಫುಡ್ ಡೆಲಿವರಿ ಪಾರ್ಟ್‍ನರ್ಸ್ ಯೂನಿಯನ್’ ಆಶ್ರಯ ದಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಗುರು ವಾರ ಪ್ರತಿಭಟನೆ ನಡೆಸಿದರು.

ಇನ್‍ಸೆಂಟಿವ್ ಮತ್ತು ರೇಟ್ ಕಾರ್ಡ್ ಬದಲಿಸದಂತೆ ವಿವಿಧ ಪ್ಲಾಟ್‍ಫಾರಂಗಳಿಗೆ ಕಡಿವಾಣ ಹಾಕಬೇಕು. ಇನ್‍ಸೆಂಟಿವ್ ಹೆಚ್ಚು ದೊರೆಯುವಂತೆ ಮಾಡಬೇಕು. ಯಾವುದೇ ಫುಡ್ ಡೆಲಿವರಿ ಪಾರ್ಟ್‍ನರ್‍ಗಳ ಐಡಿ ಬ್ಲಾಕ್ ಮಾಡದಂತೆ ಸ್ವಿಗ್ಗಿ, ಜೊಮ್ಯಾಟೊ, ಡನ್ಹೋದಂತಹ ಕಂಪನಿಗಳಿಗೆ ರಾಜ್ಯ ಸರ್ಕಾರವು ಕಟ್ಟುನಿಟ್ಟಿನ ಸೂಚನೆ ನೀಡ ಬೇಕು. ಫುಡ್ ಡೆಲಿವರಿ ಪಾರ್ಟ್‍ನರ್‍ಗಳ ಸುರಕ್ಷತೆಗೂ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಆಹಾರ ತಲುಪಿಸುವ ಕಾರ್ಯದಲ್ಲಿ ನಿತ್ಯವೂ ಹೆಚ್ಚು ಜನರನ್ನು ಭೇಟಿ ಮಾಡ ಬೇಕಾಗಿರುವುದರಿಂದ ಸದಾ ಕೊರೊನಾ ಭೀತಿಯಲ್ಲೇ ಕೆಲಸ ನಿರ್ವಹಿಸುತ್ತಿದ್ದೇವೆ. ಹೀಗಾಗಿ ನಮಗೆ ಕೆಲಸಕ್ಕೆ ತೆರಳುವ ವೇಳೆ ಅಗತ್ಯ ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಕಂಪನಿ ಪೂರೈಸಬೇಕು. ನಮ್ಮ ಮೇಲೆ ಹಲ್ಲೆ ನಡೆಯದಂತೆ ರಕ್ಷಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಯೂನಿಯನ್ ಮುಖ್ಯಸ್ಥ ಎಸ್.ಹೆಚ್. ಹರೀಶ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.

Translate »