ವಾಣಿಜ್ಯ ಚಟುವಟಿಕೆಗೆ  ಮೈಸೂರು ಸಜ್ಜು
ಮೈಸೂರು

ವಾಣಿಜ್ಯ ಚಟುವಟಿಕೆಗೆ ಮೈಸೂರು ಸಜ್ಜು

July 5, 2021

ಮೈಸೂರು,ಜು.4(ಎಂಟಿವೈ)- ಕೊರೊನಾ 2ನೇ ಅಲೆಯ ತೀವ್ರತೆಯ ಹಿನ್ನೆಲೆಯಲ್ಲಿ ಸಾಂಸ್ಕøತಿಕ ನಗರಿ ಮೈಸೂರು ಜಿಲ್ಲೆಯಲ್ಲಿ ಕಳೆದ 2 ತಿಂಗಳಿನಿಂದ ಜಾರಿಯಲ್ಲಿದ್ದ ಲಾಕ್ ಡೌನ್ ನಿಯಮವನ್ನು ಸೋಮವಾರ (ಜು.5) ದಿಂದ ಸಡಿಲಗೊಳಿಸಲಾಗಿದ್ದು, ಅನ್ ಲಾಕ್ 3.0 ನಿಯಮದಂತೆ ವಹಿವಾಟು ಆರಂಭಿಸಲು ಮೈಸೂರು ಸಜ್ಜಾಗಿದೆ.

ಕೊರೊನಾ ಸೋಂಕು ವ್ಯಾಪಕವಾಗಿ ಹರಡಿ ಸಾವು-ನೋವಿನ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಏ.23 ರಂದು ವೀಕೆಂಡ್ ಕಫ್ರ್ಯೂ ಜಾರಿಗೊಳಿಸಿತ್ತು. ಆದರೂ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚಾಗು ತ್ತಲೇ ಇದ್ದುದನ್ನು ಗಮನಿಸಿದ ಸರ್ಕಾರ ರಾಜ್ಯ ದಲ್ಲಿ ಲಾಕ್‍ಡೌನ್ ನಿಯಮ ಜಾರಿಗೊಳಿ ಸಿತ್ತು. ಸುಮಾರು 65 ದಿನದಿಂದ ಎಲ್ಲಾ ಚಟು ವಟಿಕೆಯನ್ನು ಸ್ಥಗಿತಗೊಳಿಸಿ ಲಾಕ್ ಆಗಿದ್ದ ಮೈಸೂರು, ಇಂದಿನಿಂದ ಅನ್‍ಲಾಕ್ ನಿಯ ಮಾನುಸಾರ ಗರಿಗೆದರಲಿದೆ. ವಾಣಿಜ್ಯ ವಹಿವಾಟು, ಪ್ರವಾಸೋದ್ಯಮ, ಧಾರ್ಮಿಕ ಕೇಂದ್ರಗಳೂ ಸೇರಿದಂತೆ ವಿಯಾಯಿತಿ ನೀಡುವ ಎಲ್ಲಾ ಕ್ಷೇತ್ರದಲ್ಲೂ ಭಾನುವಾರ ಸಂಜೆಯಿಂದಲೇ ಸಿದ್ಧತಾ ಕಾರ್ಯ ಮಾಡಿ ಕೊಳ್ಳಲಾಗಿದ್ದು, ನಾಳೆ ಬೆಳಗ್ಗಿನಿಂದಲೇ ಚಟು ವಟಿಕೆ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರ ಶನಿವಾರ ಹೊರಡಿಸಿರುವ ಆದೇಶದಲ್ಲಿ ಕೊಡಗು, ಹಾಸನ ಜಿಲ್ಲೆಯನ್ನು ಹೊರತು ಮೈಸೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಜು.5ರಿಂದ 19ರವರೆಗೆ ಅನ್‍ಲಾಕ್ 3.0 ನಿಯಮ ಜಾರಿಗೊಳಿಸಿದ್ದು, ವಿವಿಧ ಚಟುವಟಿಕೆ ನಡೆಸಲು ಗ್ರೀನ್ ಸಿಗ್ನಲ್ ನೀಡಿದೆ. ಇದರಿಂದ ಮೈಸೂರು ಜಿಲ್ಲೆಯಲ್ಲಿ 2 ತಿಂಗಳ ಬಳಿಕ ನಾಳೆಯಿಂದ ಜನಜೀವನ ದೊಂದಿಗೆ ವಾಣಿಜ್ಯ ವಹಿವಾಟು ಗರಿಗೆದರಲಿದೆ. ಅನ್‍ಲಾಕ್ 3.0 ನಿಯಮ ಮೈಸೂರು ಜಿಲ್ಲೆಗೂ ಅನ್ವಯಿ ಸುತ್ತಿರುವುದರಿಂದ ವಾಣಿಜ್ಯೋದ್ಯಮಿಗಳು ಸರ್ಕಾರ ಹೊರಡಿಸಿರುವ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಿಕೊಂಡು ಚಟುವಟಿಕೆ ಆರಂಭಿಸಲು ಸಿದ್ಧತೆ ಮಾಡಿಕೊಂಡಿ ದ್ದಾರೆ. ದೇವರಾಜು ಅರಸ್ ರಸ್ತೆ, ಸಯ್ಯಾಜಿರಾವ್ ರಸ್ತೆ, ಕಾಳಿದಾಸ ರಸ್ತೆ, ಒಂಟಿಕೊಪ್ಪಲು, ಸರಸ್ವತಿಪುರಂ ಸೇರಿದಂತೆ ವಿವಿಧೆಡೆ 2 ತಿಂಗಳಿನಿಂದ ಬಂದ್ ಆಗಿದ್ದ ಮಳಿಗೆಗಳನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಭಾನುವಾರ ಸಂಜೆಯಿಂದಲೇ ಮಳಿಗೆಗಳ ಸ್ವಚ್ಛತಾ ಕಾರ್ಯ ನಡೆಸಲಾಗಿದ್ದು, ಸೋಮವಾರ ಬೆಳಿಗ್ಗೆಯಿಂದಲೇ ಗ್ರಾಹಕರನ್ನು ಎದುರು ನೋಡಲು ವಾಣಿಜ್ಯೋಧ್ಯಮಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.

