ಕನ್ನಡ ಕಲಿಕೆಗಾಗಿ ಇ-ಲರ್ನಿಂಗ್ ಪೆÇೀರ್ಟಲ್‍ಗೆ ಶೀಘ್ರವೇ ಚಾಲನೆ
ಮೈಸೂರು

ಕನ್ನಡ ಕಲಿಕೆಗಾಗಿ ಇ-ಲರ್ನಿಂಗ್ ಪೆÇೀರ್ಟಲ್‍ಗೆ ಶೀಘ್ರವೇ ಚಾಲನೆ

November 1, 2020

ಬೆಂಗಳೂರು, ಅ. 31- ಕನ್ನಡ ಕಲಿಯಲು ಇಚ್ಛಿಸುವ ಜನರು ಇ-ಲರ್ನಿಂಗ್ ಪೆÇೀರ್ಟಲ್ ಮೂಲಕ ಕನ್ನಡ ಭಾಷೆಯನ್ನು ಸುಲಭವಾಗಿ ಕಲಿಯಬಹುದಾಗಿದೆ. ಇ-ಕಲಿಕೆ ಪೆÇೀರ್ಟಲ್‍ಗೆ ನವೆಂಬರ್ 1ರ ಕನ್ನಡ ರಾಜ್ಯೋತ್ಸವ ದಿನದಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಚಾಲನೆ ನೀಡಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಈ ಉಪಕ್ರಮವು ರಾಜ್ಯದಲ್ಲಿ ನೆಲೆಸಿರುವ ಕನ್ನಡಿಗರಲ್ಲದವರಿಗೆ ಭಾಷೆಯನ್ನು ಕಲಿಯಲು ಅನುವು ಮಾಡಿಕೊಡುತ್ತದೆ ಮತ್ತು ವಿದೇಶದಲ್ಲಿ ವಾಸಿಸುವ ಕನ್ನಡಿಗರು ತಮ್ಮ ಮುಂದಿನ ಪೀಳಿಗೆ ಕನ್ನಡದ ಮೂಲ ಸಂಪರ್ಕ ಕಳೆದುಕೊಳ್ಳದಂತೆಯೂ ಸಹಾಯ ಮಾಡಲಿದೆ.

