ವಿವಿಧ ಕ್ಷೇತ್ರಗಳ ಸಾರ್ಥಕ ಸೇವೆ ಜತೆಗೇ ಮಕ್ಕಳ ಪಾಲನೆಯಲ್ಲೂ ಮಾದರಿಯಾದ ಮಾತೆಯರ ಪಾದ ತೊಳೆದು ಸನ್ಮಾನ
ಮೈಸೂರು

ವಿವಿಧ ಕ್ಷೇತ್ರಗಳ ಸಾರ್ಥಕ ಸೇವೆ ಜತೆಗೇ ಮಕ್ಕಳ ಪಾಲನೆಯಲ್ಲೂ ಮಾದರಿಯಾದ ಮಾತೆಯರ ಪಾದ ತೊಳೆದು ಸನ್ಮಾನ

May 11, 2020

ಮೈಸೂರು, ಮೇ 10(ಪಿಎಂ)- `ಅಂತಾ ರಾಷ್ಟ್ರೀಯ ಅಮ್ಮಂದಿರ ದಿನ’ದ ಅಂಗವಾಗಿ ಶಾಸಕ ಎಸ್.ಎ.ರಾಮದಾಸ್ ಅವರು ವಿವಿಧ ಕ್ಷೇತ್ರಗಳಲ್ಲಿ ಸಾರ್ಥಕ ಸೇವೆ ಸಲ್ಲಿಸುತ್ತಲೇ ತಮ್ಮ ಮಕ್ಕಳ ಪಾಲನೆಯಲ್ಲೂ ಮಾದರಿಯಾದ ಮಾತೆಯರ ಪಾದ ತೊಳೆದು ಭಾನುವಾರ ನಗರದಲ್ಲಿ ಸನ್ಮಾನಿಸಿದರು.

ಮೈಸೂರಿನ ಕಾಡಾ ಕಚೇರಿ ಆವರಣ ನಡೆದ ಸರಳ ಸಮಾರಂಭದಲ್ಲಿ ವೈದ್ಯೆ ಡಾ.ಇಂದಿರಾ ನರಸಿಂಹನ್, ಸಂಗೀತ ವಿದುಷಿ ಸಾವಿತ್ರಿ ಪ್ರಭಾಕರ್, ಸಣ್ಣ ಹೋಟೆಲ್ ಮಾಲೀಕರಾದ ಅನಂತಲಕ್ಷ್ಮಿ ಹಾಗೂ `ಮನೆಗೆಲಸ’ ವೃತ್ತಿ ಮಾಡುತ್ತಲೇ ಇಬ್ಬರು ವಿಶೇಷ ಮಕ್ಕಳ ಪಾಲನೆಯನ್ನೂ ಸಮರ್ಥವಾಗಿ ನಡೆಸುತ್ತಿರುವ ಸವಿತಾ ಅವರ ಪಾದ ತೊಳೆದು ಪೂಜೆ ಮಾಡಿ ಗೌರವ ಸಲ್ಲಿಸಿದರು.

ಬಳಿಕ ಮಾತನಾಡಿದ ಶಾಸಕರು, `ಕಷ್ಟ ಕಾಲದಲ್ಲಿ ತಾಯಿ ಗುರುವಾಗಿ ಸಲಹೆ ನೀಡುತ್ತಾರೆ. ನನ್ನ ಜೀವನ ದಲ್ಲಿ ರಾಜಕಾರಣ ಸಾಕು ಎಂಬ ನಿರ್ಧಾರ ತೆಗೆದು ಕೊಂಡಿದ್ದ ಸಂದರ್ಭದಲ್ಲಿ ನನ್ನ ಅಮ್ಮನೇ ನನಗೆ ಸ್ಫೂರ್ತಿ ತುಂಬಿದರು. ನಿಂದಿಸುವವರಿಂದಲೇ ಸನ್ಮಾನಿತರಾಗುವಂತೆ ಬೆಳೆದು ನಿಲ್ಲಬೇಕು ಎಂದು ಉತ್ಸಾಹ ತುಂಬಿದರು’ ಎಂದು ನೆನಪಿಗೆ ಜಾರಿದರು.

