ಬೆಂಗಳೂರಲ್ಲಿ ತಿರುವನಂತಪುರಂ ಮಾದರಿ ಟ್ರಿಪಲ್ ಲಾಕ್‍ಡೌನ್?
ಮೈಸೂರು

ಬೆಂಗಳೂರಲ್ಲಿ ತಿರುವನಂತಪುರಂ ಮಾದರಿ ಟ್ರಿಪಲ್ ಲಾಕ್‍ಡೌನ್?

July 7, 2020

ಸಮುದಾಯಕ್ಕೆ ಸೋಂಕು ಹರಡುವ ಭೀತಿ
ಬೆಂಗಳೂರು,ಜು.6-ಮೂಲವೇ ಇಲ್ಲದೆ ರಾಜ್ಯದಲ್ಲಿ ಪ್ರತಿನಿತ್ಯ ನೂರಾರು ಮಂದಿ ಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಸಮುದಾಯಕ್ಕೆ ಸೋಂಕು ಹಬ್ಬುವ ಭೀತಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕೇರಳ ಮಾದರಿಯ ಟ್ರಿಪಲ್ ಲಾಕ್‍ಡೌನ್ ಪದ್ಧತಿಯನ್ನು ಬೆಂಗಳೂರಿನಲ್ಲಿ ಜಾರಿ ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ.

ಕೇರಳದ ತಿರುವನಂತಪುರಂನಲ್ಲಿ ಮೂಲವೇ ಇಲ್ಲದ ಸೋಂಕಿತರ ಪ್ರಮಾಣ ಹೆಚ್ಚಾಗು ತ್ತಿದ್ದು, ಸಮುದಾಯಕ್ಕೆ ಹರಡುವುದನ್ನು ತಡೆಯಲು ಇಂದಿನಿಂದ 1 ವಾರ ಕಾಲ ಟ್ರಿಪಲ್ ಲಾಕ್‍ಡೌನ್ ವ್ಯವಸ್ಥೆ ಜಾರಿ ಮಾಡಲಾಗಿದೆ. ಟ್ರಿಪಲ್ ಲಾಕ್‍ಡೌನ್ ಮೂಲಕ ಇಡೀ ರಾಜ್ಯದಿಂದ ಬೆಂಗಳೂರನ್ನು ಪ್ರತ್ಯೇಕವಾಗಿರಿಸಿ ಸೋಂಕು ನಿಯಂತ್ರಣಕ್ಕೆ ತರುವ ಬಗ್ಗೆ ಚಿಂತನೆಗಳು ಸರ್ಕಾರದ ಮಟ್ಟದಲ್ಲಿ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಏನಿದು ಟ್ರಿಪಲ್ ಲಾಕ್ ಮಾಡೆಲ್

ಲಾಕ್‍ಡೌನ್ 1: ತಿರುವನಂತಪುರಂಗೆ ಸಂಪರ್ಕಿಸುವ ಎಲ್ಲ ರಸ್ತೆಗಳು ಬಂದ್ ಮಾಡುವುದು, ಎಲ್ಲ ಜಿಲ್ಲೆಗಳಿಂದ ಸಂಪರ್ಕ ನಿರ್ಬಂಧಿಸುವುದು, ಇಡೀ ನಗರವನ್ನು ಸಂಪೂರ್ಣ ಲಾಕ್‍ಡೌನ್ ಮಾಡುವುದು. ದಿನಸಿ, ಹಾಲು, ತರಕಾರಿ, ಆಸ್ಪತ್ರೆ, ಮೆಡಿಕಲ್ ಸ್ಟೋರ್ಸ್ ಬಿಟ್ಟು ಎಲ್ಲ ಸರ್ಕಾರಿ, ಖಾಸಗಿ ಕಚೇರಿ, ಅಂಗಡಿ ಮುಂಗಟ್ಟು ಗಳನ್ನು ಕಟ್ಟುನಿಟ್ಟಾಗಿ ಬಂದ್ ಮಾಡುವುದು. ತುರ್ತು ಪರಿಸ್ಥಿತಿಗಾಗಿ ಒಂದೊಂದು ಆಗಮನ, ನಿರ್ಗಮನ ರಸ್ತೆಗಳು ಮಾತ್ರ ತೆರೆದಿಡುವುದು. ಈ ಮೂಲಕ ಸೋಂಕಿನ ಚೈನ್ ಲಿಂಕ್ ಕಟ್ ಮಾಡಿ ಸಮುದಾಯಕ್ಕೆ ಹಬ್ಬುವುದನ್ನು ತಡೆಯುವುದು.

ಲಾಕ್‍ಡೌನ್ 2: ಕಂಟೈನ್ಮೆಂಟ್ ಝೋನ್, ಹಾಟ್‍ಸ್ಪಾಟ್ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸುವುದು. ಒಂದು ವಾರ ಜನರು ಮನೆಯಿಂದ ಹೊರ ಬಾರದಂತೆ ಎಚ್ಚರಿಕೆ ನೀಡುವುದು. ಈ ಪ್ರದೇಶದಲ್ಲಿ ಜನ ಸಂಚಾರ ಸಂಪೂರ್ಣ ನಿರ್ಬಂಧಿಸುವುದು.

ಲಾಕ್‍ಡೌನ್ 3: ಸೋಂಕಿತ ವ್ಯಕ್ತಿ ಅಥವಾ ಪ್ರಾಥಮಿಕ, ದ್ವಿತೀಯ ಸಂಪರ್ಕದಲ್ಲಿ ರುವ ವ್ಯಕ್ತಿಗಳ ಮೇಲೆ ಆರೋಗ್ಯ ಇಲಾಖೆ ನಿಗಾ ಇಡುವುದು. ಮನೆಯಲ್ಲಿ ಪ್ರತ್ಯೇಕ ವಾಗಿ ಕ್ವಾರಂಟೈನ್ ವ್ಯವಸ್ಥೆ ಮಾಡುವುದು. ಅವರಿಂದ ಸೋಂಕು ಹರಡದಂತೆ ಎಚ್ಚರ ವಹಿಸುವುದು. ಈ ಪ್ರಯೋಗ ಇಂದಿನಿಂದ ತಿರುವನಂತಪುರಂನಲ್ಲಿ ಆರಂಭವಾಗಿದ್ದು, ಒಂದು ವಾರ ಬಳಿಕ ಇದರ ಪರಿಣಾಮ ತಿಳಿಯಲಿದೆ. ಇದನ್ನು ಮಾದರಿಯಾಗಿಟ್ಟು ಕೊಂಡು ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಟ್ರಿಪಲ್ ಲಾಕ್‍ಡೌನ್ ಜಾರಿ ಮಾಡುವ ಬಗ್ಗೆ ಸರ್ಕಾರ ಆಸಕ್ತಿ ವಹಿಸಿದೆ ಎಂದು ಮೂಲಗಳು ತಿಳಿಸಿವೆ.

Translate »