ಶ್ರಮಿಕ ವರ್ಗದವರಿಗೆ ಸರ್ಕಾರದ ಆರ್ಥಿಕ ನೆರವು ಹಸ್ತಾಂತರ
ಮೈಸೂರು

ಶ್ರಮಿಕ ವರ್ಗದವರಿಗೆ ಸರ್ಕಾರದ ಆರ್ಥಿಕ ನೆರವು ಹಸ್ತಾಂತರ

June 16, 2021

ಮೈಸೂರು, ಜೂ.15(ಎಂಟಿವೈ)- ಲಾಕ್‍ಡೌನ್‍ನಿಂದಾಗಿ ಆರ್ಥಿಕ ಸಂಕಷ್ಟ ಕ್ಕೊಳಗಾಗಿರುವ ಕಾಯಕ ಸಮುದಾಯ ಗಳಿಗೆ ರಾಜ್ಯ ಸರ್ಕಾರ ಘೋಷಿಸಿದ ಆರ್ಥಿಕ ನೆರವಿನ ತಲಾ 2 ಸಾವಿರ ರೂ.ಗಳ ನಗದನ್ನು ಮೊದಲ ಕಂತಿನಲ್ಲಿ 50 ಫಲಾನುಭವಿಗಳಿಗೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಆರ್.ರಘು ಕೌಟಿಲ್ಯ ವಿತರಿಸಿದರು.

ಶ್ರಮಿಕವರ್ಗ, ಕಾಯಕ ಸಮುದಾಯಕ್ಕೆ ಸರ್ಕಾರ ಘೋಷಿಸಿದ ಆರ್ಥಿಕ ನೆರವಿನ ಪ್ಯಾಕೇಜ್ ದೊರಕಿಸಿಕೊಡಲು ಮೈಸೂ ರಿನ ಜೀವಧಾರ ಪದವೀಧರ ಘಟಕ ಸೇವಾ ಶುಲ್ಕ ಪಡೆಯದೇ ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಕೊಟ್ಟಿತ್ತು. ಹೆಸರು ನೋಂದಾಯಿಸಿದ 50 ಮಂದಿಗೆ ಮೊದಲ ಕಂತಿನಲ್ಲಿ ಸರ್ಕಾರ ತಲಾ 2 ಸಾವಿರ ರೂ. ಬಿಡುಗಡೆ ಮಾಡಿತ್ತು. ಡಾ. ರಾಜ್‍ಕುಮಾರ್ ಉದ್ಯಾನದಲ್ಲಿ ಸೋಮ ವಾರ ನಡೆದ ಕಾರ್ಯಕ್ರಮದಲ್ಲಿ ಆರ್ಥಿಕ ನೆರವು ವಿತರಿಸಲಾಯಿತು.

ಬಳಿಕ ಮಾತನಾಡಿದ ಆರ್.ರಘು ಕೌಟಿಲ್ಯ, ಕೊರೊನಾ ಮತ್ತು ಲಾಕ್‍ಡೌನ್ ನಿಂದಾಗಿ ಶ್ರಮಿಕವರ್ಗ ತೀವ್ರ ಸಂಕಷ್ಟಕ್ಕೆ ಗುರಿಯಾಗಿದೆ. ಜನರನ್ನು ಸೋಂಕಿನಿಂದ ರಕ್ಷಿಸಲು ಸರ್ಕಾರ ಹಲವು ಕ್ರಮ ಕೈಗೊಂಡಿ ದ್ದರೂ ಜನರ ಸಹಕಾರವೂ ಮುಖ್ಯ. ಸೋಂಕು ಹರಡುವಿಕೆ ತಡೆಯಲೆಂದೇ ಲಾಕ್‍ಡೌನ್ ಜಾರಿಗೊಳಿಸಿದ್ದು, ಜನತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಸಹಕರಿಸಬೇಕು ಎಂದರು.

