ಬೆಂಗಳೂರು: ರಾಜ್ಯ ಸರ್ಕಾರ ಕ್ವಾರಂಟೈನ್ ನಿಯಮಗಳನ್ನು ಮತ್ತಷ್ಟು ಸಡಿಲಿಸಿದ್ದು, ಹೊರ ರಾಜ್ಯ ಅಥವಾ ವಿದೇಶದಿಂದ ಕರ್ನಾಟಕಕ್ಕೆ ಆಗಮಿಸುವವರಿಗೆ 14 ದಿನ ಹೋಮ್ ಕ್ವಾರಂಟೈನ್ ಕಡ್ಡಾಯಗೊಳಿಸಿ, ಸಾಂಸ್ಥಿಕ ಕ್ವಾರಂಟೈನ್ ರದ್ದುಗೊಳಿಸಿದೆ.
ಈ ಮುಂಚೆ ಹೊರ ರಾಜ್ಯ ಹಾಗೂ ವಿದೇಶದಿಂದ ಬರುವವರಿಗೆ ಒಂದು ಸರ್ಕಾರಿ ಅಥವಾ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ ವಾಗಿತ್ತು. ಇದೀಗ ಅದನ್ನು ರದ್ದುಗೊಳಿಸಿದ್ದು, ಮನೆಯಲ್ಲೇ 14 ದಿನ ಕ್ವಾರಂಟೈನ್‍ಗೆ ಒಳ ಗಾದರೆ ಸಾಕು ಎಂದು ರಾಜ್ಯ ಸರ್ಕಾರ ಇಂದು ಹೊಸ ಮಾರ್ಗಸೂಚಿಗಳನ್ನು ಬಿಡು ಗಡೆ ಮಾಡಿದೆ. ಈ ಹಿಂದೆ ರಾಜ್ಯ ಸರ್ಕಾರ ಹೊರ ರಾಜ್ಯ ಅಥವಾ ವಿದೇಶದಿಂದ ಆಗ ಮಿಸುವವರು ಕಡ್ಡಾಯವಾಗಿ 7 ದಿನ ಸಾಂಸ್ಥಿಕ ಕ್ವಾರಂಟೈನ್ ಹಾಗೂ 7 ದಿನ ಹೋಮ್ ಕ್ವಾರಂಟೈನ್‍ಗೆ ಒಳಗಾಗಬೇಕು ಎಂದು ನಿಯಮ ರೂಪಿಸಿತ್ತು. ಅಲ್ಲದೆ, ಕ್ವಾರಂಟೈನ್‍ಗೆ ಒಳಗಾಗುವವರೇ ಅದರ ಹಣವನ್ನು ಪಾವತಿ ಮಾಡಬೇಕು ಎಂದು ಸೂಚಿಸಲಾಗಿತ್ತು. ಈ ನಿಯಮದಿಂದಾಗಿ ಅನೇಕರಿಗೆ ಆರ್ಥಿಕ ವಾಗಿ ಸಾಕಷ್ಟು ತೊಂದರೆಯೂ ಉಂಟಾ ಗಿತ್ತು. ರೈಲು, ವಿಮಾನದ ಮೂಲಕ ಬೇರೆ ರಾಜ್ಯದಿಂದ ಕರ್ನಾಟಕಕ್ಕೆ ಆಗಮಿಸುವವರು ಹೊಸ ಕ್ವಾರಂಟೈನ್ ನಿಯಮಗಳನ್ನು ತಿಳಿದು ಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಹೇಳಿದೆ.