ಕುಂದಕೆರೆ ವಲಯದ ಕಾಡಂಚಿನ ಗ್ರಾಮಗಳಿಗೆ ಅರಣ್ಯ ಸಚಿವರ ಭೇಟಿ ಹುಲಿ ದಾಳಿ ಸಂತ್ರಸ್ತರ ಸಮಸ್ಯೆ ಆಲಿಕೆ
ಮೈಸೂರು

ಕುಂದಕೆರೆ ವಲಯದ ಕಾಡಂಚಿನ ಗ್ರಾಮಗಳಿಗೆ ಅರಣ್ಯ ಸಚಿವರ ಭೇಟಿ ಹುಲಿ ದಾಳಿ ಸಂತ್ರಸ್ತರ ಸಮಸ್ಯೆ ಆಲಿಕೆ

May 11, 2020

ಗುಂಡ್ಲುಪೇಟೆ, ಮೇ 10 (ಸೋಮ್.ಜಿ) – ಕಳೆದ 20 ದಿನಗಳಿಂದ ಜಾನುವಾರು ಗಳ ಮೇಲೆ ಹುಲಿ ದಾಳಿ ಮಾಡಿ ಬಲಿ ಪಡೆಯುತ್ತಿರುವ ಕುಂದಕೆರೆ ವಲಯದ ಕಾಡಂಚಿನ ಕಡಬೂರು ಗ್ರಾಮಕ್ಕೆ ಅರಣ್ಯ ಸಚಿವ ಆನಂದ್ ಸಿಂಗ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಭಾಗದಲ್ಲಿ 20ಕ್ಕೂ ಹೆಚ್ಚು ಹಸು ಗಳನ್ನು ಕೊಂದು ಅಟ್ಟಹಾಸ ಮೆರೆಯು ತ್ತಿರುವ ಹುಲಿಯನ್ನು ಸೆರೆ ಹಿಡಿಯುವಂತೆ ರೈತರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಖುದ್ದು ಅರಣ್ಯ ಸಚಿವರೇ ಭೇಟಿ ನೀಡಿ ಈ ಭಾಗದ ರೈತರೊಂದಿಗೆ ಸಂವಾದ ನಡೆಸಿ ಸಮಸ್ಯೆಗಳನ್ನು ಆಲಿಸಿದರು.

ಬಂಡೀಪುರ ರಾಷ್ಟ್ರೀಯ ಉದ್ಯಾನವ ನದ ವ್ಯಾಪ್ತಿಯಿಂದ 3 ಹುಲಿಗಳು ಹೊರ ಬಂದಿರುವುದು ಗ್ರಾಮಗಳಲ್ಲಿ ಭೀತಿಯುಂಟು ಮಾಡಿದೆ. ಆದ್ದರಿಂದ ಸರ್ಕಾರ ಹುಲಿಗಳ ಸೆರೆಗೆ ಅನುಮತಿ ನೀಡಬೇಕು. ಕೂಡಲೇ ಅವುಗಳನ್ನು ಹಿಡಿದು ಬೇರೆಡೆ ಸ್ಥಳಾಂತರಿ ಸಬೇಕು ಎಂದು ಶಾಸಕ ನಿರಂಜನ ಕುಮಾರ್ ಸಚಿವರಿಗೆ ಮನವಿ ಮಾಡಿದರು.

ಸಚಿವರನ್ನು ಭೇಟಿಯಾದ ರೈತ ಸಂಘದ ಮುಖಂಡರಾದ ಸಂಪತ್ ಹಾಗೂ ಕಡ ಬೂರು ಮಂಜುನಾಥ್ ಮಾತನಾಡಿ, ಕಾಡಂ ಚಿನಲ್ಲಿ ಸೋಲಾರ್ ಬೇಲಿಗಳು ನಿಷ್ಕ್ರಿಯ ವಾಗಿದ್ದು, ಮಳೆಯಿಂದ ಕಂದಕ ಮುಚ್ಚಿ ಕೊಂಡಿರುವುದರಿಂದ ವನ್ಯಜೀವಿಗಳ ದಾಳಿ ಪ್ರಕರಣಗಳು ಹೆಚ್ಚಾಗಿವೆ. ಕಳೆದ 10 ವರ್ಷ ಗಳಿಂದಲೂ ರೈಲ್ವೇ ಕಂಬಿ ಅಳವಡಿಸುವಂತೆ ಮನವಿ ಮಾಡಿದ್ದರೂ ನಿರ್ಲಕ್ಷ್ಯ ಮಾಡಲಾ ಗಿದೆ. ಕಂದಕಗಳನ್ನು ದಾಟುವ ಜಿಂಕೆಗಳನ್ನು ಹುಲಿ, ಚಿರತೆಗಳು, ಹಿಂಬಾಲಿಸಿ ಗ್ರಾಮಗಳತ್ತ ಆಗಮಿಸುತ್ತಿವೆ. ಅರಣ್ಯ ಇಲಾಖೆ ಹುಲಿ ಸೆರೆ ಕಾರ್ಯಾಚರಣೆ ಹೆಸರಿನಲ್ಲಿ ಕಾಲಹರಣ ಮಾಡುತ್ತಿದ್ದು ಸೆರೆ ಹಿಡಿಯಲು ಅನುಮತಿ ದೊರಕಿಲ್ಲ ಎಂದು ಅಧಿಕಾರಿಗಳು ಹೇಳು ತ್ತಿದ್ದಾರೆ ಎಂದು ದೂರಿದರು.