ಕನ್ನಡವನ್ನು ಕಲಿಸಲು ರಾಜ್ಯ ಸರ್ಕಾರ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿರುವುದು ಇದೇ ಮೊದಲಾಗಿದೆ. ಕನ್ನಡ ಪದಗಳನ್ನು ಡಿಜಿಟಲೀಕರಣಗೊಳಿಸಲು ತಜ್ಞರು, ಬರಹ ಗಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಆರಂಭದಲ್ಲಿ, ಕನ್ನಡವನ್ನು ಕಲಿಯಲು ಇಚ್ಛಿಸುವ ಆಸಕ್ತರಿಗೆ ಇ-ಪೆÇೀರ್ಟಲ್ ಸಹಾಯ ಮಾಡುತ್ತದೆ ಮತ್ತು ಕ್ರಮೇಣ ಓದುವುದು ಮತ್ತು ಬರೆಯುವುದನ್ನೂ ಕೂಡ ಕಲಿಯಬಹುದಾಗಿದೆ. ಮುಂದಿನ ದಿನಗಳಲ್ಲಿ, ವಿಜ್ಞಾನ ವಿಷಯಗಳನ್ನು ಕೂಡ ಕನ್ನಡದಲ್ಲಿ ಪೆÇೀರ್ಟಲ್ ಮೂಲಕ ಕಲಿಸಲು ಸರ್ಕಾರ ಚಿಂತನೆ ನಡೆಸಿದೆ. ಇದು ರಾಜ್ಯ ಸರ್ಕಾರದ ಮೊದಲ ಪ್ರಯತ್ನವಾಗಿದೆ. ಕನ್ನಡಿಗರಲ್ಲದ ಸಾಕಷ್ಟು ಜನರು ಅಧ್ಯಯನ ಮತ್ತು ಕೆಲಸ ಮಾಡಲು ಕರ್ನಾಟಕಕ್ಕೆ ಬರುತ್ತಾರೆ. ಇ-ಪೆÇೀರ್ಟಲ್ ಎಲ್ಲಿಯೇ ಇದ್ದರೂ ಭಾಷೆಯನ್ನು ಕಲಿಯಲು ಅಂತಹವರಿಗೆ ಸಹಾಯ ಮಾಡುತ್ತದೆ. ಇದು ಬಳಕೆದಾರ ಸ್ನೇಹಿ ಮತ್ತು ಉಚಿತವಾಗಿರಲಿದೆ ಎಂದು ಅವರು ಹೇಳಿದ್ದಾರೆ. ರಾಜ್ಯದ ಹೊರಗೆ ವಿಶೇಷವಾಗಿ ವಿದೇಶದಲ್ಲಿ ವಾಸಿಸುವ ಜನರಿಗೆ ಪೆÇೀರ್ಟಲ್ ಸಹಾಯ ಮಾಡುತ್ತದೆ. ವಿದೇಶಗಳಿಗೆ ಹೋದ ಪೆÇೀಷಕರಿಗೆ ತಮ್ಮ ಮಕ್ಕಳಿಗೆ ಕನ್ನಡವನ್ನು ಕಲಿಸಲು ಸೌಲಭ್ಯಗಳಿಲ್ಲದಿದ್ದರೂ ಇ-ಲರ್ನಿಂಗ್ ಪೆÇೀರ್ಟಲ್ ಅಂತಹವರಿಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ. ವಿದೇಶದಲ್ಲಿ ಭಾಷೆಯನ್ನು ಉತ್ತೇಜಿಸಲು ಪ್ರಾಧಿಕಾರವು ಈಗಾಗಲೇ ಮಾಡುತ್ತಿರುವ ಕೆಲಸವನ್ನು ಈ ಉಪಕ್ರಮವು ಮತ್ತಷ್ಟು ಸಹಾಯ ಮಾಡಲಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸ್ಥಳೀಯ ಕನ್ನಡ ಸಂಸ್ಥೆಗಳ ಸಹಯೋಗದೊಂದಿಗೆ ವಿದೇಶಗಳಲ್ಲಿ ವಾರಾಂತ್ಯದ ದಿನಗಳಲ್ಲಿ ತರಗತಿಗಳನ್ನು ನಡೆಸುತ್ತಿದೆ, ಇ-ಲರ್ನಿಂಗ್ ಪೆÇೀರ್ಟಲ್ 2ನೇ ತಲೆಮಾರಿನ ಜನರಿಗೆ ಕನ್ನಡ ಕಲಿಯಲು ಸಹಾಯ ಮಾಡಲಿದೆ ಎಂದಿದ್ದಾರೆ.
ಮಾರ್ಚ್‍ನಲ್ಲಿ ಲಾಕ್‍ಡೌನ್ ಘೋಷಣೆಯಾದಾಗಿನಿಂದ ವಾರಾಂತ್ಯದಲ್ಲಿ ತರಗತಿಗಳನ್ನು ನೀಡುವ ಶಿಕ್ಷಕರಿಗೆ ತರಬೇತಿ ನೀಡಲು ಕೆಡಿಎ 5 ಆನ್‍ಲೈನ್ ಕಾರ್ಯಾಗಾರಗಳನ್ನು ನಡೆಸಿದೆ. ನಾವು 84 ದೇಶಗಳಲ್ಲಿ 300ಕ್ಕೂ ಹೆಚ್ಚು ಅನಿವಾಸಿ ಕನ್ನಡಿಗರಿಗೆ ತರಬೇತಿ ನೀಡಿದ್ದೇವೆ. ಅಮೆರಿಕಾದ ಒಂದೆರಡು ಶಾಲೆಗಳು ಕನ್ನಡವನ್ನು ವಿದೇಶಿ ಭಾಷೆಯನ್ನಾಗಿ ನೀಡುತ್ತಿವೆ. ವಾರಾಂತ್ಯದ ತರಗತಿಗಳಿಗೆ ಹಾಜರಾಗುವ ಮಕ್ಕಳು ನಂತರ ತಮ್ಮ ಶಾಲೆಯಲ್ಲಿ ಕನ್ನಡ ಕಲಿಯುವುದನ್ನು ಮುಂದುವರಿಸಬಹುದು ಎಂದು ನಾಗಾಭರಣ ತಿಳಿಸಿದ್ದಾರೆ.

Translate »