ಮೈಸೂರಿನ ಐದು ನಿರಾಶ್ರಿತ ಕೇಂದ್ರಗಳಿಂದ 93 ಮಂದಿ ಸ್ವಸ್ಥಳಕ್ಕೆ, ಕೆಲವರು ಕೆಲಸಕ್ಕೆ ವಾಪಸ್
ಮೈಸೂರು

ಮೈಸೂರಿನ ಐದು ನಿರಾಶ್ರಿತ ಕೇಂದ್ರಗಳಿಂದ 93 ಮಂದಿ ಸ್ವಸ್ಥಳಕ್ಕೆ, ಕೆಲವರು ಕೆಲಸಕ್ಕೆ ವಾಪಸ್

May 11, 2020

ಮೈಸೂರು, ಮೇ 10(ಎಂಕೆ)- ಕೊರೊನೊ ಹರಡುವಿಕೆ ತಡೆಯಲು ದೇಶದಲ್ಲಿ ದಿಢೀರ್ ಲಾಕ್‍ಡೌನ್ ಜಾರಿಯಾಗಿದ್ದರಿಂದ ಕಷ್ಟಕ್ಕೆ ಸಿಲುಕಿ ಮೈಸೂರಿನ ನಿರಾಶ್ರಿತರ ತಾತ್ಕಾಲಿಕ ಆಶ್ರಯ ಕೇಂದ್ರಗಳಲ್ಲಿ ಉಳಿದು ಕೊಂಡಿದ್ದ ನೂರಾರು ಜನರು, ಲಾಕ್‍ಡೌನ್ ಸಡಿಲವಾಗು ತ್ತಿದ್ದಂತೆ ತಮ್ಮ ಊರುಗಳಿಗೆ ಹೋದರೆ ಕೆಲವರು ಉದ್ಯೋಗಕ್ಕೆ ಮರಳುತ್ತಿದ್ದಾರೆ.

ಮೈಸೂರು ಮಹಾನಗರಪಾಲಿಕೆಯಿಂದ ನಗರದ ವಿವಿಧೆಡೆ ನಿರಾಶ್ರಿತರ ಕೇಂದ್ರಗಳನ್ನು ತೆರೆಯಲಾಗಿತ್ತು. ನಂಜರಾಜ ಬಹದ್ದೂರ್ ಕಲ್ಯಾಣ ಮಂಟಪದಲ್ಲಿದ್ದ 93 ಮಂದಿ ನಿರಾ ಶ್ರಿತರಲ್ಲಿ 32 ಮಂದಿ, ನೇರಂಬಳ್ಳಿ ಕಲ್ಯಾಣ ಮಂಟಪದಿಂದ 8 ಮಂದಿ, ನಿತ್ಯೋತ್ಸವ ಕಲ್ಯಾಣ ಮಂಟಪದಿಂದ 6 ಮಂದಿ, ಹೊಯ್ಸಳ ಕರ್ನಾಟಕ ಸಂಘದ ಭವನದಿಂದ 39 ಮತ್ತು ಯೂತ್ ಹಾಸ್ಟೆಲ್‍ನಿಂದ 8 ನಿರಾ ಶ್ರಿತರು ಉದ್ಯೋಗಕ್ಕೆ ಹಾಗೂ ಕೆಲವರು ತಮ್ಮ ಊರಿಗೆ ಮರಳಿದರು.

ಲಾಕ್‍ಡೌನ್ ಮುಕ್ತಾಯದೊಳಗೆ ಎಲ್ಲಾ ನಿರಾಶ್ರಿತರನ್ನು ಅವರವರ ಮನೆಗಳಿಗೆ ಮತ್ತು ಉದ್ಯೋಗದ ಸ್ಥಳಗಳಿಗೆ ಕಳುಹಿಸಿ ಕೊಡುವ ಯೋಜನೆ ಹಾಕಿಕೊಳ್ಳಲಾಗಿದೆ. ಈಗಾಗಲೇ ಹಲವಾರು ನಿರಾಶ್ರಿತರನ್ನು ಕಳುಹಿಸಿಕೊಡ ಲಾಗಿದೆ. ಮೇ 17ರೊಳಗೆ ಎಲ್ಲರನ್ನು ನಿರಾ ಶ್ರಿತರ ಕೇಂದ್ರದಿಂದ ಕಳುಹಿಸಲಾಗು ವುದು ಎಂದು ನಗರಪಾಲಿಕೆ ಸಹಾಯಕ ಅಭಿಯಂತರ ಶಿವಪ್ಪ ತಿಳಿಸಿದರು.

