ಸುತ್ತೂರು ಶ್ರೀಗಳಿಗೆ  ಮಾತೃವಿಯೋಗ
ಮೈಸೂರು

ಸುತ್ತೂರು ಶ್ರೀಗಳಿಗೆ ಮಾತೃವಿಯೋಗ

June 15, 2021

ಮೈಸೂರು, ಜೂ. 14- ಸುತ್ತೂರು ಮಹಾಸಂಸ್ಥಾನ ಮಠಾಧೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಮಾತೃಶ್ರೀಗಳಾದ ಶಿವನಾಗಮ್ಮ (90) ಅವರು ಸೋಮವಾರ ಬೆಳಗ್ಗೆ ಮೈಸೂ ರಿನಲ್ಲಿ ನಿಧನರಾದರು.

ಮೈಸೂರಿನ ಕೆ.ಆರ್.ಮೊಹಲ್ಲಾದ ನಂಜುಮಳಿಗೆ ಸರ್ಕಲ್ ಬಳಿ ನೆಲೆಸಿದ್ದ ಶಿವನಾಗಮ್ಮ ಅವರು, ಪುತ್ರರಾದ ಸುತ್ತೂರು ಶ್ರೀಗಳು, ಐಎಎಸ್ ಅಧಿಕಾರಿ ಎಸ್‍ಪಿ ಷಡಕ್ಷರಿ ಸ್ವಾಮಿ, ಜೆಎಸ್‍ಎಸ್ ಮಹಾ ವಿದ್ಯಾಪೀಠದ ಕಾರ್ಯದರ್ಶಿ ಎಸ್‍ಪಿ ಮಂಜುನಾಥಸ್ವಾಮಿ, ಸುತ್ತೂರು ಶೈಕ್ಷಣಿಕ ಸಂಸ್ಥೆಗಳ ಆಡಳಿತಾಧಿಕಾರಿ ಎಸ್‍ಪಿ ಉದಯಶಂಕರ, ಪುತ್ರಿಯರಾದ ಎಸ್‍ಪಿ ಶಶಿಕಲಾ, ಕನ್ನಡ ನಿವೃತ್ತ ಪ್ರಾಧ್ಯಾಪಕಿ ಎಸ್‍ಪಿ ಉಮಾದೇವಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ನಂಜನಗೂಡು ತಾಲೂಕಿನ ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ಸೋಮವಾರ ಸಂಜೆ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಸುತ್ತೂರು ಶ್ರೀಗಳು, ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗಸ್ವಾಮಿಗಳು, ಕನಕಪುರದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಸೇರಿದಂತೆ ಹಲವು ಮಠಗಳ ಸ್ವಾಮೀಜಿ ಗಳು, ಜನಪ್ರತಿನಿಧಿಗಳು, ಮಠದ ಅಪಾರ ಭಕ್ತರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದರು.

Translate »