ಸನ್ಮಾನಿತರಾದ ಸಾವಿತ್ರಿ ಪ್ರಭಾಕರ್ ಸಂಗೀತ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಮೈಸೂರಲ್ಲಿ ಸಾವಿರಾರು ಜನರಿಗೆ ಸಂಗೀತ ಪಾಠ ಹೇಳಿಕೊಟ್ಟಿದ್ದಾರೆ. ಅಲ್ಲದೇ ತನ್ನ ವಿದ್ಯಾವಂತ ಪುತ್ರನನ್ನು ಪ್ರಗತಿಪರ ರೈತನಾಗಿ ಜೀವನ ನಡೆಸಲು ಸ್ಫೂರ್ತಿಯಾಗಿ ದ್ದಾರೆ. ಅಮೆರಿಕದಲ್ಲಿರÀುವ ಇವರ ಪುತ್ರಿ ಭರತನಾಟ್ಯ ಹೇಳಿ ಕೊಡುವ ಮೂಲಕ ಭಾರತೀಯ ಕಲೆಯನ್ನು ಹೊರದೇಶದಲ್ಲಿ ಪಸರಿಸುವ ಕಾರ್ಯದಲ್ಲಿ ನಿರತ ರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅನಂತಲಕ್ಷ್ಮಿ ಅವರು 36 ವರ್ಷಗಳಿಂದ ಶ್ರೀರಾಂ ಪುರದಲ್ಲಿ ಸಣ್ಣ ಹೋಟೆಲ್ ನಡೆಸಿ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಇವರ 3 ಮಕ್ಕಳ ಪೈಕಿ ಒಬ್ಬರು ಮೆಕಾನಿಕಲ್ ಇಂಜಿನಿಯರ್, ಮತ್ತೊಬ್ಬರು ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಪುತ್ರಿ ಎಂಎಸ್‍ಸಿ ಪದವೀಧರೆ. ಮೂರೂ ಮಕ್ಕಳ ಜೀವನ ರೂಪಿಸು ವಲ್ಲಿ ಅನಂತಲಕ್ಷ್ಮಿ ಅವರ ಪಾತ್ರ ಹಿರಿದು ಎಂದು ಪ್ರಸಂ ಶಿಸಿದರು. ಡಾ.ಇಂದಿರಾ ನರಸಿಂಹನ್ 48 ವರ್ಷ ಗಳಿಂದ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ. ಸಾವಿರಾರು ಬಡ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾ ತಾಯಿಯಂತೆಯೇ ನೋಡಿಕೊಂಡಿದ್ದಾರೆ. ಇವರ ಪುತ್ರ ಸಾಫ್ಟ್‍ವೇರ್ ಇಂಜಿನಿಯರ್ ಆಗಿ ಉನ್ನತ ಸ್ಥಾನದಲ್ಲಿದ್ದಾರೆ. ಸವಿತಾ ಅವರು ಜೀವನ ನಿರ್ವ ಹಣೆಗೆ ಮನೆಗೆಲಸ ಮಾಡುತ್ತಿದ್ದು, ಜತೆಗೆ ಇಬ್ಬರು ವಿಶೇಷಚೇತನ ಮಕ್ಕಳ ಪಾಲನೆಯನ್ನೂ ಸಮರ್ಥ ವಾಗಿ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಬಿಜೆಪಿ ಕೆಆರ್ ಕ್ಷೇತ್ರದ ಅಧ್ಯಕ್ಷ ಎಂ.ವಡಿವೇಲು, ಬಿಜೆಪಿ ಮುಖಂಡರಾದ ವಿದ್ಯಾ ಅರಸ್, ಎಂ.ಆರ್. ಬಾಲ ಕೃಷ್ಣ, ನೂರ್ ಫಾತಿಮಾ, ಓಂಶ್ರೀನಿವಾಸ್, ಜೆ.ನಾಗೇಂದ್ರ ಕುಮಾರ್, ಸಂತೋಷ್ (ಶಂಭು), ಶಿವಪ್ಪ, ಆರ್.ಅನ್ನ ಪೂರ್ಣ, ರೇವತಿ, ವಿ.ಎನ್.ಕೃಷ್ಣ (ಕಿಟ್ಟಿ), ಹೇಮಂತ್ ಕುಮಾರ್, ಎಂ.ವಿಜಯ್ ನಾಯಕ್, ಗಿರೀಶ್, ನಾಗರತ್ನ ಗೌಡ, ಸುವರ್ಣ ಚಂದ್ರು, ಜಯಂತಿ, ರೇಣುಕಾ, ಭಾಗ್ಯ, ಮೀನಾಕ್ಷಿ, ಭ್ರಮರಾಂಭ, ಶಾಂತ, ಮುರುಳಿ, ಆದಿ, ಅಕ್ಷಯ್, ಮಧು, ಮುರಳಿ ಮತ್ತಿತರರಿದ್ದರು.

Translate »