ಕೊರೊನಾ 2ನೇ ಅಲೆಯಿಂದಾಗಿ ಸಂಕ ಷ್ಟಕ್ಕೆ ಸಿಲುಕಿದ್ದವರ ನೆರವಿಗೆ ಮುಖ್ಯಮಂತ್ರಿ ಮುಂದಾಗಿದ್ದಾರೆ. ಶ್ರಮಿಕವರ್ಗಗಳಾದ ಮಡಿವಾಳ, ಸವಿತಾ ಸಮಾಜ, ದರ್ಜಿ ಗಳು, ಕಲಾವಿದರು, ಮೆಕ್ಯಾನಿಕ್, ಹಮಾ ಲರು, ಅಲೆಮಾರಿಗಳು, ಭಟ್ಟಿ ಕಾರ್ಮಿ ಕರು, ಅಕ್ಕಸಾಲಿಗರು, ಕಮ್ಮಾರರು, ಆಟೋ ಚಾಲಕರು, ಮನೆಗೆಲಸದವರು ಸೇರಿದಂತೆ ಅಸಂಘಟಿತ ವಲಯದ ಎಲ್ಲಾ ಶ್ರಮಿಕ ರಿಗೂ ತಲಾ 2 ಸಾವಿರ ರೂ. ಪರಿಹಾರ ಘೋಷಿಸಲಾಗಿದೆ. ಜೀವಧಾರ ಪದವೀ ಧರ ಘಟಕವು ಸೇವಾ ಸಿಂಧು ವೆಬ್ ಪೆÇೀರ್ಟಲ್‍ನಲ್ಲಿ ಉಚಿತ ನೋಂದಣಿ ಮಾಡಿ ಕೊಡುತ್ತಿದೆ. ಕಡು ಬಡಕುಟುಂಬದವರು ಈ ಸೌಲಭ್ಯದ ಸದುಪಯೋಗ ಪಡೆಯ ಬೇಕು. ಆಧಾರ್, ಬ್ಯಾಂಕ್ ಪಾಸ್‍ಬುಕ್ ಮೊದಲ ಪುಟ, ವೃತ್ತಿ ದೃಢೀಕರಣಪತ್ರ, ಭಾವಚಿತ್ರಗಳನ್ನು ನೀಡಿ ಆರ್ಥಿಕ ನೆರವು ಪಡೆಯಬಹುದು. ದಸರಾ ವಸ್ತುಪ್ರದ ರ್ಶನ ಅಂಗಳದಲ್ಲಿ ಸಹಾಯವಾಣಿ ತೆರೆಯಲಾಗಿದೆ ಎಂದು ವಿವರಿಸಿದರು.

ಸವಿತಾ ಸಮಾಜ ಹಿತರಕ್ಷಣಾ ಸಮಿತಿ ಅಧ್ಯಕ್ಷ ರಮೇಶ್ ಕುಮಾರ್ ಮಾತನಾಡಿ, ಲಾಕ್‍ಡೌನ್ ಸಂದರ್ಭ ಹೇರ್‍ಡ್ರೆಸ್ಸಿಂಗ್ ಕೇಂದ್ರಗಳನ್ನು ಮುಚ್ಚಿಸಲಾಗಿದೆ. ಈ ವೃತ್ತಿ ಯನ್ನು ಜಿಲ್ಲೆಯಲ್ಲಿ 6 ಸಾವಿರಕ್ಕೂ ಹೆಚ್ಚು ಮಂದಿ ಅವಲಂಬಿಸಿದ್ದು, ಎಲ್ಲ ಕುಟುಂಬ ಗಳೂ ತೊಂದರೆಯಲ್ಲಿವೆ. ದಿನಸಿ ಅಂಗಡಿ ಗಳಿಗೆ ಅವಕಾಶ ನೀಡಿದಂತೆ ದಿನಕ್ಕೆ 10 ಮಂದಿಗಾದರೂ ಹೇರ್‍ಡ್ರೆಸ್ಸಿಂಗ್ ಮಾಡಲು ಅವಕಾಶ ಕೊಡಬೇಕು ಎಂದು ಮನವಿ ಮಾಡಿದರು. ಬಿಜೆಪಿ ರಾಜ್ಯ ವಕ್ತಾರ ಎಂ.ಜಿ. ಮಹೇಶ್, ಮಹಿಳಾ ಮೋರ್ಚಾ ನಗರ ಉಪಾಧ್ಯಕ್ಷೆ ಸರಸ್ವತಿ ಪ್ರಸಾದ್, ಪಾಲಿಕೆ ಸದಸ್ಯ ಎಂ.ಸತೀಶ್, ಮಹಿಳಾ-ಮಕ್ಕಳ ಕಲ್ಯಾಣ ಇಲಾಖೆ ಸದಸ್ಯರಾದ ರೇಣುಕಾ ರಾಜ್, ಜೀವಧಾರ ಪದವೀಧರ ಘಟಕ ಕಾರ್ಯ ದರ್ಶಿ ವರಲಕ್ಷ್ಮಿ, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಎಸ್.ಇ.ಗಿರೀಶ್, ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಮಹೇಂದ್ರಸಿಂಗ್ ಕಾಳಪ್ಪ, ಮುಖಂಡರಾದ ಬ್ರಹ್ಮಾಚಾರ್, ಪೃಥ್ವಿ ಸಿಂಗ್ ಚಂದಾವತ್ ಮತ್ತಿತರರಿದ್ದರು.

Translate »