ಹೋಟೆಲ್ ಉದ್ಯಮ: ಮೈಸೂರಿನ ಪ್ರಮುಖ ಉದ್ಯಮಗಳಲ್ಲಿ ಹೋಟೆಲ್ ಉದ್ಯಮವೂ ಒಂದಾಗಿದ್ದು, 400ಕ್ಕೂ ಹೆಚ್ಚು ವಿವಿಧ ಬಗೆಯ ಹೋಟೆಲ್, ರೆಸ್ಟೋರೆಂಟ್‍ಗಳಿವೆ. ಇದರೊಂದಿಗೆ ಸಾವಿರಾರು ಸಂಖ್ಯೆಯಲ್ಲಿ ಕೊಠಡಿ ಹೊಂದಿರುವ ವಸತಿ ನಿಲಯಗಳು ಪ್ರವಾಸಿಗರನ್ನೇ ಅವಲಂಭಿಸಿದೆ. 2 ತಿಂಗಳಿನಿಂದ ಕೇವಲ ಪಾರ್ಸಲ್ ಸೌಲಭ್ಯಕ್ಕಷ್ಟೇ ಸೀಮಿತಗೊಂಡಿದ್ದ ಹೋಟೆಲ್ ಸೇವೆ ನಾಳೆಯಿಂದ ಗ್ರಾಹಕರು ಹೋಟೆಲ್‍ನಲ್ಲಿಯೇ ಕುಳಿತುಕೊಂಡು ಊಟ-ಉಪಹಾರ ಸೇವಿಸಬಹುದಾಗಿದೆ. ಈಗಾಗಲೇ ಹೋಟೆಲ್ ಸಿಬ್ಬಂದಿಗಳು ಸ್ವಚ್ಛತಾ ಕಾರ್ಯ ಕೈಗೊಂಡು ಟೇಬಲ್ ಜೋಡಣೆ ಮಾಡಿ ಗ್ರಾಹಕರನ್ನು ಸೆಳೆಯಲು ಕೆಲವು ಅಲಂಕಾರಿಕ ವಸ್ತುಗಳನ್ನು ಜೋಡಿಸಿಡುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.
ಈ ಕುರಿತು `ಮೈಸೂರು ಮಿತ್ರ’ನೊಂದಿಗೆ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣ ಗೌಡ ಮಾತನಾಡಿ, 2 ತಿಂಗಳಿನಿಂದ ಹೋಟೆಲ್ ಉದ್ಯಮ ಗ್ರಾಹಕರಿಲ್ಲದೆ ಕಂಗೆಟ್ಟಿತ್ತು. ನಾಳೆಯಿಂದ ಬೆಳಿಗ್ಗೆ 6 ರಿಂದ ರಾತ್ರಿ 9ರವರೆಗೆ ಹೋಟೆಲ್‍ಗಳಲ್ಲಿ ಗ್ರಾಹಕರು ಕುಳಿತುಕೊಂಡು ಊಟ, ಉಪಹಾರ ಸೇವಿಸಲು ಸರ್ಕಾರ ಅವಕಾಶ ನೀಡಿದೆ. ಈ ಹಿನ್ನೆಲೆಯಲಿ ಸುದೀರ್ಘ ಅವಧಿಯ ನಂತರ ಗ್ರಾಹಕರ ನಿರೀಕ್ಷೆಯೊಂದಿಗೆ ನಾಳೆಯಿಂದ ಸೇವೆ ಪುನರಾಂಭಿಸುತ್ತಿದ್ದೇವೆ. ಸರ್ಕಾರ ಮಾರ್ಗಸೂಚಿಯನ್ನು ಪಾಲಿಸುವ ಮೂಲಕ ಉದ್ಯಮ ಆರಂಬಿಸಲಾಗುವುದು ಎಂದು ತಿಳಿಸಿದರು.

