ಲಾಕ್‍ಡೌನ್: ಮೈಸೂರಿನ `ಸ್ವಯಂ ಸೇವಕರ’ ಹೃದಯಸ್ಪರ್ಶಿ ಸೇವಾ ಕಾರ್ಯ
ಮೈಸೂರು

ಲಾಕ್‍ಡೌನ್: ಮೈಸೂರಿನ `ಸ್ವಯಂ ಸೇವಕರ’ ಹೃದಯಸ್ಪರ್ಶಿ ಸೇವಾ ಕಾರ್ಯ

May 11, 2020

ಮೈಸೂರು, ಮೇ 10(ಎಂಕೆ)- ಮೈಸೂ ರಿನಲ್ಲಿ ಕೊರೊನಾ ಸೋಂಕು ಹರಡುವು ದನ್ನು ತಡೆಯಲು ರಾತ್ರಿ-ಹಗಲು ಶ್ರಮಿಸು ತ್ತಿರುವ ಸಾವಿರಾರು ಕೊರೊನಾ ವಾರಿ ಯರ್ಸ್‍ಗೆ ಮೈಸೂರಿನ ನೂರಾರು ಸ್ವಯಂ ಸೇವಕರು ಉತ್ತಮ ಸಾಥ್ ನೀಡಿದ್ದಾರೆ.

ಮೈಸೂರಿನಲ್ಲಿ ಕೊರೊನಾ ಸೋಂಕಿ ತರ ಸಂಖ್ಯೆ ಈಗ ದಿನದಿಂದ ಕಡಿಮೆಯಾ ಗುತ್ತಿದೆ. ಇದಕ್ಕಾಗಿ ಶ್ರಮಿಸಿದ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು, ಪೊಲೀಸರಂತೆಯೇ ಸ್ವಯಂ ಸೇವಕರು ಸಹ ಬೆವರು ಹರಿಸಿದ್ದಾರೆ. ಲಾಕ್ ಡೌನ್ ಸಂದರ್ಭ ಕಷ್ಟಕ್ಕೆ ಸಿಲುಕಿದವರ ಮನೆ ಬಾಗಿಲಿಗೆ ಔಷಧಿ, ಊಟ, ದಿನಸಿ, ಅಗತ್ಯ ವಸ್ತುಗಳನ್ನು ಪೂರೈಸುವಲ್ಲಿ ಸ್ವಯಂಸೇವ ಕರು ಮಹತ್ವದ ಪಾತ್ರ ನಿರ್ವಹಿಸಿದ್ದಾರೆ.