ಹುಲಿಗಳ ದಾಳಿಯಿಂದ ಸಾವಿಗೀಡಾದ ಜಾನುವಾರು ಮಾಲೀಕರಿಗೆ ಅರಣ್ಯ ಇಲಾಖೆ ನೀಡುತ್ತಿರುವ ಪರಿಹಾರ ಸಾಲುತ್ತಿಲ್ಲ. ಜಾನು ವಾರು ಸಾವಿನಿಂದ ಜೀವನೋಪಾಯಕ್ಕೆ ಹೈನುಗಾರಿಕೆಯನ್ನೇ ಅವಲಂಬಿಸಿದ ಕುಟುಂಬ ಗಳು ಬೀದಿಪಾಲಾಗುತ್ತಿವೆ. ರೈತರು ತಮ್ಮ ಜಮೀನಿಗೆ ಹೋಗಲು ಹೆದರುತ್ತಿದ್ದಾರೆ. ಆದ್ದರಿಂದ ರೈಲ್ವೇ ಕಂಬಿಗೆ 15 ಅಡಿ ಎತ್ತ ರದ ಚೈನ್ ಲಿಂಕ್ ಮೆಷ್ ಅಳವಡಿಸುವ ಮೂಲಕ ಯಾವುದೇ ವನ್ಯಜೀವಿಯೂ ಅರಣ್ಯದಿಂದ ಹೊರಬರದಂತೆ ತಡೆ ಯೊಡ್ಡಿ ಶಾಶ್ವತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು. ಈ ಬಗ್ಗೆ ಅಧಿಕಾರಿ ಗಳಿಗೆ ಸೂಚನೆ ನೀಡಲಾಗುವುದು. ಸೋಮ ವಾರದಿಂದ ಹುಲಿ ಸೆರೆಗೆ ಕಾರ್ಯಾಚರಣೆ ಪ್ರಾರಂಭಿಸಲಾಗುವುದು ಎಂದು ಸಚಿವ ಆನಂದ್ ಸಿಂಗ್ ಭರವಸೆ ನೀಡಿದರು.

15 ವರ್ಷಗಳ ಹಿಂದೆ ಕಾಡಂಚಿನಲ್ಲಿ ಸೋಲಾರ್ ಅಳವಡಿಸಿ ವನ್ಯಜೀವಿಗಳ ದಾಳಿ ತಡೆಗಟ್ಟುವುದಾಗಿ ಹೇಳಿ ರೈತರಿಂದ ಸುಮಾರು 1500 ಎಕರೆ ಭೂಮಿ ಖರೀದಿ ಸಿದ ಖಾಸಗಿ ವ್ಯಕ್ತಿ ಈ ಜಮೀನಿನ ಮೇಲೆ ಬ್ಯಾಂಕುಗಳಿಂದ ಸಾಲ ಪಡೆದು ಜಮೀ ನನ್ನು ಯಾವುದೇ ವ್ಯವಸಾಯ ಮಾಡದೇ ಬಿಟ್ಟಿರುವುದರಿಂದ ಗಿಡಗಂಟಿಗಳು ಹಾಗೂ ಪೆÇದೆಗಳು ಬೆಳೆದು ವನ್ಯಜೀವಿಗಳ ಆವಾಸ ಸ್ಥಾನವಾಗುತ್ತಿದೆ. ಆದ್ದರಿಂದ ಈ ಭೂಮಿ ಯನ್ನು ಮೂಲ ಮಾಲೀಕರಿಗೆ ಹಿಂದುರುಗಿ ಸಿದರೆ ಅವರು ಬೆಳೆ ಬೆಳೆಯುವುದರಿಂದ ದೇಶದ ಆಹಾರೋತ್ಪಾದನೆಗೆ ಸಹಕಾರಿ ಯಾಗಲಿದೆ. ಇಲ್ಲವೇ ಅರಣ್ಯಕ್ಕೆ ಸೇರಿಸಿಕೊಂ ಡರೆ ಹೆಚ್ಚುತ್ತಿರುವ ವನ್ಯಜೀವಿಗಳಿಗೂ ಸಮ ರ್ಪಕ ನೆಲೆ ದೊರಕಲಿದೆ ಎಂದು ರೈತರು ಮನವಿ ಮಾಡಿದರು. ಈ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ಹೇಳಿದರು.

ಈ ವೇಳೆ ಪಿಸಿಸಿಎಫ್ ಅಜಯ್ ಮಿಶ್ರ, ಸಿಸಿಎಫ್‍ಗಳಾದ ಟಿ.ಹೀರಾಲಾಲ್, ಸಿಎಫ್ ಟಿ.ಬಾಲಚಂದ್ರ, ಎಎಸ್‍ಪಿ ಅನಿತಾ ಹದ್ದಣ್ಣ ನವರ್, ತಹಶೀಲ್ದಾರ್ ನಂಜುಂಡಯ್ಯ, ಬಿಜೆಪಿ ಯುವಮೊರ್ಚಾ ಜಿಲ್ಲಾಧ್ಯಕ್ಷ ಪ್ರಣಯ್, ಮಂಡಲಾಧ್ಯಕ್ಷ ಜಗದೀಶ್, ಮುಖಂಡರಾದ ಮಲ್ಲೇಶ್, ಅಭಿಷೇಕ್ ಹಾಗೂ ಇತರರಿದ್ದರು.

Translate »