ಚಾಮರಾಜನಗರಕ್ಕೆ ಸಕಾಲದಲ್ಲಿ 251 ಆಕ್ಸಿಜನ್ ಸಿಲಿಂಡರ್ ಪೂರೈಸಿದ್ದೇವೆ
ಮೈಸೂರು

ಚಾಮರಾಜನಗರಕ್ಕೆ ಸಕಾಲದಲ್ಲಿ 251 ಆಕ್ಸಿಜನ್ ಸಿಲಿಂಡರ್ ಪೂರೈಸಿದ್ದೇವೆ

May 6, 2021
  • ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸ್ಪಷ್ಟನೆ =
  • ನನ್ನ 10 ವರ್ಷದ ಸೇವಾವಧಿಯಲ್ಲಿ ಎಂದೂ ಇಂಥ ಆರೋಪ ಎದುರಿಸಿರಲಿಲ್ಲ: ಗದ್ಗದಿತರಾದ ಡಿಸಿ ರೋಹಿಣಿ ಸಿಂಧೂರಿ
  • ಅವರೇ ಸರಿಯಾಗಿ ನಿರ್ವಹಣೆ ಮಾಡದೇ ನಮ್ಮ ಮೇಲೆ ಆರೋಪ ಮಾಡುವುದು ಸರಿಯೆ?

ಮೈಸೂರು, ಮೇ 5(ಆರ್‍ಕೆ)- ಕಡೇ ಘಳಿಗೆಯಲ್ಲಿ ಅವರ ಕೋರಿಕೆ ಯಂತೆ ನಾವು ಚಾಮರಾಜ ನಗರಕ್ಕೆ 251 ಆಮ್ಲಜನಕ ಸಿಲಿಂ ಡರ್‍ಗಳನ್ನು ಪೂರೈಸಿದ್ದೇವೆ ಎಂದು ಮೈಸೂರು ಜಿಲ್ಲಾ ಧಿಕಾರಿ ರೋಹಿಣಿ ಸಿಂಧೂರಿ ಅವರು ಇಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಮೈಸೂರಿನ ಜಲ ದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಆಮ್ಲಜನಕ ಕೊರತೆಯಿಂದಾಗಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ 24 ಮಂದಿ ಕೊರೊನಾ ಸೋಂಕಿತರು ಸಾವ ನ್ನಪ್ಪಿರುವುದಕ್ಕೆ ನನಗೆ ವೈಯಕ್ತಿಕವಾಗಿ ಬಹಳ ನೋವಾಗಿದೆ. ದೇಶದ ಯಾವುದೇ ಮೂಲೆಯಲ್ಲಿ ಆದ ಸಾವು ಸಾವೆ. ಸತ್ತವರ ಮನೆಯಲ್ಲಿ ನೋವಿರುತ್ತದೆ. ಅಂತಹ ಸಂದರ್ಭದಲ್ಲಿ ‘ಸರಿಯಾದ ಸಮಯದಲ್ಲಿ ಮೈಸೂರಿನಿಂದ ಆಮ್ಲಜನಕ ಸಿಲಿಂಡರ್ ಸಪ್ಲೈ ಮಾಡದಿರುವುದೇ ದುರಂತಕ್ಕೆ ಕಾರಣ’ ಎಂದು ಆರೋಪಿಸಿ ರುವುದು ಸರಿಯಲ್ಲ ಎಂದರು.