ಮಾಲ್‍ಗಳು ಆರಂಭ: ಮೈಸೂರಿನಲ್ಲಿ ವಿವಿಧ ವಾಣಿಜ್ಯ ಸಂಕೀರ್ಣಗಳು ನಾಳೆಯಿಂ ದಲೇ ಸುದೀರ್ಘ ಅವಧಿಯ ಬಳಿಕ ಕಾರ್ಯ ಆಚರಿಸಲಿದೆ. ಇಂದು ಮೈಸೂರಿನ ವಿವಿಧ ಮಾಲ್‍ಗಳಲ್ಲಿರುವ ಅಂಗಡಿ ಮುಂಗಟ್ಟುಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಸಲಾಯಿತು. ಅಲ್ಲದೇ, ಮಾಲ್ ಆವರಣವನ್ನು ಸ್ಯಾನಿಟೈಸ್ ಮಾಡಿ ರೇಲಿಂಗ್ಸ್‍ಅನ್ನು ಎಕ್ಸಲೇಟರ್‍ಗೂ ಸ್ಯಾನಿಟೈಸ್ ಮಾಡಿ ಗ್ರಾಹಕರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಯಿತು. ನಾಳೆಯಿಂದ ಮಾಲ್‍ಗಳು ಗ್ರಾಹಕರಿಂದ ಕಂಗೊಳಿಸಲಿದೆ. ಆದರೆ, ಯಾವುದೇ ಕಾರಣಕ್ಕೂ ಕೋವಿಡ್ ನಿಯಮ ಉಲ್ಲಂಘಿಸಿದರೆ, ತಕ್ಕ ಶಾಸ್ತಿ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾಡಳಿತ ಖಡಕ್ ಎಚ್ಚರಿಕೆ ನೀಡಿದೆ. ಮಾಲ್‍ಗೆ ಬರುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಸೂಚನೆ ನೀಡಲಾಗಿದೆ.

Translate »