ಕೊರೊನಾದಿಂದ ಅಸುನೀಗಿದ ಬಡಕುಟುಂಬದ ಸದಸ್ಯರೊಬ್ಬರಿಗೆ  ಲಕ್ಷ ರೂ. ಪರಿಹಾರ
ಮೈಸೂರು

ಕೊರೊನಾದಿಂದ ಅಸುನೀಗಿದ ಬಡಕುಟುಂಬದ ಸದಸ್ಯರೊಬ್ಬರಿಗೆ ಲಕ್ಷ ರೂ. ಪರಿಹಾರ

June 15, 2021

ಬೆಂಗಳೂರು,ಜೂ.14(ಕೆಎಂಶಿ)- ಕೋವಿಡ್ ನಿಂದ ಮೃತಪಟ್ಟ ಬಡ ಕುಟುಂಬದ ಸದಸ್ಯ ರೊಬ್ಬರಿಗೆ ತಲಾ 1 ಲಕ್ಷ ರೂಪಾಯಿ ಪರಿ ಹಾರ ನೀಡುವುದಾಗಿ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.

ಸೋಂಕು ಸರಪಳಿ ತುಂಡರಿಸಲು ಕಫ್ರ್ಯೂ ಮತ್ತು ಲಾಕ್‍ಡೌನ್ ಜಾರಿ ನಂತರ ಶ್ರಮಿಕ ವರ್ಗಕ್ಕೆ ಈಗಾಗಲೇ ಎರಡು ಹಂತ ಗಳಲ್ಲಿ 1750 ಕೋಟಿ ರೂ. ಪರಿಹಾರ ಘೋಷಿಸಿರುವ ಮುಖ್ಯಮಂತ್ರಿಯವರು, ಇಂದು 3ನೇ ಹಂತದಲ್ಲಿ ಮತ್ತೆ 250ರಿಂದ 300 ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಮುಖ್ಯಮಂತ್ರಿಯವರು, ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಪರಿಹಾರ ದೊರೆಯಲಿದೆ ಎಂದು ಸ್ಪಷ್ಟಪಡಿಸಿದರು.

ಬಡತನದ ರೇಖೆಗಿಂತ ಕೆಳಗಿರುವ ಹಾಗೂ ಬಿಪಿಎಲ್ ಪಡಿತರ ಚೀಟಿ ಹೊಂದಿ ರುವ ಕುಟುಂಬದಲ್ಲಿ ದುಡಿಯುವ ವಯ ಸ್ಕರು ಕೊರೊನಾ ಸೋಂಕಿಗೆ ಬಲಿಯಾಗಿ ದ್ದರೆ, ಅವರ ಹೆಸರಿನಲ್ಲಿ 1 ಲಕ್ಷ ರೂ. ಪರಿ ಹಾರವನ್ನು ಕುಟುಂಬದವರಿಗೆ ನೀಡಲಾಗು ವುದು. ಸೋಂಕಿಗೆ 25ರಿಂದ 30 ಸಾವಿರ ಬಡ ಕುಟುಂಬದ ದುಡಿಯುವರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಇದೆ. ಇದನ್ನು ಆಧಾರ ವಾಗಿಟ್ಟುಕೊಂಡು ಪರಿಹಾರ ನೀಡಲಾಗು ವುದು. ಇದರಿಂದ ನೊಂದ ಕುಟುಂಬದವ ರಿಗೆ ತಾತ್ಕಾಲಿಕವಾಗಿ ಜೀವನ ನಡೆಸಲು ಇಲ್ಲವೇ ಸಣ್ಣಪುಟ್ಟ ಬಂಡವಾಳ ಹೂಡಿಕೆ ಮಾಡಿಕೊಳ್ಳಲು ಅನುವಾಗುತ್ತದೆ ಎಂಬ ದೃಷ್ಟಿಯಿಂದ ಇಂತಹ ತೀರ್ಮಾನ ಕೈಗೊಂಡಿ ದ್ದೇನೆ. ಈಗಾಗಲೇ ಶ್ರಮಿಕ ವರ್ಗಕ್ಕೆ ಅನು ಕೂಲ ಮಾಡಿಕೊಡುವ ಉದ್ದೇಶದಿಂದ 1750 ಕೋಟಿ ರೂ. ಬಿಡುಗಡೆ ಮಾಡಿದ್ದು, ಈಗಾಗಲೇ ಅರ್ಹ ಫಲಾನುಭವಿಗಳ ಖಾತೆಗೆ ಹಣ ಸಂದಾಯವಾಗಲು ಆರಂಭವಾಗಿದೆ ಎಂದರು. ಇಷ್ಟು ಮೊತ್ತದ ಪರಿಹಾರ ನೀಡಲು ರಾಜ್ಯದ ಹಣಕಾಸು ಸ್ಥಿತಿ ಉತ್ತಮವಾಗಿ ದೆಯೇ ಎಂದು ಕೇಳಿದ ಪ್ರಶ್ನೆಗೆ ಹಣಕಾಸು ಪರಿಸ್ಥಿತಿ ಇರುವುದರಲ್ಲಿ ಉತ್ತಮವಾಗಿದೆ. ಆದ್ದರಿಂದ ಪರಿಹಾರ ನೀಡಲು ಸಾಧ್ಯವಾ ಗಿದೆ. ರಾಷ್ಟ್ರದಲ್ಲಿ ಯಾವುದೇ ರಾಜ್ಯ ಇಂತಹ ನಿರ್ಧಾರ ಕೈಗೊಂಡಿಲ್ಲ. ನಾವೇ ಮೊದಲಿಗೆ, ನೊಂದಿರುವ ಬಡ ಕುಟುಂಬಗಳ ಕೈ ಹಿಡಿಯುತ್ತಿದ್ದೇವೆ ಎಂದು ಹೇಳಿದರು.

Translate »