ಮೈಸೂರು, ಜೂ.18(ಆರ್‍ಕೆಬಿ)- ದೂರ ಶಿಕ್ಷಣಕ್ಕೆ ಅವಕಾಶ ನೀಡದಿದ್ದರೆ ಆನ್ ಲೈನ್ ಕೋರ್ಸ್ ಆಗಿ ಪರಿವರ್ತಿಸಲು ಮೈಸೂರು ವಿಶ್ವವಿದ್ಯಾನಿಲಯ ನಿರ್ಧರಿಸಿದೆ.
ಮೈವಿವಿ ವಿಜ್ಞಾನ ಭವನ ಸಭಾಂ ಗಣದಲ್ಲಿ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಮೈವಿವಿ ಶಿಕ್ಷಣ ಮಂಡಳಿಯ 3ನೇ ಮಹಾ ಸಭೆ, ಒಂದು ವೇಳೆ ರಾಜ್ಯ ಸರ್ಕಾರ ದೂರ ಶಿಕ್ಷಣ ನಡೆಸದಂತೆ ಆದೇಶ ಹೊರಡಿಸಿ ದರೆ ಆನ್‍ಲೈನ್ ಕೋರ್ಸ್ ಆಗಿ ಪರಿವರ್ತಿ ಸಲು ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೂ ಮನವರಿಕೆ ಮಾಡಲು ಸಭೆ ನಿರ್ಧರಿಸಿದೆ. ಸದ್ಯಕ್ಕೆ ಮುಂದಿನ ಶೈಕ್ಷಣಿಕ ವರ್ಷಕ್ಕೆ ಅರಂಭವಾಗಬೇಕಿದ್ದ ಪ್ರವೇಶಾತಿಗೆ ತಡೆ ನೀಡಲಾಗಿದೆ.
ಲ್ಯಾಟರಲ್ ಎಂಟ್ರಿಗೆ ಒಪ್ಪಿಗೆ: ಮೈವಿವಿ ನಡೆಸುತ್ತಿರುವ ಕೋರ್ಸುಗಳ ನಿಯಮಾ ವಳಿಯಂತೆಯೇ ಔಟ್‍ರೀಚ್ ಪ್ರೋಗ್ರಾಂ ಗಳನ್ನೂ ನಡೆಸಲಾಗುತ್ತಿದೆ. ಬೇರೆ ದೇಶ, ರಾಜ್ಯ, ಜಿಲ್ಲೆಗಳಿಗೆ ಉನ್ನತ ಶಿಕ್ಷಣಕ್ಕೆ ತೆರ ಳಿದ್ದ ವಿದ್ಯಾರ್ಥಿಗಳು ಕೋವಿಡ್-19ರ ಕಾರಣದಿಂದಾಗಿ ಕೋರ್ಸುಗಳ ಅವಧಿ ಮುಗಿಯುವ ಮುನ್ನವೇ ಊರಿಗೆ ಮರಳಿ ದ್ದಾರೆ. ಇವರು ವ್ಯಾಸಂಗ ಮುಂದುವರಿ ಸಲು ಅವಕಾಶವಾಗಲೆಂದು, ಇದನ್ನು ವಿಶೇಷ ಸಂದರ್ಭವೆಂದು ಪರಿಗಣಿಸಿ ಮೈವಿವಿ ಕ್ಯಾಂಪಸ್‍ನ ವಿವಿಧ ವಿಭಾಗಗಳಲ್ಲಿ, ಕಾಲೇಜುಗಳಲ್ಲಿ ಹಾಗೂ ಔಟ್‍ರೀಚ್ ಸಂಸ್ಥೆಗಳಲ್ಲಿ ಲ್ಯಾಟರಲ್ ಎಂಟ್ರಿಗೆ ಅವ ಕಾಶ ನೀಡಬೇಕೆಂಬ ಪ್ರಸ್ತಾವಕ್ಕೂ ಸಭೆ ಒಪ್ಪಿಗೆ ನೀಡಿತು.
