ಮೈಸೂರು

ಮೈಸೂರು ಜಿಲ್ಲೆಯಲ್ಲಿ ಆಕ್ಸಿಜನ್, ರೆಮ್ಡಿಸಿವಿರ್ ನಿರ್ವಹಣೆಗೆ ಸಂಸದ ಪ್ರತಾಪ ಸಿಂಹ ನೇತೃತ್ವದ ಟಾಸ್ಕ್‍ಫೋರ್ಸ್ ರಚನೆ

May 6, 2021

ಮೈಸೂರು,ಮೇ5(ವೈಡಿಎಸ್)-ಮೈಸೂರು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ನಿಯಂತ್ರಣ ಮತ್ತು ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಜಿಲ್ಲಾ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಬುಧವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲೆಯ ಟಾಸ್ಕ್‍ಫೋರ್ಸ್ ಅಧ್ಯಕ್ಷರಾಗಿ ಸಂಸದ ಪ್ರತಾಪ್‍ಸಿಂಹ ಅವರನ್ನು ನಿಯೋಜನೆ ಮಾಡಲಾಗಿದ್ದು, ಆಕ್ಸಿಜನ್, ರೆಮ್ಡಿಸಿವಿರ್‍ನ ಸಂಪೂರ್ಣ ಉಸ್ತುವಾರಿ ವಹಿಸಲಾಗಿದೆ. ಇವರು ಸರ್ಕಾರಿ, ಖಾಸಗಿ ಆಸ್ಪತ್ರೆಗಳಿಗೆ ಎಷ್ಟೆಷ್ಟು ಆಕ್ಸಿಜನ್, ರೆಮ್ಡಿಸಿವಿರ್ ಬೇಕೆಂದು ಮಾಹಿತಿ ಪಡೆದು ಪೂರೈಸಲಿದ್ದಾರೆ ಎಂದು ಹೇಳಿದರು.
ಹಾಗೆಯೇ ವಿಧಾನಸಭಾ ಕ್ಷೇತ್ರಗಳಲ್ಲಿ ಆಯಾ ಕ್ಷೇತ್ರಗಳ ಶಾಸಕರೇ ಟಾಸ್ಕ್ ಫೋರ್ಸ್‍ನ ಅಧ್ಯಕ್ಷರಾಗಿದ್ದು, ಆಯಾ ತಾಲೂಕುಗಳ ಕೋವಿಡ್ ನಿಯಂತ್ರಿಸಲು ಸಂಪೂರ್ಣ ಅಧಿಕಾರ ನೀಡಲಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಿಗೆ ಆಕ್ಸಿಜನ್, ರೆಮ್ಡಿಸಿವಿರ್ ಎಷ್ಟು ಬೇಕೆಂದು ತಿಳಿದು ಅಗತ್ಯಕ್ಕೆ ತಕ್ಕಂತೆ ಒದಗಿಸಲಾಗುವುದು ಎಂದರು.

ವಾರ್‍ರೂಂಗೆ ಕೆಎಎಸ್ ಅಧಿಕಾರಿ ನೇಮಕ ಮಾಡಲಾಗು ವುದು. ಹಾಗೆಯೇ ಪ್ರತಿ ಕ್ಷೇತ್ರಕ್ಕೂ ನೋಡಲ್ ಅಧಿಕಾರಿ ಯನ್ನು ನೇಮಿಸಲು ತೀರ್ಮಾನಿಸಲಾಗಿದೆ. ಚಾಮರಾಜ ನಗರದ ಘಟನೆ ಮೈಸೂರಿನಲ್ಲಿ ಆಗಬಾರದು ಎಂಬ ಉದ್ದೇಶದಿಂದ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಗಳನ್ನು ಕೈಗೊಳ್ಳಲಾಗಿದೆ. ನಾಳೆ ವಾರ್ ರೂಂ ಪರಿ ಶೀಲಿಸುತ್ತೇನೆ ಎಂದು ಹೇಳಿದರು.

ಹಂತ-ಹಂತವಾಗಿ ಆಕ್ಸಿಜನೇಟೆಡ್ ಬೆಡ್: ಮುಡಾ ವತಿ ಯಿಂದ ತುಳಸಿದಾಸ್ ಆಸ್ಪತ್ರೆಯಲ್ಲಿ 100 ಆಕ್ಸಿಜನೇಟೆಡ್ ಬೆಡ್ ವ್ಯವಸ್ಥೆ ಕಲ್ಪಿಸುತ್ತಿದ್ದು, ಅದರಲ್ಲಿ 10 ಬೆಡ್‍ಗಳನ್ನು ಕೊರೊನಾ ವಾರಿಯರ್ಸ್‍ಗೆ ಮೀಸಲಿರಿಸಲಾಗು ವುದು. ಜತೆಗೆ ಬೀಡಿ ಕಾಲೋನಿ ಆಸ್ಪತ್ರೆ ಹಾಗೂ ಮಲ್ಟಿ ಸ್ಪೆಷಾ ಲಿಟಿ ಆಸ್ಪತ್ರೆಗಳಲ್ಲೂ ಆಕ್ಸಿಜನೇಟೆಡ್ ಬೆಡ್ ವ್ಯವಸ್ಥೆ ಮಾಡ ಲಾಗುತ್ತಿದ್ದು, ಹಂತ ಹಂತವಾಗಿ ಬೆಡ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. ಸಚಿವ ಸುಧಾಕರ್ ರಾಜೀನಾಮೆ ನೀಡಬೇಕು ಎಂಬ ರೇಣುಕಾಚಾರ್ಯ ಹೇಳಿಕೆಗೆ ಸಚಿವರು ಪ್ರತಿಕ್ರಿಯಿಸಿ, ರೇಣುಕಾಚಾರ್ಯ ಏಕೆ ಆ ರೀತಿ ಹೇಳಿದ್ದಾರೆಂದು ನನಗೆ ಗೊತ್ತಿಲ್ಲ. ಸುಧಾಕರ್ ಅವರು 24×7 ರೀತಿ ಕೆಲಸ ಮಾಡುತ್ತಿದ್ದಾರೆ. ಒತ್ತಡ ಕಡಿಮೆ ಮಾಡಲು ಜವಾಬ್ದಾರಿ ಹಂಚಿದ್ದಾರೆ ಅಷ್ಟೆ. ಇದರಿಂದ ಸುಧಾಕರ್ ಅವರಿಗೆ ಅಸಮಾಧಾನ ಆಗಿಲ್ಲ. ಬೆಡ್ ನಿರ್ವಹಣೆ ಅಶೋಕ್‍ಗೆ ನೀಡಿದ್ದಾರೆ. ಇದು ಸಚಿವ ಸಂಪುಟ ಸಭೆಯಲ್ಲಿ ಆದ ನಿರ್ಧಾರ ಎಂದು ಹೇಳಿದರು.

