ಅನ್ವೇಷಣಾ ಟ್ರಸ್ಟ್‍ನಿಂದ ಸಾವಿರಾರು ಬಡವರಿಗೆ ಆಹಾರ
ಮೈಸೂರು

ಅನ್ವೇಷಣಾ ಟ್ರಸ್ಟ್‍ನಿಂದ ಸಾವಿರಾರು ಬಡವರಿಗೆ ಆಹಾರ

April 13, 2020

ಮೈಸೂರು,ಏ.12(ವೈಡಿಎಸ್)-ಸಾವಿರಾರು ಬಡವರಿಗೆ ಮೈಸೂ ರಿನ ಸಂಸ್ಥೆಯೊಂದು ಉಚಿತವಾಗಿ ನಿತ್ಯ ಆಹಾರ ಒದಗಿಸುತ್ತಿದೆ. ಲಾಕ್‍ಡೌನ್ ಘೋಷಣೆಯಾದ ದಿನದಿಂದ ನಗರದ ಬೋಗಾದಿ, ಸಾತಗಳ್ಳಿ, ದೇವರಾಜ ಅರಸ್ ಕಾಲೋನಿ, ಧರ್ಮಸಿಂಗ್ ಕಾಲೋ ನಿಯ ಬಡವÀರಿಗೆ ಅನ್ವೇಷಣಾ ಸೇವಾ ಟ್ರಸ್ಟ್ ಮಧ್ಯಾಹ್ನ ಮತ್ತು ರಾತ್ರಿ ರೈಸ್‍ಬಾತ್, ಮೊಸರನ್ನ, ಚಿತ್ರಾನ್ನ, ಪುಳಿಯೊಗರೆಯ ಪೊಟ್ಟಣ ಗಳನ್ನು ನೀಡಿ ಹಸಿವು ನೀಗಿಸುತ್ತಿದೆ. ಜತೆಗೆ ಹೋಂ ಕ್ವಾರಂಟೈನ್‍ನಲ್ಲಿ ರುವ ಕ್ಯಾತಮಾರನಹಳ್ಳಿ 2, ವಿದ್ಯಾರಣ್ಯಪುರಂ 3, ಉದಯಗಿರಿಯ 4 ಮನೆಗಳಿಗೆ ಹಾಗೂ ವಿದ್ಯಾರಣ್ಯಪುರಂನ ಕರುಮಾರಿಯಮ್ಮ ಮತ್ತು ಹೊಯ್ಸಳ ಆಶ್ರಯ ಕೇಂದ್ರಗಳಿಗೂ ನಿತ್ಯ 50 ಆಹಾರ ಪೊಟ್ಟಣಗಳನ್ನು ಒದಗಿಸುತ್ತಿದೆ. ಯಾರಾದರೂ ಟ್ರಸ್ಟ್‍ಗೆ ಕರೆ ಮಾಡಿ ಊಟ ಬೇಕೆಂದರೆ ಕೂಡಲೇ ಬೈಕ್‍ನಲ್ಲಿ ತೆರಳಿ ಊಟ ತಲುಪಿಸುತ್ತಿದೆ. ಮಧ್ಯಾಹ್ನ, ರಾತ್ರಿ ಸೇರಿ ಒಟ್ಟು 2 ಸಾವಿರ ಆಹಾರ ಪೊಟ್ಟಣಗಳನ್ನು ವಿತರಿಸುತ್ತಿದೆ. ಟ್ರಸ್ಟ್‍ನಲ್ಲಿ ನಿತ್ಯ 25 ಮಂದಿ ಆಹಾರ ಸಿದ್ಧತೆಗೆ ಶ್ರಮಿ ಸುತ್ತಿದ್ದಾರೆ ಎಂದು ಟ್ರಸ್ಟ್ ಸಂಸ್ಥಾಪಕ ಅಮರನಾಥರಾಜೇ ಅರಸ್ ತಿಳಿಸಿದ್ದಾರೆ. ಕೊರೊನಾ ಹರಡುವುದನ್ನು ತಡೆಗಟ್ಟಲು ಟ್ರಸ್ಟ್ ವತಿಯಿಂದ ಬಿಎಂಹೆಚ್ ಆಸ್ಪತ್ರೆಯಲ್ಲಿ ಡಿಸ್‍ಇನ್ಫೆಕ್ಷನ್ ಟನಲ್ ನಿರ್ಮಿಸಿ ಕೊಡು ವಂತೆ ಪಾಲಿಕೆ ಆರೋಗ್ಯಾಧಿಕಾರಿಗಳು ಕೇಳಿಕೊಂಡಿದ್ದು, ಶೀಘ್ರವೇ ನಿರ್ಮಾಣ ಕಾರ್ಯ ಆರಂಭಿಸಲಾಗುವುದು ಎಂದರು.

Translate »