ನನ್ನ 10 ವರ್ಷದ ಸೇವಾ ಅವಧಿಯಲ್ಲಿ ನಾನೆಂದೂ ಈ ರೀತಿ ಕೆಲಸ ಮಾಡಿಲ್ಲ ಹಾಗೂ ಇಂತಹ ಆರೋಪವನ್ನು ನಾನು ಎದುರಿಸಿರ ಲಿಲ್ಲ ಎಂದು ರೋಹಿಣಿ ಸಿಂಧೂರಿ ಗದ್ಗದಿತ ರಾದರು. ಈ ರೀತಿ ಆರೋಪ ಮಾಡ ಬಾರದು. ಇಂತಹ ಮಾತುಗಳಿಂದ ಜನರಲ್ಲಿ ನಮ್ಮ ಮೇಲೆ ತಪ್ಪು ಅಭಿಪ್ರಾಯ ಬರುತ್ತದೆ. ಚಾಮರಾಜನಗರ ಡಿಸಿ ಮಾಧ್ಯಮದಲ್ಲಿ ಹೇಳಿಕೆ ನೀಡದಿದ್ದಲ್ಲಿ ನಾನು ಈ ರೀತಿಯ ಪ್ರತಿಕ್ರಿಯೆ ನೀಡುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದರು. ತನಿಖೆಯಲ್ಲಿ ಎಲ್ಲವೂ ತಿಳಿಯ ಲಿದೆ. ಚಾಮರಾಜನಗರ ಜಿಲ್ಲಾಡಳಿತದ ಕೋರಿಕೆಗೆ ಸ್ಪಂದಿಸಿಲ್ಲ ಎಂಬುದು ಸತ್ಯಕ್ಕೆ ದೂರವಾದ ಮಾತು. ಅವರ ಸಂಕಷ್ಟಕ್ಕೆ ಸ್ಪಂದಿಸಲು ಬಹಳ ರಿಸ್ಕ್ ತೆಗೆದುಕೊಂಡು ನಮ್ಮ ಆಸ್ಪತ್ರೆ ಯಲ್ಲಿದ್ದ ಆಕ್ಸಿಜನ್ ಸಿಲಿಂಡರ್‍ಗಳನ್ನು ಕಳುಹಿಸಿದ್ದೇವೆ ಎಂದು ವಿವರಿಸಿದರು.
ಯಾರೂ ಸಹ ಆಸ್ಪತ್ರೆಯಲ್ಲಿದ್ದ ಸಿಲಿಂ ಡರ್‍ಗಳನ್ನು ಕಳುಹಿಸುವ ರಿಸ್ಕ್ ತೆಗೆದು ಕೊಳ್ಳುವುದಿಲ್ಲ, ಆದರೆ ನಾವು ಮಾನ ವೀಯತೆ ದೃಷ್ಟಿಯಿಂದ ಸ್ಪಂದಿಸಿದ್ದೇವೆ. ಚಾಮ ರಾಜನಗರ ಡಿಸಿ ಮೊದಲೇ ಕೇಳಿದ್ದರೆ ಆಗಲೂ ಕಳುಹಿಸುತ್ತಿದ್ದೆವು.

ಅವರು ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಣೆ ಮಾಡದೇ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದೂ ರೋಹಿಣಿ ಸಿಂಧೂರಿ ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ಜಿಲ್ಲೆಯಲ್ಲಿ ಈ ರೀತಿಯ ಸಮಸ್ಯೆ ಆಗಿದ್ದರೆ ಯಾರನ್ನಾದರೂ, ಹೇಗಾದರೂ ಸಂಪರ್ಕಿಸಿ ಲಿಕ್ವಿಡ್ ಆಕ್ಸಿಜನ್ ಪಡೆಯುತ್ತಿದ್ದೆವು. ಆದರೆ ಅವರು ಆ ಕೆಲಸ ಮಾಡಿಲ್ಲ. ನಾವು ಜನರ ಪ್ರಾಣ ಉಳಿಸಲು ದಿನದ 24 ಗಂಟೆ ಕೆಲಸ ಮಾಡುತ್ತಿದ್ದೇವೆ. ಆದರೆ ಒಬ್ಬ ತತ್ಸಮಾನ ಅಧಿಕಾರಿ ಈ ರೀತಿ ಹೇಳಿದಾಗ ನಮಗೂ ನೋವಾಗುತ್ತದೆ ಎಂದು ಡಿಸಿ ರೋಹಿಣಿ ಸಿಂಧೂರಿ ಗದ್ಗದಿತರಾದರು. ಘಟನೆ ಕುರಿತ ತನಿಖೆಗೆ ಹಿರಿಯ ಐಎಎಸ್ ಅಧಿಕಾರಿಯನ್ನು ಈಗಾಗಲೇ ರಾಜ್ಯ ಸರ್ಕಾರ ಸೇಮಿಸಿದೆ. ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಒಂದೇ ರಾತ್ರಿ 24 ಮಂದಿ ಕೊರೊನಾ ಸೋಂಕಿತರ ಸಾವಿಗೆ ಕಾರಣ ಏನೆಂಬುದು ತಿಳಿಯಲಿದೆ. ಆದರೆ ಘಟನೆ ಕುರಿತು ಹಾಗೂ ವೃಥಾ ಆರೋಪದ ಬಗ್ಗೆ ನನಗೆ ಬಹಳ ನೋವಾಗಿದೆ ಎಂದು ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ನುಡಿದರು.

Translate »