ಬ್ಯಾಕ್‍ಲಾಗ್ ಹುದ್ದೆ: ಮೈವಿವಿ ಬೋಧಕ ವೃಂದದ ಬ್ಯಾಕ್‍ಲಾಗ್ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೂ ಸಭೆ ಅನುಮೋದನೆ ನೀಡಿತು. ವಿವಿಗೆ ಮಂಜೂರಾದ ಹುದ್ದೆ ಗಳಿಗೆ ಎದುರಾಗಿ ಶೇ.8ರ ಅನುಪಾತದಲ್ಲಿ ಲಭ್ಯವಾಗುವ ಹೈದರಾಬಾದ್ ಕರ್ನಾ ಟಕದ 54 ಹುದ್ದೆಗಳು ಹಾಗೂ ಸಮಾಜ ಕಲ್ಯಾಣ ಇಲಾಖೆ ಸಲ್ಲಿಸಿದ ವರದಿ ಅನು ಸಾರ ಮೈವಿವಿಯಲ್ಲಿನ 76 ಬ್ಯಾಕ್‍ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಸಭೆ ಸಮ್ಮ ತಿಸಿತು. ವಿಷಯವಾರು, ವರ್ಗವಾರು 1:3 ಅನುಪಾತದ ಬದಲು 1:10ರ ಅನುಪಾತ ಅನುಸರಿಸುವ ಬಗ್ಗೆ ಪರಿಶೀಲಿಸುವಂತೆ ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆ ಯಲು ಒಪ್ಪಿಗೆ ಸೂಚಿಸಲಾಯಿತು.
ಎರಡು ವರ್ಷಕ್ಕೆ ಕಡಿತ: ಎಂಸಿಎ ಕೋರ್ಸ್ ಅವಧಿಯನ್ನು ಮೂರು ವರ್ಷ ಬದಲಿಗೆ ಎರಡು ವರ್ಷಗಳಿಗೆ ತಗ್ಗಿಸಲು ಸಭೆಯಲ್ಲಿ ಅನುಮತಿ ದೊರೆಯಿತು.
ಮೈಸೂರು ವಿವಿ ಮತ್ತು ಆಡಳಿತ ತರ ಬೇತಿ ಸಂಸ್ಥೆಯೊಂದಿಗೆ ಮೂಕ್ (ಒಔಔಏs) ಯೋಜನೆಯಡಿ ಆನ್ ಲೈನ್ ವಿಷಯಗಳನ್ನು ಅಭಿವೃದ್ಧಿಪಡಿ ಸುವ ಸಂಬಂಧ ಸಿದ್ಧಪಡಿಸಿದ ಪಠ್ಯಕ್ರಮ/ಪರೀಕ್ಷಾ ವಿಧಾನಕ್ಕೆ ಮಹಾಸಭೆಯಲ್ಲಿ ಒಪ್ಪಿಗೆ ದೊರೆಯಿತು.
ಎನ್‍ಸಿಸಿ, ಎನ್‍ಎಸ್‍ಎಸ್, ದೈಹಿಕ ಶಿಕ್ಷಣ ವಿಭಾಗ ಮತ್ತು ವಿದ್ಯಾರ್ಥಿ ಕ್ಷೇಮ ಪಾಲನಾ ವಿಭಾಗದಿಂದ ಅಂತರ ವಿವಿ ಕಾರ್ಯಕ್ರಮ, ಸಾಹಸ ಶಿಬಿರ, ಕ್ರೀಡೆ ಮತ್ತು ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಭಾಗ ವಹಿಸುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷೆ ನಡೆಸುವುದಕ್ಕೂ ಸಭೆ ಅನುಮೋದಿಸಿತು. ಸ್ಪರ್ಧೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿ ಗಳ ಮರು ಪರೀಕ್ಷೆ ನಿಗದಿಗೊಳಿಸುವ ಸಂಬಂಧ ಮರು ಪರೀಕ್ಷೆ ನಡೆಸಲು ಸೂಕ್ತ ಕ್ರಮಗಳನ್ನು ಅನುಸರಿಸಲು ಸಭೆ ಒಪ್ಪಿಗೆ ಸೂಚಿಸಿತು. ಕುಲಸಚಿವ ಪ್ರೊ.ಶಿವಣ್ಣ ಸೇರಿದಂತೆ ಶೈಕ್ಷಣಿಕ ಮಂಡಳಿ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.