ಲಾಕ್‍ಡೌನ್‍ಗೂ ಮೊದಲು ಮಾಡು ತ್ತಿದ್ದ ಕೆಲಸಕ್ಕೆ ಕೆಲವರು ತೆರಳಿದರೆ, ಮತ್ತೆ ಕೆಲವರಿಗೆ ಖಾಯಂ ಉದ್ಯೋಗ ಕಲ್ಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಮೈಸೂರು ಮಹಾನಗರ ಪಾಲಿಕೆ ಮತ್ತು ಕ್ರೆಡಿಟ್-ಐ ಸಂಸ್ಥೆ ಈ ನಿಟ್ಟಿನಲ್ಲಿ ಹಲವು ಖಾಸಗಿ ಕಂಪನಿಗಳ ಸಂಪರ್ಕ ಮಾಡುತ್ತಿವೆ.

ನಿರಾಶ್ರಿತರ ಕೇಂದ್ರದಲ್ಲಿ ವಯಸ್ಸಾ ದವರು, ವಿಶೇಷಚೇತನರಿದ್ದಾರೆ. ಅವರನ್ನು ಸೂಕ್ತ ಸ್ಥಳಗಳಿಗೆ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ. ಲಾಕ್‍ಡೌನ್ ಮುಗಿಯು ವಷ್ಟರಲ್ಲಿ ನಿರಾಶ್ರಿತ ಕೇಂದ್ರದಲ್ಲಿರುವ ಎಲ್ಲ ರಿಗೂ ಕೆಲಸದ ಜೊತೆಗೆ ಸೂಕ್ತ ಆಶ್ರ ಯವೂ ದೊರಕುವಂತಹ ಸ್ಥಳಗಳನ್ನು ಗುರು ತಿಸಿ, ಕಳುಹಿಸಿಕೊಡಲಾಗುವುದು ಎಂದು ಕ್ರೆಡಿಟ್ ಐ ಸಂಸ್ಥೆ ಹೇಳಿದೆ.

ನಿರಾಶ್ರಿತರು ಕುಳಿತಲ್ಲೇ ಪೇಪರ್ ಕವರ್ಸ್ ತಯಾರಿಸುವ ಮೂಲಕ ಹಣ ಸಂಪಾದಿಸಿ ದ್ದಾರೆ. ಈಗಾಗಲೇ 8000ಕ್ಕೂ ಪೇಪರ್ ಕವರ್ಸ್ ತಯಾರಿಸಿ 24 ಸಾವಿರ ರೂ. ಸಂಪಾ ದನೆ ಮಾಡಿದ್ದಾರೆ. ಪೇಪರ್ ಕವರ್ಸ್ ತಯಾರಿಕೆಯಲ್ಲಿ ನಿರಾಶ್ರಿತರಲ್ಲಿಯೇ ಪೈಪೋಟಿ ಶುರುವಾಗಿದ್ದು, ಪ್ರತಿಯೊಬ್ಬರೂ ಈ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಕೇಂದ್ರದಿಂದ ಹೊರ ಹೋಗುವಾಗ ಬರಿಗೈ ಯಲ್ಲಿ ಹೋಗಬಾರದು ಎಂಬ ಉದ್ದೇಶ ದಿಂದ ಅವರಿಂದ ಈ ಕೆಲಸ ಮಾಡಿಸ ಲಾಗುತ್ತಿದೆ. ಜತೆಗೆ ಖಾಯಂ ಉದ್ಯೋಗ ದೊರಕಿಸಿಕೊಡುವ ಪ್ರಯತ್ನವನ್ನೂ ಮಾಡಲಾಗುತ್ತಿದೆ ಎಂದು ಕ್ರೆಡಿಟ್ ಐ ಸಂಸ್ಥೆಯ ಎಂ.ಪಿ.ವರ್ಷ ಹೇಳಿದರು.

Translate »