ಗೊಂದಲ ನಿವಾರಣೆ: ಸಂಸದ ಪ್ರತಾಪ ಸಿಂಹ ಮಾತನಾಡಿ, ಖಾಸಗಿ ಆಸ್ಪತ್ರೆಗಳಲ್ಲಿ ದಿಢೀರ್ ಅಂತ ಮಧ್ಯರಾತ್ರಿಯಲ್ಲಿ ಕರೆ ಮಾಡಿ ಆಕ್ಸಿಜನ್ ಖಾಲಿಯಾಗುತ್ತಿದೆ ಎಂದು ಹೇಳುತ್ತಿದ್ದರು. ಇನ್ನು ಕೆಲವು ಆಸ್ಪತ್ರೆಗಳಲ್ಲಿ ರೆಮ್ಡಿಸಿವಿರ್ ಇಲ್ಲ, ಹೊರಗಡೆಯಿಂದ ತರುವಂತೆ ಹೇಳಿ ಕಳುಹಿಸುತ್ತಿದ್ದರು. ಇದರಿಂದ ಗೊಂದಲದ ವಾತಾವರಣ ಸೃಷ್ಠಿಯಾ ಗಿತ್ತು. ಈ ಸಮಸ್ಯೆಯನ್ನು ನೀಗಿಸಲು ಟಾಸ್ಕ್‍ಫೋರ್ಸ್ ರಚಿಸಲಾಗಿದೆ ಎಂದರು.
ನಗರದಲ್ಲಿನ 30ಕ್ಕೂ ಹೆಚ್ಚು ಬೆಡ್‍ಗಳಿರುವ ಆಸ್ಪತ್ರೆಗಳಲ್ಲಿ ಎಷ್ಟು ಸಿಲಿಂಡರ್ ತೆಗೆದುಕೊಳ್ಳು ತ್ತಿದ್ದರೆಂದು ಮಾಹಿತಿ ಇರಲಿಲ್ಲ. ಹಾಗಾಗಿ ವ್ಯವಸ್ಥಿತ ಚೌಕಟ್ಟಿನಲ್ಲಿ ವಿತರಿಸಬೇಕೆಂದು ಪ್ರತಿ ಆಸ್ಪತ್ರೆಗಳಲ್ಲಿ ಒಬ್ಬ ಸರ್ಕಾರಿ ಅಧಿಕಾರಿಗಳನ್ನು ನಿಯುಕ್ತಿ ಮಾಡಲಾಗುವುದು. ಜತೆಗೆ ವೆಬ್‍ಸೈಟ್‍ಗೂ ಚಾಲನೆ ನೀಡಲಾಗುವುದು. ಅಧಿಕಾರಿಗಳು ಆಸ್ಪತ್ರೆಗಳಲ್ಲಿ ಎಷ್ಟೆಷ್ಟು ಆಕ್ಸಿಜನೇಟೆಡ್ ಬೆಡ್‍ಗಳಿವೆ, ಮುಂದಿನ 10 ದಿನಕ್ಕೆ ಎಷ್ಟು ಆಕ್ಸಿಜನ್ ನೀಡಬೇಕೆಂದು ಅಂದಾಜಿಸಿ ಸಿಲಿಂಡರ್ ವಿತರಿಸಲಾಗುತ್ತದೆ. ಆಕ್ಸಿಜನ್ ತಯಾರಿಕ ಘಟಕದವರು ಖಾಸಗಿ ಆಸ್ಪತ್ರೆಗೆ ನೇರವಾಗಿ ಸಿಲಿಂಡರ್ ವಿತರಿಸದಂತೆ ಸೂಚಿಸಲಾಗಿದೆ ಎಂದ ಅವರು, ಜಿಲ್ಲಾ ಟಾಸ್ಕ್ ಫೋರ್ಸ್ ಅಧ್ಯಕ್ಷರಾಗಿ ನೇಮಿಸಿ ತಮಗೆ ಆಕ್ಸಿಜನ್, ರೆಮ್ಡಿ ಸಿವಿರ್‍ನ ಸಂಪೂರ್ಣ ಉಸ್ತುವಾರಿ ನೀಡಿರುವ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.

Translate »