ವಾಹನ ಹಿಂಬಾಲಿಸಿದ ಅಭಿಮಾನಿಗಳಿಗೆ  ಚಿತ್ರ ನಟ ದರ್ಶನ್ ಬುದ್ಧಿ ಮಾತು
ಮೈಸೂರು

ವಾಹನ ಹಿಂಬಾಲಿಸಿದ ಅಭಿಮಾನಿಗಳಿಗೆ ಚಿತ್ರ ನಟ ದರ್ಶನ್ ಬುದ್ಧಿ ಮಾತು

October 20, 2021

ಮೈಸೂರು,ಅ.19-ಜೀಪ್‍ನಲ್ಲಿ ತೆರಳುವಾಗ ಬೈಕ್‍ನಲ್ಲಿ ಹಿಂಬಾಲಿಸುತ್ತಿದ್ದ ಅಭಿಮಾನಿ ಗಳಿಗೆ ನಟ ದರ್ಶನ್, ಬುದ್ಧಿಮಾತು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾರಿನಲ್ಲಿ ಹೋಗುವಾಗ ದಯವಿಟ್ಟು ಹಿಂಬಾಲಿಸಬೇಡಿ. ಒಂದು ಫೋಟೋ ತೆಗೆದುಕೊಳ್ಳುವ ಭರದಲ್ಲಿ ಏನಾದರೂ ಅವಘಡವಾದರೆ ನಿಮ್ಮ ಮನೆಯವರ ಗತಿಯೇನು? ಹೀಗೆ ಅನೇಕ ಕಾರ್ಯಕ್ರಮಗಳಲ್ಲಿ ದರ್ಶನ್, ತಮ್ಮದೇ ಧಾಟಿಯಲ್ಲಿ ಮನವಿ ಮಾಡಿದ್ದಾರೆ. ಆದರೂ ಯುವ ಅಭಿಮಾನಿಗಳು ಅಪಾಯವನ್ನೂ ಲೆಕ್ಕಿಸದೆ ದರ್ಶನ್ ನೋಡಲು ಮುಗಿ ಬೀಳುತ್ತಾರೆ. ಹೀಗೆ ಹೆಚ್.ಡಿ.ಕೋಟೆಯಲ್ಲಿ ದರ್ಶನ್, ಕುಟುಂಬ ಸಮೇತ ಜೀಪ್‍ನಲ್ಲಿ ತೆರಳುವಾಗ ಹತ್ತಾರು ಬೈಕ್‍ಗಳಲ್ಲಿ ಅಭಿಮಾನಿಗಳು ಹಿಂಬಾ ಲಿಸಿದ್ದಾರೆ. ವೇಗವಾಗಿ ಬೈಕ್‍ಗಳನ್ನು ಓಡಿಸುವುದನ್ನು ಗಮನಿಸಿದ ದರ್ಶನ್, ತಮ್ಮ ವಾಹನದ ವೇಗವನ್ನು ಕಡಿಮೆ ಮಾಡಿ ಬುದ್ದಿ ಹೇಳಿದ್ದಾರೆ. `ಏ ರೋಡಲ್ಲಿ ಏನ್ ಆಟ ಆಡ್ತಾ ಇದ್ದೀರಾ? ಮೈಮೇಲೆ ಪ್ರಜ್ಞೆ ಬೇಡವಾ. ಮತ್ತೆ ಮತ್ತೆ ಬರ್ತಾ ಇದ್ದೀರಲ್ಲಾ, ಹೇಳಿದ್ರೂ ಕೇಳಲ್ವಾ?’ ಎಂದು ಪ್ರೀತಿಯಿಂದ ಸಿಡುಕಿದ್ದಾರೆ. ಆದರೂ ಅಭಿಮಾನಿಗಳು `ಬಾಸ್ ಬಾಸ್’ ಎಂದು ಕೂಗುತ್ತಾ ಸ್ವಲ್ಪ ದೂರ ಹಿಂಬಾಲಿಸಿರುವ ದೃಶ್ಯ ವೈರಲ್ ಆದ ವಿಡಿಯೋದಲ್ಲಿದೆ.

Translate »