ನಕಲಿ ಪಾಸ್ ಮಾರಾಟ ಮಾಡುತ್ತಿದ್ದವರ ಬಂಧನ
ಮೈಸೂರು

ನಕಲಿ ಪಾಸ್ ಮಾರಾಟ ಮಾಡುತ್ತಿದ್ದವರ ಬಂಧನ

April 13, 2020

ಬೆಂಗಳೂರು, ಏ.12- ಪೆÇಲೀಸ್ ನಕಲಿ ಪಾಸ್ ಸೃಷ್ಟಿಸಿ ದುರ್ಬಳಕೆ ಮಾಡು ತ್ತಿದ್ದ ಆರು ಜನರನ್ನು ಪೂರ್ವ ವಿಭಾ ಗದ ಪೆÇಲೀಸರು ಬಂಧಿಸಿದ್ದಾರೆ.

ಕೊರೊನಾ ವೈರಸ್ ನಿಯಂತ್ರಿಸಲು ಲಾಕ್‍ಡೌನ್ ಜಾರಿಯಾದ ಹಿನ್ನೆಲೆ ಯಲ್ಲಿ ತುರ್ತು ಸಂದರ್ಭಗಳಲ್ಲಿ ಉಪ ಯೋಗಿಸಿಕೊಳ್ಳಲು ಪೆÇಲೀಸರು ಪಾಸ್ ವಿತರಣೆ ಮಾಡಿದ್ದಾರೆ. ಇದನ್ನೇ ಕೇಂದ್ರೀ ಕರಿಸಿಕೊಂಡು ಕೆಲವರು ನಕಲಿ ಪಾಸ್ ಸೃಷ್ಟಿಸಿ ಮಾರಾಟ ಮಾಡುತ್ತಿದ್ದರು. ಬಂಧಿತರನ್ನು ನದೀಂ ಪಾಷಾ, ಮಹ ಮ್ಮದ್ ಅಬ್ದುಲ್ ರೆಹಮಾನ್, ಮಹ ಮ್ಮದ್ ಜುನೈದ್ ಖುರೇಷಿ, ಮಹಮ್ಮದ್ ರಾಖೀಬ್ ಹಾಗೂ ಇರ್ಷಾದ್ ಪಾಷಾ ಮತ್ತು ಜಬೀವುಲ್ಲಾ ಖಾನ್ ಎಂದು ಗುರುತಿಸಲಾಗಿದೆ.

ಮಂಗಳೂರು, ವಿಜಯಪುರದಲ್ಲೂ ನಕಲಿ ಪಾಸ್ ಹಾವಳಿ: ಇತ್ತ ನಕಲಿ ಪಾಸ್ ಹಾವಳಿ ಮಂಗಳೂರು ಮತ್ತು ವಿಜಯಪುರದಲ್ಲೂ ಮುಂದುವರೆದಿದ್ದು,ಕೊರೊನಾ ವೈರಸ್ ತಡೆಗೆ ಲಾಕ್‍ಡೌನ್ ಜಾರಿಯಲ್ಲಿದೆ. ಆದರೆ ಪೆÇಲೀಸ್ ಇಲಾಖೆಯಿಂದ ಪಾಸ್ ಪಡೆದರೆ ಅಗತ್ಯ ಕೆಲಸಕ್ಕೆ ಹೊರಗೆ ಓಡಾಡಬಹುದು. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ನಕಲಿ ಪಾಸ್ ಗಳನ್ನು ಮಾರಾಟ ಮಾಡುತ್ತಿದ್ದಾರೆ. ವಿಜಯಪುರ ಹಾಗೂ ಚಿಕ್ಕಮಗಳೂರಲ್ಲಿ ನಕಲಿ ಪಾಸ್ ಮಾರಾಟ ಮಾಡುತ್ತಿದ್ದವರನ್ನು ಪೆÇಲೀಸರು ಬಂಧನ ಮಾಡಿದ್ದಾರೆ. ವಿಜಯಪುರದಲ್ಲಿ ಮಾಮಾಶ್ರೀ ಎಂಬುವವನನ್ನು ಹಾಗೂ ಚಿಕ್ಕಮಗಳೂರಲ್ಲಿ ಅಪ್ರಾಪ್ತ ವಯಸ್ಕ ಹಾಗೂ ಇದಕ್ಕೆ ಸಹಕರಿಸಿದ ಆತನ ತಾಯಿಯನ್ನು ಪೆÇಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರತಿಯೊಂದು ಪಾಸ್ ಅನ್ನು 500 ರಿಂದ 1000 ರೂಪಾಯಿಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

Translate »