ವನ್ಯಜೀವಿ ನಿಯಂತ್ರಣಕ್ಕೆ ವಿಶೇಷ ಕಾರ್ಯಪಡೆ ರಚನೆ
ಮೈಸೂರು

ವನ್ಯಜೀವಿ ನಿಯಂತ್ರಣಕ್ಕೆ ವಿಶೇಷ ಕಾರ್ಯಪಡೆ ರಚನೆ

January 28, 2023

ಮೈಸೂರು,ಜ.27(ಆರ್‍ಕೆ)-ವನ್ಯಜೀವಿ-ಮಾನವ ಸಂಘರ್ಷ ತಡೆಗೆ ಸ್ಪೆಷಲ್ ಟಾಸ್ಕ್ ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊ ಳ್ಳಲು ಮೈಸೂರಿಗೆ ಆಗಮಿಸಿದ್ದ ಅವರು, ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದರು. ಮೈಸೂರಿನಲ್ಲಿ ಟಾಸ್ಕ್‍ಫೋರ್ಸ್ ತಂಡವು ಚಿರತೆಯನ್ನು ಸೆರೆಹಿಡಿದಿದೆ. ಹಾಸನ ಸೇರಿದಂತೆ ಬೇರೆ ಜಿಲ್ಲೆಗಳಲ್ಲೂ ಈ ಸಮಸ್ಯೆ ಇರುವುದರಿಂದ ಟಾಸ್ಕ್‍ಪೋರ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಲಿ ದ್ದಾರೆ ಎಂದು ತಿಳಿಸಿದರು.

ಯಾವುದೋ ಒಂದು ಸ್ಥಳದಲ್ಲಿ ಚಿರತೆ ಹಿಡಿದ ಮಾತ್ರಕ್ಕೆ ಟಾಸ್ಕ್‍ಫೋರ್ಸ್ ವಿಸರ್ಜಿಸಲಾಗದು. ಮೈಸೂರು ಭಾಗದಲ್ಲಿ ಆನೆ, ಚಿರತೆ ಉಪಟಳ ಹೆಚ್ಚಾಗಿದೆ. ಆದ್ದರಿಂದ ತಂಡಗಳು ನಿರಂತರವಾಗಿ ಸಕ್ರಿಯವಾಗಿ ರುತ್ತವೆ. ಅದಕ್ಕೆ ಬೇಕಾಗಿರುವ ಸಲಕರಣೆ ಗಳು, ವಾಹನ ಹಾಗೂ ಅನುದಾನವನ್ನೂ ನೀಡುತ್ತೇವೆ. ಈ ಬಗ್ಗೆ ಸಭೆ ನಡೆಸಿ ಚಿರತೆ ದಾಳಿ ತಡೆಯುವಂತೆ ಅರಣ್ಯಾಧಿಕಾರಿ ಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಿಳುವಳಿಕೆ ನೀಡಬೇಕು. ರಾತ್ರಿ ವೇಳೆ ಎಚ್ಚರ ದಿಂದ ಓಡಾಡಿ ಏನು ಮಾಡಬೇಕು, ಏನು ಮಾಡಬಾರದೆಂದು ತಿಳಿಹೇಳಿ ಹಾಗೂ ಫಾರೆಸ್ಟ್ ಗಾರ್ಡ್‍ಗಳಿಗೆ ತರಬೇತಿ ನೀಡಿ ಹಾಗೆಯೇ ಪ್ರಾಣಿಗಳ ಚಲನ-ವಲನ, ವರ್ತನೆ ಬಗ್ಗೆ ಜನರಿಗೆ ಮನವರಿಗೆ ಮಾಡಿಕೊಟ್ಟು ಗುಂಪಿನಲ್ಲಿರುವಾಗ ಮತ್ತು ವ್ಯಕ್ತಿಗತವಾಗಿ ಪ್ರಾಣಿಗಳು ಕಂಡಾಗ ಯಾವ ರೀತಿ ನಡೆದುಕೊಳ್ಳಬೇಕೆಂಬುದರ ಬಗ್ಗೆ ಜನರಿಗೆ ಮಾಹಿತಿ ನೀಡುವಂತೆ ಹೇಳಿ ದ್ದೇನೆ ಎಂದು ಮುಖ್ಯಮಂತ್ರಿಗಳು ನುಡಿದರು.

