500 ನಿರ್ಣಯ ಅಂಗೀಕರಿಸಲಾಗಿದೆ ಎಂಬ ಹೇಳಿಕೆ ಹಾಸ್ಯಾಸ್ಪದ
ಮೈಸೂರು

500 ನಿರ್ಣಯ ಅಂಗೀಕರಿಸಲಾಗಿದೆ ಎಂಬ ಹೇಳಿಕೆ ಹಾಸ್ಯಾಸ್ಪದ

June 15, 2021

ಮೈಸೂರು, ಜೂ.14(ಆರ್‍ಕೆಬಿ)- ಮೈಸೂರು ನಗ ರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಸದಸ್ಯರಾಗಿದ್ದರೂ ಒಮ್ಮೆಯೂ ಮುಡಾ ಸಭೆಗೆ ಹಾಜರಾಗದ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಮುಡಾ ಸಭೆಯಲ್ಲಿ 500 ನಿರ್ಣಯಗಳನ್ನು ಅಂಗೀಕರಿಸಲಾಗಿದೆ ಎಂಬ ಅವರ ಹೇಳಿಕೆ ಹಾಸ್ಯಾಸ್ಪದ ಎಂದು ಮಾಜಿ ಮೇಯರ್ ಬಿ.ಎಲ್.ಭೈರಪ್ಪ ಇಂದಿಲ್ಲಿ ತಿಳಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ತಿಂಗಳ ಮೊದಲೇ ಮುಡಾ ಸಭೆಯ ಅಜೆಂಡಾ ಕಳಿಸಲಾಗಿರುತ್ತದೆ. ಮುಡಾ ಸದಸ್ಯರಾಗಿ ರುವ ಅವರು ಸಭೆಯಲ್ಲಿ ಭಾಗವಹಿಸಿ ಆಕ್ಷೇಪಿಸುವ ಅಧಿಕಾರ ವಿದ್ದರೂ ಹಾಗೆ ಮಾಡದೆ, ಈಗ ಸರ್ಕಾರಿ ಭೂಮಿ ಅತಿ ಕ್ರಮಣ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಜನಪ್ರತಿನಿಧಿಗಳನ್ನು ಅವನು, ಇವನು ಎಂದು ಏಕ ವಚನ ಬಳಸಿ ನಿಂದಿಸಿರುವ ಕುರಿತ ಆಡಿಯೋ ವೈರಲ್ ಆಗಿದೆ. ಈ ರೀತಿ ನಿಂದನೆ ಮಾಡುತ್ತಿರುವುದು ಸರಿ ಯಲ್ಲ. ಈ ಮೂಲಕ ಜನಪ್ರತಿನಿಧಿಗಳ ವ್ಯಕ್ತಿತ್ವ ಮತ್ತು ಹುದ್ದೆಗೆ ಧಕ್ಕೆ ಉಂಟು ಮಾಡಿದ್ದಾರೆ. ಜನಪ್ರತಿನಿಧಿಗಳ ಮತ್ತು ಇತರರ ವಿರುದ್ಧ ಏಕವಚನ ಪ್ರಯೋ ಗಿಸಿ, ವೈಯಕ್ತಿಕ ದಾಳಿ ನಡೆಸುವುದು ಅಧಿಕಾರಶಾಹಿಗೆ ಉತ್ತಮವಲ್ಲದ ನಡೆ. ಕೆರೆಗಳನ್ನು ಅತಿಕ್ರಮಣದಿಂದ ರಕ್ಷಿಸಿರುವುದಾಗಿ ರೋಹಿಣಿ ಹೇಳಿಕೆ ನೀಡಿದ್ದಾರೆ. ತಮ್ಮ ಅಧಿಕಾರ ಅವಧಿಯಲ್ಲಿ ಯಾವುದೇ ಕೆರೆಗಳಿಗೆ ಭೇಟಿ ನೀಡದ ಅವರು, ಕೆರೆಗಳನ್ನು ರಕ್ಷಿಸಿರುವುದಾಗಿ ಹೇಳಿಕೊಂಡಿದ್ದಾರೆ ಎಂದರು.

ಕೋವಿಡ್ ಸಂದರ್ಭದಲ್ಲಿ ಸೇಟ್ ಮೋಹನ್‍ದಾಸ್ ತುಳಸಿದಾಸ್ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲು ಮುಡಾ ಅಧ್ಯಕ್ಷರು ಸೇರಿದಂತೆ ಜನಪ್ರತಿ ನಿಧಿಗಳು ಸಾಕಷ್ಟು ಶ್ರಮ ಪಟ್ಟಿದ್ದಾರೆ. ಕೋವಿಡ್-19 ಬಿಕ್ಕಟ್ಟಿನ ತುರ್ತು ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವಿನ ಸಮನ್ವಯ ಮುಖ್ಯ ಎಂಬು ದನ್ನು ರೋಹಿಣಿ ಅರ್ಥಮಾಡಿಕೊಳ್ಳುವಲ್ಲಿ ವಿಫಲವಾಗಿ ದ್ದಾರೆ ಎಂದು ದೂರಿದರು. ಭೂ ಪರಿವರ್ತನೆ ಡಿಸಿ ಗಳಿಂದ ಮಾಡಲ್ಪಡುತ್ತದೆ. ಸಂಬಂಧಪಟ್ಟವರಿಗೆ ನೋಟಿಸ್ ನೀಡಿ, ಭೂ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬಹುದಿತ್ತು. ಆದರೆ ಇದನ್ನು ಮಾಡಲು ವಿಫಲವಾದ ಇವರು ಜನಪ್ರತಿನಿಧಿಗಳನ್ನು ಬೀದಿಗೆಳೆದು ಹಾದಿ, ಬೀದಿ ರಂಪಾಟ ಮಾಡಿದ್ದಾರೆ ಎಂದು ಆರೋ ಪಿಸಿದರು.

ಸಾ.ರಾ.ಕನ್ವೆನ್ಷನ್ ಹಾಲ್ ರಾಜಕಾಲುವೆ ಮೇಲೆ ಕಟ್ಟಲಾಗಿದೆ ಎಂದು ಆರೋಪಿಸಿದ್ದು, ಅದನ್ನು ರಾಜ ಕಾಲುವೆಯ ಆರಂಭದಿಂದ ಕೊನೆವರೆಗೂ ಸರ್ವೆ ಮಾಡಬೇಕು ಎಂದು ಒತ್ತಾಯಿಸಿದರು. ಕೊರೊನಾ ಸಾವಿನ ಅಂಕಿ ಅಂಶಗಳನ್ನು ಸೂಕ್ತ ರೀತಿ ನಿರ್ವಹಿಸದೆ ಲೋಪವೆಸಗಿದ್ದಾರೆ ಎಂದು ಅವರು ಆರೋಪಿಸಿದರು.

Translate »