ಜಿಲ್ಲೆಯಲ್ಲಿ ಲಾಕ್‍ಡೌನ್ ಜಾರಿಯಾಗುತ್ತಿ ದ್ದಂತೆ ಜಿಲ್ಲಾಡಳಿತದ ವೆಬ್‍ಸೈಟ್ ಮೂಲಕ 200ಕ್ಕೂ ಅಧಿಕ ಸ್ವಯಂಸೇವಕರನ್ನು ನೋಂದಣಿ ಮಾಡಿಕೊಳ್ಳಲಾಯಿತು. ಈ ಸ್ವಯಂಸೇವಕರೆಲ್ಲರೂ ಮೈಸೂರಿನವರೆ. ತಮ್ಮಷ್ಟಕ್ಕೇ ವಾಟ್ಸಾಪ್ ಗ್ರೂಪ್ ಮಾಡಿ ಕೊಂಡು, ಪಾಲಿಕೆ ಸೂಚನೆಯಂತೆ ಬಹಳ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿದ್ದಾರೆ. ತಮ್ಮದೇ ವಾಹನಗಳಲ್ಲಿ ನಗರದಲ್ಲಿ ಸಂಚ ರಿಸಿ ರೇಷನ್ ಕಾರ್ಡ್ ಇಲ್ಲದ 4435 ಅತ್ಯಂತ ಬಡಕುಟುಂಬಗಳ ಮನೆ ಬಾಗಿಲಿಗೆ ರೇಷನ್ ಕಿಟ್, 33,170 ಜನರಿಗೆ ಊಟದ ಪೊಟ್ಟಣ, 100ಕ್ಕೂ ಹೆಚ್ಚು ಮನೆಗಳಿಗೆ ಔಷಧಿ, 2266 ಲೀ. ಹಾಲು ತಲುಪಿಸಿದ್ದಾರೆ. 6000ಕ್ಕೂ ಹೆಚ್ಚು ಪ್ರಾಣಿಗಳಿಗೆ ಆಹಾರ ಪೂರೈಸಿದ್ದಾರೆ. ಅಲ್ಲದೇ ಕೊರೊನಾ ನಿಯಂತ್ರಿಸಲು ಮಾಸ್ಕ್, ಸ್ಯಾನಿಟೈಸರ್ ಬಳಕೆ ಕುರಿತು ವಾಹನ ಸವಾರರಿಗೆ, ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ್ದಾರೆ. ಪಾಲಿಕೆಯಿಂದ ಸಂಗ್ರಹಿಸ ಲಾದ ಅಕ್ಕಿ, ಗೋಧಿ, ಬೇಳೆ, ಸಕ್ಕರೆ ಮತ್ತಿ ತರೆ ಅಗತ್ಯ ವಸ್ತುಗಳನ್ನು ಕಿಟ್‍ಗಳಿಗೆ ತುಂಬಿ ಪ್ಯಾಕಿಂಗ್ ಮಾಡಿದ್ದಾರೆ. ಈವರೆಗೆ 4000ಕ್ಕೂ ಹೆಚ್ಚು ಕಿಟ್‍ಗಳನ್ನು ಸಿದ್ಧಪಡಿಸಿ ದ್ದಾರೆ ಎಂದು ಪಾಲಿಕೆ ಆಯುಕ್ತ ಗುರು ದತ್ ಹೆಗಡೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಿರಾಶ್ರಿತ ಕೇಂದ್ರ ನಿರ್ವಹಣೆ: ಪಾಲಿಕೆ ತೆರೆದಿರುವ ನಿರಾಶ್ರಿತರ ತಾತ್ಕಾಲಿಕ ಆಶ್ರಯ ಕೇಂದ್ರಗಳಲ್ಲಿ ಸ್ವಚ್ಛತೆ, ನಿರಾಶ್ರಿತರ ಆರೈಕೆ, ಊಟ ತಯಾರಿಕೆ ಮತ್ತು ವಿತರಣೆ ಕೆಲಸ ವನ್ನೂ ಸ್ವಯಂಸೇವಕರು ಮಾಡುತ್ತಿದ್ದು, ನಿರಾಶ್ರಿತರಿಗೆ ಯೋಗಾಭ್ಯಾಸ ಕಲಿಸುತ್ತಿದ್ದಾರೆ. ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿದ್ದವರಿಗೆ ಭಾನುವಾರವೂ ಅಗತ್ಯ ವಸ್ತುಗಳನ್ನು ತಲುಪಿಸುವ ಕೆಲಸ ಮಾಡಿದ್ದೇವೆ. 2 ವಾಟ್ಸ್ ಆಪ್ ಗ್ರೂಪ್ ಮಾಡಿಕೊಂಡು ಮಾಹಿತಿ ಹಂಚಿಕೊಂಡು ನೊಂದವರ ಕಷ್ಟಕ್ಕೆ ಸ್ಪಂದಿಸಿ ದ್ದೇವೆ. ಔಷಧಿಗಳನ್ನು ಮೈಸೂರು ನಗರ ವಲ್ಲದೆ ನಂಜನಗೂಡು, ಮಂಡ್ಯ, ತುಮ ಕೂರು ಮತ್ತಿತರೆಡೆಗೂ ತಲುಪಿಸಿದ್ದೇವೆ. ನಮ್ಮ ವಾಹನಗಳ ಜತೆಗೆ ಪಾಲಿಕೆ ವಾಹನ ಗಳನ್ನೂ ಬಳಸಿಕೊಳ್ಳಲಾಗಿದೆ. ನಗರಪಾಲಿಕೆ ಸೂಚನೆಯಂತೆ ಸೇವೆ ಮಾಡಿದ್ದೇವೆ ಎಂದು ಸ್ವಯಂ ಸೇವಕಿ ನಿಷಿತಾ ಕೃಷ್ಣಮೂರ್ತಿ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಶ್ಲಾಘನೀಯ: ಲಾಕ್‍ಡೌನ್‍ನಿಂದಾಗಿ ಕಷ್ಟದಲ್ಲಿದ್ದವರಿಗೆ ಸ್ಪಂದಿಸಲು ಪಾಲಿಕೆ ಕೈಗೊಂಡ ಹಲವು ಕಾರ್ಯಚಟುವಟಿಕೆ ಗಳಲ್ಲಿ ಸ್ವಯಂಸೇವಕರನ್ನು ಸಕ್ರಿಯವಾಗಿ ಬಳಸಿಕೊಳ್ಳಲಾಗಿದೆ. ನಿರಾಶ್ರಿತರ ಕೇಂದ್ರ ಗಳು, ಸಾಂತ್ವನ ಕೇಂದ್ರಗಳು, ವೃದ್ಧಾಶ್ರಮ ಗಳಲ್ಲೂ ಸ್ವಯಂ ಸೇವಕರ ಸೇವೆ ಸಲ್ಲಿಸಿ ದ್ದಾರೆ. ಕೊರೊನಾ ಸೋಂಕಿನ ಸಂದಿಗ್ದ ಸಂದರ್ಭದಲ್ಲಿ ಮೈಸೂರಿನ ಈ ಸ್ವಯಂ ಸೇವಕರು ನೀಡಿದ ಸೇವೆ ಶ್ಲಾಘನೀಯ. ಕೊಡಗಿನ ಪ್ರವಾಹ ಸಂದರ್ಭದಲ್ಲೂ ಸ್ವಯಂ ಸೇವೆಕರ ಸೇವೆ, ಕೊಡುಗೆ ಸ್ಮರಣಾರ್ಹ ಎಂದು ಗುರುದತ್ ಹೆಗಡೆ ಪ್ರಶಂಸಿಸಿದರು.

ಸ್ವಯಂಸೇವಕರ ಸೇವೆ ಮುಂದೆಯೂ ಬೇಕಾಗಿದೆ. ಸದ್ಯಕ್ಕೆ ಮೈಸೂರಿನಲ್ಲಿ ಕೊರೊನಾ ಸೋಂಕು ಕಡಿಮೆಯಾಗುತ್ತಿರಬಹುದು. ಆದರೆ, ಈಗಂತೂ ಎಲ್ಲರೂ ಬಹಳ ಎಚ್ಚರಿಕೆ ಯಿಂದ ಇರಬೇಕಿದೆ. ಲಾಕ್‍ಡೌನ್ ಸಡಿಲ ವಾಗಿದೆ ಎಂದು ಬೇಜವಾಬ್ದಾರಿಯಿಂದ ವರ್ತಿಸಬಾರದು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ತಪ್ಪದೇ ಮಾಸ್ಕ್ ಬಳಸ ಬೇಕು ಎಂದು ಹೆಗಡೆ ಸಲಹೆ ನೀಡಿದರು.

Translate »