ಜನಪರ ಬಜೆಟ್: ಕಳೆದ ವರ್ಷದಂತೆ ಈ ಬಾರಿಯೂ ನಾವು ಜನಪರ ಬಜೆಟ್ ನೀಡುತ್ತೇವೆ ಎಂದು ಬಸವರಾಜ ಬೊಮ್ಮಾಯಿ ನುಡಿದರು. ಚುನಾವಣೆಗೆ ವಿಶೇಷ ಬಜೆಟ್ ಎನ್ನಲಾಗದು. ಜನರಿಗೆ ಬೇಕಾದ ಅಂಶ ಗಳನ್ನೊಳಗೊಂಡ ಆಯ-ವ್ಯಯ ಮಂಡಿ ಸಲಾಗುವುದು. ಅದರಲ್ಲಿ ಮೈಸೂರಿನ ಸಮಗ್ರ ಅಭಿವೃದ್ಧಿಗೂ ಆದ್ಯತೆ ಇರುತ್ತದೆ. ಒಟ್ಟಾರೆ ರಾಜ್ಯದ ಜನಪರವಾದ ಬಜೆಟ್ ಮಂಡನೆ ಮಾಡುತ್ತೇವೆ ಎಂದು ಅವರು ನುಡಿದರು.

ವಿರೋಧವಿಲ್ಲ: ಮಂಡ್ಯ ಉಸ್ತುವಾರಿ ಸಚಿವರಾಗಿ ಆರ್.ಅಶೋಕ್ ಅವರನ್ನು ನೇಮಿಸಿರುವುದಕ್ಕೆ ಯಾವ ವಿರೋಧವೂ ಇಲ್ಲ. ಎಲ್ಲರೂ ಶುಭ ಕೋರಿ ಒಳ್ಳೆ ಕೆಲಸ ಮಾಡಿ ಎಂದು ಹಾರೈಸುತ್ತಿದ್ದಾರೆ. ಬಿಜೆಪಿ ಯಲ್ಲಿ ಯಾರಿಗೂ ಅಸಮಾಧಾನವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದು ಕೊಂಡು ಅಶೋಕ್ ಒಳ್ಳೆಯ ಕೆಲಸ ಮಾಡು ತ್ತಾರೆಂಬ ನಂಬಿಕೆ ಇದೆ ಎಂದರು.

ಮುಸ್ಲಿಮರ ಓಲೈಕೆಯಲ್ಲ: ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದಲ್ಲಿ ಎಲ್ಲಾ ಸಮುದಾಯದ ಹಿತ ಕಾಯಬೇಕು ಎಂದಾಕ್ಷಣ ಮುಸ್ಲಿಮರ ಓಲೈಕೆ ಎನ್ನಲಾ ಗದು. ಎಲ್ಲ ವರ್ಗದ ಹಿತ ಕಾಯುವುದು ಅವರ ಜವಾಬ್ದಾರಿ ಎಂದ ಮುಖ್ಯಮಂತ್ರಿ ಗಳು, ಸಿದ್ದರಾಮಯ್ಯರ ‘ಭಾಗ್ಯ’ಗಳಲ್ಲಿ ಶಾದಿ ಭಾಗ್ಯದಂತಹ ಹಲವು ಯೋಜನೆ ಗಳು ಅವರಿಗೇ ಮುಳುವಾಗಿವೆ ಎಂದು ಪ್ರಶ್ನೆಯೊಂದಕ್ಕೆ ವ್ಯಂಗ್ಯವಾಡಿದರು.

Translate »