ಅ.24ರಿಂದ 30ರವರೆಗೆ ಕರ್ನಾಟಕ ಕನ್ನಡಮಯ
News

ಅ.24ರಿಂದ 30ರವರೆಗೆ ಕರ್ನಾಟಕ ಕನ್ನಡಮಯ

October 20, 2021

ಬೆಂಗಳೂರು, ಅ.19(ಕೆಎಂಶಿ)- ಕನ್ನಡ ರಾಜ್ಯೋ ತ್ಸವದ ಅಂಗವಾಗಿ ಕನ್ನಡದಲ್ಲಿ ಮಾತ ನಾಡುವ, ಬರೆಯುವುದರ ಮೂಲಕ ಹಬ್ಬದ ರೀತಿಯಲ್ಲಿ ಕನ್ನಡಕ್ಕಾಗಿ ಅಭಿ ಯಾನವನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಮ್ಮಿಕೊಂಡಿದೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕನ್ನಡ ಮತ್ತು ಸಂಸ್ಕøತಿ ಸಚಿವ ವಿ. ಸುನೀಲ್‍ಕುಮಾರ್, ಕಚೇರಿ, ಉದ್ಯಮ, ಅಂಗಡಿ ಮುಂಗಟ್ಟು, ಮನೆ ಮನೆಗಳಲ್ಲಿ ದೃಶ್ಯ ಮಾಧ್ಯಮಗಳಲ್ಲಿ ಸಂಪೂರ್ಣ ಕನ್ನಡಮಯವಾಗಿರಬೇಕು. ಇದಕ್ಕಾಗಿ ಮಾತಾಡ್ ಮಾತಾಡ್ ಕನ್ನಡ ಅಡಿ ಟಿಪ್ಪಣಿಯ ಲಾಂಛನವನ್ನು ಬಿಡುಗಡೆ ಮಾಡಿದ ಸಚಿವರು, ಅ.24ರಿಂದ 30ರವರೆಗೆ ರಾಜ್ಯದಲ್ಲಿರುವ ಕನ್ನಡಿಗರು ಕನ್ನಡೇತರ ಭಾಷಿಕರು ಪ್ರೀತಿ ಮತ್ತು ಅಭಿಮಾನದಿಂದ ಕನ್ನಡದಲ್ಲಿ ಮಾತನಾಡಬೇಕೆಂ ದರು. ನವೆಂಬರ್ ತಿಂಗಳ ಕೊನೆಯವರೆಗೂ ಇದು ಮುಂದು ವರೆಯಲಿದ್ದು, ಇಡೀ ರಾಜ್ಯ ಕನ್ನಡಮಯವಾಗಿರಬೇಕು. ಈ ಸಂದರ್ಭದಲ್ಲಿ ಕನ್ನಡದಲ್ಲೇ ಮಾತನಾಡುವುದು, ವ್ಯವ ಹರಿಸುವುದು, ಸಾಮಾಜಿಕ ಜಾಲತಾಣಗಳಲ್ಲೂ ಬಳಸು ವುದೂ ಅಲ್ಲದೆ, ಕನ್ನಡೇತರರಿಗೆ ಕನ್ನಡ ಕಲಿಸುವುದು, ಸಹಿ ಮಾಡಿಸುವುದು. ಮಾಹಿತಿ ತಂತ್ರಜ್ಞಾನ ಕಂಪನಿ ಗಳಲ್ಲಿ ಕನ್ನಡದಲ್ಲೇ ಮಾತನಾಡಬೇಕು, ಮಾಧ್ಯಮಗಳಲ್ಲೂ ಇದನ್ನೇ ಬಳಸುವ ಮೂಲಕ ಕನ್ನಡ ಹಬ್ಬದ ವಾತಾವರಣ ಸೃಷ್ಠಿಸೋಣ ಎಂದರು. ಭಾಷೆ, ಸಂಸ್ಕøತಿ, ಉಡುಗೆ-ತೊಡುಗೆ ಮೂಲಕ ವ್ಯಕ್ತಿ ಮತ್ತು ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಇದ ರಿಂದ ನಮ್ಮ ಭಾಷೆಯ ಮಹತ್ವ ಗೊತ್ತಾಗುತ್ತದೆ. ಜಾಗ ತೀಕರಣ ಯುಗದಲ್ಲಿ ನೆಲದ ಭಾಷೆ ಹಿಂದಕ್ಕೆ ಸರಿದು, ಅನ್ಯ ಭಾಷೆ ಮುಂದಕ್ಕೆ ಬಂದಿದೆ. ಕನಿಷ್ಠ 1 ವಾರ ಕಾಲ ಇಂಗ್ಲಿಷ್ ಮತ್ತು ಇತರ ಭಾಷೆಗಳ ಬಳಕೆ ಕಡಿಮೆ ಮಾಡಿ. ಹೆಚ್ಚು ಹೆಚ್ಚು ಕನ್ನಡದಲ್ಲೇ ಮಾತನಾಡಬೇಕು ಎಂದರು.

Translate »